Site icon Vistara News

WTC Final 2023 : ಟೆಸ್ಟ್​ ಚಾಂಪಿಯನ್​ಷಿಪ್​ ಸೋತ ರೋಹಿತ್ ಬಳಗದ ವಿರುದ್ಧ ಟೀಕೆಗಳ ಸುರಿಮಳೆ

Team India Captian Rohit Sharma

#image_title

ಲಂಡನ್​: ವಿಶ್ವ ಟೆಸ್ಟ್​​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ (WTC Final 2023) ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯ 209 ರನ್​ಗಳ ಹೀನಾಯ ಸೋಲು ಕಾಣುವ ಮೂಲಕ ಮತ್ತೊಂದು ಬಾರಿ ನಿರಾಸೆ ಎದುರಿಸಿತು. ಕಳೆದ ಬಾರಿ ನ್ಯೂಜಿಲ್ಯಾಂಡ್ ವಿರುದ್ಧ ಪೈನಲ್​ನಲ್ಲಿ ಸೋತು ನಿರಾಸೆ ಎದುರಿಸಿದ್ದ ಭಾರತ ತಂಡ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಬಹುದು ಎಂಬ ವಿಶ್ವಾಸ ಭಾರತ ತಂಡದ ಅಭಿಮಾನಿಗಳಿಗೆ ಇತ್ತು. ಆದರೆ, ರೋಹಿತ್ ಶರ್ಮಾ ಬಳಗ ಅದಕ್ಕೆ ಪೂರಕವಾಗಿ ಆಡಲೇ ಇಲ್ಲ. ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಕಾಣುವ ಮೂಲಕ ಸುಲಭವಾಗಿ ಸೋಲೊಪ್ಪಿಕೊಂಡಿತು.

ಭಾರತ ತಂಡ ಕೊನೇ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿರುವುದು 2013ರಲ್ಲಿ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ ಟ್ರೋಫಿ ಗೆದ್ದಿತ್ತು. ಆ ಬಳಿಕದಿಂದ ನಡೆದ ಹಲವಾರು ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲು ವಿಫಲಗೊಂಡಿತು. ಹೀಗಾಗಿ 10 ವರ್ಷವಾದರೂ ಭಾರತ ತಂಡದ ಪ್ರಶಸ್ತಿಯ ಬರ ನೀಗುತ್ತಲೇ ಇಲ್ಲ.

ಏಕ ದಿನ ವಿಶ್ವ ಕಪ್​ ಭರವಸೆ

ಭಾರತದ ಆತಿಥ್ಯದಲ್ಲಿ ಮುಂದಿನ ಅಕ್ಟೋಬರ್​ನಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಹೀಗಾಗಿ ಭಾರತ ತಂಡಕ್ಕೆ ಅದುವೇ ಭರವಸೆ ಎನಿಸಿಕೊಂಡಿದೆ. ಭಾರತದ ಆತಿಥ್ಯದಲ್ಲೇ ನಡೆಯುವ ಕಾರಣ ಅವಕಾಶವೂ ಹೆಚ್ಚಿದೆ. ಒಂದು ವೇಳೆ ಆ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸದೇ ಹೋದರೆ ಭಾರತ ತಂಡ ವಿಶ್ವ ಕ್ರಿಕೆಟ್​ ಕ್ಷೇತ್ರದ ಮುಂದೆ ಅವಮಾನಕ್ಕೆ ಒಳಗಾಗಲಿದೆ. ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸಬೇಕಾಗಿದೆ.

ಇದನ್ನೂ ಓದಿ :WTC Final 2023 : ಭಾರತ ತಂಡದ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಟ್ರೋಫಿ​ ಕನಸು ಎರಡನೇ ಬಾರಿ ಭಗ್ನ!

ಕಳೆದ 10 ವರ್ಷದಲ್ಲಿ ಐಸಿಸಿ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಈ ರೀತಿ ಇದೆ

ಅಭಿಮಾನಿಗಳ ಬೇಸರ

ಭಾರತ ತಂಡದ ನಿರಂತರ ಸೋಲಿನ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರು ಐಪಿಎಲ್​ ಮತ್ತು ದುಡ್ಡಿನಾಸೆಗೆ ಆಡುವ ಪ್ರವೃತ್ತಿ ಹೆಚ್ಚಾಗಿರುವ ಕಾರಣ ಐಸಿಸಿ ಟ್ರೋಫಿಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದ ಆಟಗಾರರು ಟೆಸ್ಟ್​ ಹಾಗೂ ಐಸಿಸಿ ಟೂರ್ನಿಗಳಿಗಾಗಿ ಐಪಿಎಲ್​ ಆಡದಿರುವ ನಿರ್ಧಾರ ಕೈಗೊಂಡು ರಾಷ್ಟ್ರೀಯ ತಂಡದ ಬಗ್ಗೆ ಬದ್ಧತೆ ಪ್ರದರ್ಶಿಸುತ್ತಾರೆ. ಆದರೆ ಭಾರತ ತಂಡದ ಆಟಗಾರರು ಎರಡು ತಿಂಗಳ ಕಾಲ ಐಪಿಎಲ್​ನಲ್ಲಿ ನಿರತವಾಗಿ ಬೇಜವಾಬ್ದಾರಿ ತೋರುತ್ತಾರೆ ಎಂದು ಹೇಳಿದ್ದಾರೆ. ಕೊನೇ ಹಂತದ ತನಕ ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಪಾಲ್ಗೊಂಡು ಏಕಾಏಕಿ ಬಂದು ಟೆಸ್ಟ್​ ಆಡಿರುವುದಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂದು ಅವರೆಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version