Site icon Vistara News

Moto GP : ಜಿಯೊ ಹವಾ; ಜಗತ್ತಿನ ಅತಿ ದೊಡ್ಡ ಮೋಟಾರ್​ಸೈಕಲ್​ ರೇಸ್​ ಉಚಿತ ಪ್ರಸಾರ

The world's biggest motorcycle race is broadcast free on Jio Cinema

#image_title

ಮುಂಬಯಿ: ಫುಟ್ಬಾಲ್​ ವಿಶ್ವಕಪ್​, ಮಹಿಳೆಯರ ಪ್ರೀಮಿಯರ್​ ಲೀಗ್ ಸೇರಿದಂತೆ ಜಾಗತಿಕ ಕ್ರೀಡಾಕೂಟಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕೊಟ್ಟ ಜಿಯೊ ಸಿನಿಮಾ ಇದೇ ಹಾದಿಯಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ವಿಶ್ವದ ಅತ್ಯಂತ ಥ್ರಿಲ್ಲಿಂಗ್​ ಹಾಗೂ ಜನಪ್ರಿಯ ಕ್ರೀಡೆಯಾಗಿರುವ ಮೋಟಾರ್​ಸೈಕಲ್​ ರೇಸ್​ ಮೊಟೊ ಜಿಪಿಯನ್ನೂ (Moto GP) ಭಾರತದಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ. ವಯಾಕಾಮ್​ 18 ಸಂಸ್ಥೆಯ ಮೂಲಕ ನೇರ ಪ್ರಸಾರದ ಹಕ್ಕನ್ನು ತನ್ನದಾಗಿಸಿಕೊಂಡಿದ್ದು, ವರ್ಷವಿಡೀ ಜಗತ್ತಿನ ನಾನಾ ಕಡೆ ನಡೆಯುವ ಮೋಟೊ ಜಿಪಿ ರೇಸ್​ ಅನ್ನು ಉಚಿತವಾಗಿ ಭಾರತದ ಗ್ರಾಹಕರು ವೀಕ್ಷಿಸಬಹುದಾಗಿದೆ. ಈ ರೇಸ್​​ನಲ್ಲಿ ವಿಶ್ವದ ಚಾಂಪಿಯನ್​ ರೇಸರ್​ಗಳು ಪಾಲ್ಗೊಳ್ಳಲಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಇದೇ ಮೊದಲ ಬಾರಿ ಈ ರೇಸ್​ ಭಾರತದಲ್ಲೂ ಆಯೋಜನೆಗೊಂಡಿದ್ದು ಸೆಪ್ಟೆಂಬರ್​ನಲ್ಲಿ ನಡೆಯಲಿದೆ.

ಮೋಟೋ ಜಿಪಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ವಿಶ್ವದರ್ಜೆಯ, ಉನ್ನತ ನಿರ್ವಹಣೆಯ, ಪ್ರಪಂಚದ ಅತ್ಯುತ್ತಮ ಮೋಟಾರ್​ ಸೈಕಲ್​ ತಯಾರಿಕಾ ಕಂಪನಿಗಳು ಅತಿವೇಗದ ಪ್ರೋಟೋಟೈಪ್​ ಮೋಟಾರ್ ​ಸೈಕಲ್​ಗಳೊಂದಿಗೆ ಭಾಗಿಯಾಗುತ್ತಾರೆ. 2023ರ ಮೋಟೋ ಜಿಪಿ ಋತು ಅತ್ಯಧಿಕ ಸಿರೀಸ್​ಗಳ ದಿನಾಂಕವನ್ನು ಒಳಗೊಂಡಿದ್ದು, 18 ದೇಶಗಳಲ್ಲಿ ಒಟ್ಟು 21 ರೇಸ್​ಗಳು ನಡೆಯಲಿವೆ. ಇದರಲ್ಲಿ ಭಾರತದಲ್ಲಿ ನಡೆಯುವ 14ನೇ ಸುತ್ತಿನ ರೇಸ್​ ಕೂಡ ಒಳಗೊಂಡಿರುತ್ತದೆ. ಈ ಮೂಲಕ ಮೋಟೋ ಜಿಪಿ ಭಾರತದಲ್ಲಿ ಪದಾರ್ಪಣೆಯನ್ನೂ ಮಾಡಲಿದೆ.

‘ಮೋಟೋ ಜಿಪಿ ವಿಶ್ವದಲ್ಲೇ ಅತ್ಯಂತ ಥ್ರಿಲ್ಲಿಂಗ್​ ರೇಸಿಂಗ್ ಸ್ಪರ್ಧೆಯಾಗಿರುತ್ತದೆ. ಸೆಪ್ಟೆಂಬರ್​ನಲ್ಲಿ ಇದರ ಸರಣಿಯು ಭಾರತದಲ್ಲೂ ಪದಾರ್ಪಣೆ ಮಾಡುತ್ತಿರುವುದರಿಂದ ಭಾರತದ ಬೈಕ್​ ರೇಸ್​ ಪ್ರೇಮಿಗಳಿಗೆ ಹಬ್ಬದ ವಾತಾವರಣ ಇರಲಿದೆ.

ವಯಾಕಾಮ್​18 ಸ್ಪೋರ್ಟ್ಸ್​​​ನ ಸ್ಟ್ರಾಟಜಿ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಹರ್ಷ್​ ಶ್ರೀವಾಸ್ತವ ಭಾರತದಲ್ಲಿ ಉಚಿತ ಪ್ರಸಾರದ ಕುರಿತು ಮಾತನಾಡಿ , ವಿಶ್ವದ ಅತ್ಯುತ್ತಮ ಮೋಟಾರ್​ಸೈಕಲ್​ ರೇಸಿಂಗ್​ ಶೋವನ್ನು ಭಾರತದಲ್ಲಿ ಕ್ರೀಡಾಭಿಮಾನಿಗಳಿಗೆ ಒದಗಿಸಿಕೊಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ಮೂಲಕ ಜಿಯೊ ತನ್ನ ಅಭಿಮಾನಿ ಬಳಗವನ್ನು ವಿಸ್ತರಿಸಲಿದೆ ಎಂದು ಹೇಳಿದ್ದಾರೆ.

ಭಾರತವು ಮೋಟಾರ್​ಸೈಕಲ್​ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ಇದೇ ವೇಳೆ ದ್ವಿಚಕ್ರ ವಾಹನಗಳ ಅತ್ಯುತ್ಕೃಷ್ಟ ರೇಸ್​ ಮೋಟೋ ಜಿಪಿಯೂ ಭಾರತಕ್ಕೆ ಕಾಲಿಡುತ್ತಿದೆ. ಈ ಕ್ರೀಡೆಯನ್ನು ಭಾರತದ ಮೂಲೆಮೂಲೆಗೆ ತಲುಪಿಸುವ ಕೆಲಸವನ್ನು ವಯಾಕಾಮ್​ 18 ಮಾಡಲಿದೆ ಎಂದು ಡೋರ್ನಾ ಸಿಇಒ ಕ್ಯಾರ್ಮೆಲೊ ಎಜ್ಪೆಲೆಟಾ ಹೇಳಿದ್ದಾರೆ.

ಇದನ್ನೂ ಓದಿ : FORMULA 1 RACE: ಎಫ್-1 ಗ್ರ್ಯಾನ್​​ ಪ್ರಿ​​ ರೇಸ್​ಗೆ ಸಜ್ಜಾದ ಸೌದಿ ಅರೇಬಿಯಾ

‘ಅತ್ಯಂತ ರೋಮಾಂಚನಕಾರಿ ಕ್ರೀಡೆಯಾದ ಮೋಟೋ ಜಿಪಿಯನ್ನು ಭಾರತದಲ್ಲಿ ಪ್ರಸಾರ ಮಾಡಲು ವಯಾಕಾಮ್​18 ಅತ್ಯಂತ ಸಮರ್ಥ ಪಾಲುದಾರ ಎಂಬ ವಿಶ್ವಾಸ ನಮಗಿದೆ. ಟಿವಿ ಮತ್ತು ಒಟಿಟಿ ಫ್ಲ್ಯಾಟ್​ಫಾರ್ಮ್​ಗಳ ಮೂಲಕ ಅವರು ಅತ್ಯಂತ ವ್ಯಾಪಕ ವ್ಯಾಪ್ತಿ ಹೊಂದಿದ್ದಾರೆ ಎಂದು ಭಾರತದ ರೇಸ್​ನ ಪ್ರವರ್ತಕರಾಗಿರುವ ಫೇರ್​ಸ್ಟ್ರೀಟ್​ ಸ್ಪೋರ್ಟ್ಸ್​ ಸಿಒಒ ಪುಷ್ಕರ್​ ನಾಥ್​ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಜಿಯೊ ಪ್ರಸಾರ ಮಾಡುವ ಕ್ರೀಡಾಕೂಟಗಳು

ವಯಾಕಾಮ್​18 ಸ್ಪೋರ್ಟ್ಸ್​ ತನ್ನ ವಿಶ್ವದರ್ಜೆಯ ಹಲವು ಕ್ರೀಡಾಕೂಟಗಳನ್ನು ಪ್ರಸಾರ ಮಾಡುತ್ತಿವೆ. ಅವುಗಳು ಇಂತಿವೆ. ಟಾಟಾ ಐಪಿಎಲ್​, ಟಾಟಾ ಡಬ್ಲ್ಯುಪಿಎಲ್​, ಡೈಮಂಡ್​ ಲೀಗ್​, ಫಿಫಾ ವಿಶ್ವಕಪ್​ ಕತಾರ್​-2022, ಎನ್​ಬಿಎ, ಲಾ ಲೀಗಾ, ಸೆರೀ ಎ, ಲೀಗ್​1 ಮತ್ತು ಆಯ್ದ ಬಿಡಬ್ಲ್ಯುಎಫ್​ ಟೂರ್ನಿಗಳ ಪ್ರಸಾರ ಹಕ್ಕು ಹೊಂದಿರುತ್ತದೆ.

2023ರ ಮೋಟೊ ಜಿಪಿ ರೇಸ್ ವೇಳಾಪಟ್ಟಿ

Exit mobile version