Site icon Vistara News

Narendra Modi : ಪ್ರಧಾನಿ ನರೇಂದ್ರ ಮೋದಿಯ ಆತಿಥ್ಯ ಪಡೆದ ಕರ್ನಾಟಕದ ಕ್ರಿಕೆಟಿಗರು ಇವರು

mayank agarwal

#image_title

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಏರ್​ಶೋ ಏರೋ ಇಂಡಿಯಾದ ಉದ್ಘಾಟನೆಗಾಗಿ ಬಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕರ್ನಾಟಕದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರನ್ನು ರಾಜಭವನಕ್ಕೆ ಆಹ್ವಾನಿಸಿ ಆತಿಥ್ಯ ಕೊಟ್ಟಿದ್ದಾರೆ. ಈ ನಾಲ್ಕು ಆಟಗಾರರು ರಾಷ್ಟ್ರೀಯ ಕ್ರಿಕೆಟ್​ ತಂಡದಲ್ಲಿ ಉತ್ತಮ ಸಾಧನೆ ಮಾಡಿವರಾಗಿದ್ದಾರೆ.

ಮಾಜಿ ಸ್ಪಿನ್​ ಬೌಲರ್​ ಹಾಗೂ ಟೀಮ್​ ಇಂಡಿಯಾ ಕೋಚ್​ ಅನಿಲ್​ ಕುಂಬ್ಳೆ, ಮಾಜಿ ವೇಗದ ಬೌಲರ್​ ವೆಂಕಟೇಶ್​ ಪ್ರಸಾದ್​ ಹಾಗೂ ಬಲಗೈ ಬ್ಯಾಟರ್​ ಮಯಾಂಕ್​ ಅಗರ್ವಾಲ್​ ಹಾಗೂ ವೇಗಿ ಜಾವಗಲ್​ ಶ್ರೀನಾಥ್​ ಮೋದಿ ಅವರಿಂದ ಆಹ್ವಾನ ಪಡೆದ ಆಟಗಾರರಾಗಿದ್ದಾರೆ. ಬೆಂಗಳೂರಿನ ರಾಜಭವನದಲ್ಲಿ ಅವೆರೆಲ್ಲರಿಗೂ ಔತಣ ಕೂಟ ಏರ್ಪಡಿಸಲಾಗಿತ್ತು. ತಮ್ಮನ್ನು ಭೇಟಿ ಮಾಡಿದ ಆಟಗಾರರ ಜತೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದ್ದರು ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕ್ರಿಕೆಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಭವಿಷ್ಯದ ಭಾರತದ ಬಗ್ಗೆ ಉತ್ತಮ ಕಲ್ಪನೆಯನ್ನು ಹೊಂದಿದ್ದಾರೆ. ಅದೇ ರೀತಿ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಅವರು ಪ್ರೇರಣೆ ಎಂಬುದಾಗಿ ವೆಂಕಟೇಶ್​ ಪ್ರಸಾದ್ ಅವರು ಹೇಳಿದ್ದಾರೆ.

ಇದನ್ನು ಓದಿ : Pm Modi: ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್: ಫೋಟೊಗಳು ಇಲ್ಲಿವೆ!

ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟಿಗರು ಮಾತ್ರವಲ್ಲದೆ ಕನ್ನಡದ ಚಲನಚಿತ್ರ ರಂಗದ ಪ್ರಮುಖರಿಗೂ ಆಹ್ವಾನ ಕೊಟ್ಟಿದ್ದರು. ರಿಷಭ್​ ಶೆಟ್ಟಿ, ಯಶ್​ ಹಾಗೂ ಪುನೀತ್​ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಅವರೂ ರಾಜಭವನಕ್ಕೆ ಭೇಟಿ ನೀಡಿದ್ದರು.

Exit mobile version