Site icon Vistara News

Team India : ವಿಂಡೀಸ್​ ಪ್ರವಾಸಕ್ಕೆ ಬಿಸಿಸಿಐನಿಂದ ಹೊಸ ತಂಡ; ಯಾರೆಲ್ಲ ಇನ್​, ಯಾರೆಲ್ಲ ಔಟ್​?

Yashaswi Jaiswal

#image_title

ಮುಂಬಯಿ: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಮುಕ್ತಾಯದ ಬಳಿಕ ಭಾರತ ತಂಡದ ಆಟಗಾರರು (Team India) ವಿಶ್ರಾಂತಿಯಲ್ಲಿದ್ದಾರೆ. ಅವರಿಗೆ ಬಹುತೇಕ ಒಂದು ತಿಂಗಳ ಕಾಲ ವಿಶ್ರಾಂತಿ ಸಿಗಲಿದೆ. ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಎರಡು ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 5 ಟಿ 20 ಪಂದ್ಯಗಳನ್ನು ಇದು ಒಳಗೊಂಡಿದೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಸೋಲಿನ ಆಘಾತಕ್ಕೆ ಒಳಗಾಗಿರುವ ಬಿಸಿಸಿಐ ಈ ಬಾರಿ ವೆಸ್ಟ್​ ಇಂಡೀಸ್​ಗೆ ತಂಡವನ್ನು ಆಯ್ಕೆ ಮಾಡುವ ವೇಳೆ ಹೆಚ್ಚು ಚಿಂತನೆ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಕೆಲವರು ಸ್ಥಾನ ಕಳೆದುಕೊಂಡರೆ ಇನ್ನು ಕೆಲವು ಹೊಸ ಮುಖಗಳು ಸೇರ್ಪಡೆಯಾಗಲಿವೆ ಎನ್ನಲಾಗಿದೆ.

ಪಿಟಿಐ ವರದಿಯ ಪ್ರಕಾರ ಶಿವ ಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿಯು ತಂಡವನ್ನು ರಚನೆ ಮಾಡುವ ವೇಳೆ ಹಿರಿಯ ಆಟಗಾರರಿಗೆ ಕೊಕ್​ ಕೊಡುವ ನಿರೀಕ್ಷೆಯಿದ್ದು, ಯುವ ಆಟಗಾರರಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ. ಉಮೇಶ್​ ಯಾದವ್, ಚೇತೇಶ್ವರ್ ಪೂಜಾರ ಸ್ಥಾನ ಕಳೆದುಕೊಳ್ಳಲಿರುವ ಪ್ರಮುಖ ಆಟಗಾರರು ಎನಿಸಿಕೊಂಡಿದ್ದಾರೆ. ರಿಂಕು ಸಿಂಗ್​ ಹಾಗೂ ಯಶಸ್ವಿ ಜೈಸ್ವಾಲ್​ ಅವಕಾಶ ಪಡೆಯಲಿರುವ ಆಟಗಾರರು. ಯುವ ಆಟಗಾರರು ಟಿ20 ತಂಡಕ್ಕೆ ಸೇರ್ಪಡೆಗೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಹಿರಿಯ ಆಟಗಾರರು ಟೆಸ್ಟ್​ ತಂಡದಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ರಣಜಿ, ಇರಾನಿ ಮತ್ತು ದುಲೀಪ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದಾರೆ. ಅವರ ಮಾನಸಿಕ ಸ್ಥೈರ್ಯ ಕೂಡ ಬಲವಾಗಿದೆ. ಸಾಕಷ್ಟು ಅವಕಾಶಗಳನ್ನು ನೀಡಿದ ಬಳಿಕ ಅವರನ್ನು ಸಜ್ಜುಗೊಳಿಸಬಹುದು” ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾಗ ದೇವಾಂಗ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ರಿಂಕು, ಜಿತೇಶ್​ಗೆ ಅವಕಾಶ

ವೆಸ್ಟ್ ಇಂಡೀಸ್ ತಂಡ 5 ಟಿ 20 ಪಂದ್ಯಗಳಿಗೆ ತಂಡ ರಚನೆ ಮಾಡುವಾಗ ಐಪಿಎಲ್ 2023ರ ಪ್ರದರ್ಶನವನ್ನು ಪರಿಗಣಿಸಬಹುದು. ಹೀಗಾಗಿ ಕೆಕೆಆರ್​ ಪರ ಉತ್ತಮ ಪ್ರದರ್ಶನ ನೀಡಿದ್ದ ರಿಂಕು ಸಿಂಗ್ ಮತ್ತು ಪಂಜಾಬ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಿತೇಶ್ ಶರ್ಮಾ ಅವರಂತಹ ಆಟಗಾರರು ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂದುವರಿಯಲಿದ್ದು, ಋತುರಾಜ್ ಗಾಯಕ್ವಾಡ್ ಅವರ ಪುನರಾಗಮನದ ಸಾಧ್ಯತೆಗಳಿವೆ. ಏತನ್ಮಧ್ಯೆ, ಐಪಿಎಲ್ 2023 ಅನ್ನು 27 ವಿಕೆಟ್​​ಗಳೊಂದಿಗೆ ಮುಗಿಸಿದ ಮೋಹಿತ್ ಶರ್ಮಾ ಅವಕಾಶ ಪಡೆಯಬಹದು.

ಇದನ್ನೂ ಓದಿ : WTC Final 2023 : ಫೈನಲ್​ನಲ್ಲಿ ಸೋತ ಬಳಿಕವೂ ದೊಡ್ಡ ಮೊತ್ತ ಜೇಬಿಗಿಳಿಸಿದ ರೋಹಿತ್​ ಶರ್ಮಾ ಬಳಗ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಚುಟುಕು ಮಾದರಿಯಿಂದ ಹೊರಗಿಡುವ ಸಾಧ್ಯತೆಗಳಿದ್ದ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​​ಗೆ ಏಕ ದಿನ ವಿಶ್ವ ಕಪ್​ ಹಿನ್ನಲೆಯಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.

ರೋಹಿತ್ ಟೆಸ್ಟ್ ಭವಿಷ್ಯ ಏನು?

ತೊಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೆ.ಎಲ್.ರಾಹುಲ್ ಪುನರಾಗಮನದ ದಿನಾಂಕವನ್ನು ಗೊತ್ತಾಗಿಲ್ಲ. ಆದರೆ, ಅವರ ಸ್ಥಾನ ಎಲ್ಲೂ ಖಚಿತವಲ್ಲ. ಅಲ್ಲದೆ ನಾಯಕತ್ವಕ್ಕೂ ಸ್ಪರ್ಧೆಯಿಲ್ಲ. ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಫಿಟ್ನೆಸ್ ಪರಿಗಣಿಸಿ ಅವರನ್ನು ಮುಂದಿನ ಎರಡು ವರ್ಷಗಳ ತನಕ ಟೆಸ್ಟ್​ ತಂಡದಲ್ಲಿ ಆಡಿಸಲು ಆಯ್ಕೆಗಾರರು ಮನಸ್ಸು ಮಾಡುವರೇ ಎಂಬುದು ಸದ್ಯದ ಪ್ರಶ್ನೆ.

Exit mobile version