ಕೊಚ್ಚಿ : ನಿರೀಕ್ಷೆಯಂತೆ ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ರೋಚಕವಾಗಿ ನಡೆಯಿತು. ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರ್ರನ್ ಒಟ್ಟು 18.5 ಕೋಟಿ ರೂಪಾಯಿ ಮೊತ್ತವನ್ನು ಸಾರ್ವಕಾಲಿಕ ದಾಖಲೆ ಮಾಡಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಪಂದ್ಯವನ್ನೇ ಅಡದ ಆಟಗಾರರು ಕೂಡ ಗರಿಷ್ಠ ಮೊತ್ತವನ್ನು ಜೇಬಿಗಿಳಿಸಿಕೊಂಡಿದ್ದಾರೆ. ಅವರ ಪಟ್ಟಿ ಇಲ್ಲಿದೆ.
ಶಿವಂ ಮಾವಿ– 6 ಕೋಟಿ ರೂಪಾಯಿ
ಕಳೆದ ಆವೃತ್ತಿಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್‌ನ ಭಾಗವಾಗಿದ್ದ ಶಿವಂ ಮಾವಿ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡರು. ಸಿಎಸ್ಕೆ, ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ಮಾವಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ಒಡ್ಡಿದರೂ ಜಯಂಟ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡರು. ಶಿವಂ ಮಾವಿಯ ಮೂಲ ಬೆಲೆ 40 ಲಕ್ಷ ರೂಪಾಯಿ.
ಮುಖೇಶ್ ಕುಮಾರ್- 5 ಕೋಟಿ ರೂಪಾಯಿ
ಬಂಗಾಳದ ಮುಖೇಶ್ ಕುಮಾರ್ ಅವರು ಇತ್ತೀಚೆಗೆ ಟೀಮ್ ಇಂಡಿಯಾದ ಚೊಚ್ಚಲ ಕರೆ ಪಡೆದಿದ್ದರು. ಆದರೆ, ಅವರಿಗೆ ಕಣಕ್ಕೆ ಇಳಿಯುವ ಅವಕಾಶ ಸಿಕ್ಕಿರಲಿಲ್ಲ. ವೇಗದ ಬೌಲರ್ ಆಗಿರುವ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಖೇಶ್ ಮೂಲ ಬೆಲೆ 20 ಲಕ್ಷ ರೂಪಾಯಿ.
ವಿವ್ರಾಂತ್ ಶರ್ಮಾ- 2.6 ಕೋಟಿ ರೂಪಾಯಿ
ಇವರು ಜಮ್ಮು ಕಾಶ್ಮೀರದ ಬ್ಯಾಟರ್. ಕೆಕೆಆರ್ ಬಳಗವನ್ನು ಹಿಂದಿಕ್ಕಿ ಎಸ್ಆರ್ಎಚ್ 2.6 ಕೋಟಿ ರೂಪಾಯಿಗೆ ವಿವ್ರಾಂತ್ ಅವರನ್ನು ತನ್ನ ತೆಗೆದುಕೊಂಡಿತು. ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು.
ಮಯಾಂಕ್ ದಾಗರ್- 1.8 ಕೋಟಿ ರೂಪಾಯಿ
ಇವರು ಕೂಡ ಎಸ್ಆರ್ಎಚ್ ತಂಡ ಸೇರಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಈ ಆಟಗಾರನಿಗೆ 1.8 ಕೋಟಿ ರೂಪಾಯಿ ಮೊತ್ತವನ್ನು ಎಸ್ಆರ್ಎಚ್ ತಂಡ ನೀಡಿತು. ಮಯಾಂಕ್ ಅತ್ಯುತ್ತಮ ಆಲ್ರೌಂಡರ್.
ಕೆ ಎಸ್ ಭರತ್- 1.2 ಕೋಟಿ ರೂಪಾಯಿ
ಆಂಧ್ರಪ್ರದೇಶದ ವಿಕೆಟ್‌ಕೀಪರ್ ಬ್ಯಾಟರ್ ಕೆ. ಎಸ್. ಭರತ್, ಭಾರತಕ್ಕೆ ಇನ್ನೂ ಪದಾರ್ಪಣೆ ಮಾಡಿಲ್ಲ. ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ 1.2 ಕೋಟಿ ರೂಪಾಯಿ ನೀಡಿ ಭರತ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು.
ಇದನ್ನ ಓದಿ | IPL Auction | ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು ಇವರು