ಮುಂಬಯಿ : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದ ತಾಣ ಬದಲಾಗಿದೆ. ಧರ್ಮಶಾಲಾದ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಬೇಕಾದ ಈ ಹಣಾಹಣಿ ಇಂದೋರ್ಗೆ ವರ್ಗಾವಣೆಯಾಗಿದೆ. ಧರ್ಮಶಾಲಾ ಕ್ರಿಕೆಟ್ ಮೈದಾನ ಟೆಸ್ಟ್ ಪಂದ್ಯ ನಡೆಸಲು ಸಜ್ಜಾಗಿಲ್ಲ ಎಂದು ಬಿಸಿಸಿಐ ಪಿಚ್ ಪರಿಣತರ ತಂಡದ ವರದಿ ಪ್ರಕಾರ ಕ್ರೀಡಾಂಗಣ ಬದಲಿಸಲಾಗಿದೆ.
ಸ್ಟೇಡಿಯಮ್ ಬದಲಾವಣೆ ಕುರಿತು ಬಿಸಿಸಿಐ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಮಾರ್ಚ್ 1ರಿಂದ 5ರವರೆಗೆ ಧರ್ಮಶಾಲಾದ ಎಚ್ಪಿಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್ ಹಣಾಹಣಿ ಇಂದೋರ್ನ ಹೋಲ್ಕರ್ ಸ್ಟೇಡಿಯಮ್ಗೆ ಸ್ಥಳಾಂತರಗೊಂಡಿದೆ ಎಂದು ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ಚಳಿಯಿದ್ದು, ಮೈದಾನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆದಿಲ್ಲ. ಹೀಗಾಗಿ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಸೂಕ್ತವಾಗಿಲ್ಲ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಮೈದಾನದಲ್ಲಿ ಹುಲ್ಲು ಬೆಳೆಸುವುದಕ್ಕೆ ಸ್ಥಳೀಯ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದಾಗ್ಯೂ ಅದರು ಫಲ ಕೊಡಲಿಲ್ಲ. ಹೀಗಾಗಿ ಮೈದಾನದ ಅಲ್ಲಲ್ಲಿ ಕಿತ್ತು ಹೋದಂತೆ ಕಾಣುತ್ತಿದೆ. ಇದರಿಂದಾಗಿ ಪಂದ್ಯ ನಡೆಸುವುದು ಕಷ್ಟ ಎಂಬುದಾಗಿ ಬಿಸಿಸಿಐ ಹೇಳಿದೆ.
ಇದನ್ನೂ ಓದಿ : Border-Gavaskar Trophy : ಮೂರನೇ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ನಡೆಯುವುದಿಲ್ಲ; ಬಿಸಿಸಿಐ ಮಾಹಿತಿ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಪಂದ್ಯ ನಾಗ್ಪುರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದಿತ್ತು. ಅದರಲ್ಲಿ ಭಾರತ ಜಯ ಸಾಧಿಸಿದೆ. ಎರಡನೇ ಪಂದ್ಯ ನವದೆಹಲಿಯಲ್ಲಿ ಅಯೋಜನೆಗೊಂಡಿದೆ. ಮೂರನೇ ಪಂದ್ಯ ಇದೀಗ ಇಂದೋರ್ನಲ್ಲಿ ನಡೆಯಲಿದೆ.