Site icon Vistara News

Babar Azam: ಸೋಲಿಗೆ ಇದುವೇ ಪ್ರಮುಖ ಕಾರಣ; ಬಾಬರ್​ ಅಜಂ ಆರೋಪ

Babar Azam rued Pakistan's Asia Cup exit

ಕೊಲಂಬೊ: ಶ್ರೀಲಂಕಾ(Pakistan vs Sri Lanka, Super Fours) ವಿರುದ್ಧ ಆಘಾತಕಾರಿ 2 ವಿಕೆಟ್​ಗಳ ಅಂತರದಿಂದ ಸೋಲು ಕಂಡು ಏಷ್ಯಾಕಪ್(Asia Cup 2023)​ ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದಿದೆ. ತಂಡದ ಈ ಸೋಲಿಗೆ ನಾಯಕ ಬಾಬರ್​ ಅಜಂ(Babar Azam) ಪ್ರಮುಖ ಕಾರಣವನ್ನು ತಿಳಿಸಿದ್ದಾರೆ. ಬೌಲರ್​ಗಳ ವೈಫಲ್ಯವೇ ಸೋಲಿಗೆ ಕಾರಣ ಎಂದಿದ್ದಾರೆ.

ಗುರುವಾರ ಕೊಲಂಬೊದ(Colombo) ಆರ್​.ಪ್ರೇಮದಾಸ(R.Premadasa Stadium) ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ ಡಕ್​ವರ್ತ್ ನಿಯಮದ ಪ್ರಕಾರ 42 ಓವರ್​ಗಲ್ಲಿ 7 ವಿಕೆಟ್​ಗೆ 252 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕ ಕೊನೆಯ ಎಸೆತದಲ್ಲಿ ಈ ಮೊತ್ತವನ್ನು ಬಾರಿಸಿ ರೋಚಕ ಗೆಲುವು ದಾಖಲಿಸಿತು.

ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಬಾಬರ್​ ಅಜಂ, “ಬೌಲಿಂಗ್ ಹಾಗೂ ಫೀಲ್ಡಿಂಗ್ ವೈಫಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಜತೆಗೆ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ನಡುವಿನ ಶತಕದ ಜತೆಯಾಟ ನಮ್ಮ ಫೈನಲ್​ ಕನಸ್ಸ್ಉ ನುಚ್ಚುನೂರು ಮಾಡಿತು” ಎಂದರು.

ಇದನ್ನೂ ಓದಿ ಪಾಕ್​ ಫೈನಲ್​ ಕನಸಿಗೆ ಅಡ್ಡಿಯಾದದ್ದೇ ಈ ಒಂದು ನಿರ್ಧಾರ; ಈಗ ಚಿಂತಿಸಿ ಫಲವಿಲ್ಲ

“ಬ್ಯಾಟಿಂಗ್​ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಎಡವಿದೆವು. ಹೀಗಾಗಿ ನಾವು ಪಂದ್ಯ ಸೋಲುವಂತಾಯಿತು. ಇನ್ನೊಂದಡೆ ಹ್ಯಾರಿಸ್​ ರವೂಫ್​ ಮತ್ತು ನಸೀಮ್​ ಶಾ ಅಲಭ್ಯತೆ ಕಾಡಿದ್ದು ನಿಜ. ಉಭಯ ಆಟಗಾರರು ಇರುತ್ತಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಇಷ್ಟು ರನ್​ ಹರಿದುಹೋಗುತ್ತಿರಲ್ಲಿ. ನಾವು ಸ್ಪರ್ಧಾತ್ಮಕ ಮೊತ್ತ ಪೇರಿಸಿದರು ಇದನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಬೇಸರವಿದೆ. ವಿಶ್ವಕಪ್​ನಲ್ಲಿ ಎಲ್ಲ ನ್ಯೂನತೆಗಳನ್ನು ಸರಿಪಡಿಸಿ ಬಲಿಷ್ಠವಾಗಿ ಕಣಕ್ಕಿಳಿಯಲಿದ್ದೇವೆ” ಎಂದು ಬಾಬರ್​ ಹೇಳಿದರು.

ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಲಂಕಾ

ಕೊನೆಯ 12 ಎಸೆತಗಳಲ್ಲಿ ಲಂಕಾ ಗೆಲುವಿಗೆ 12 ರನ್​ಗಳ ಅಗತ್ಯವಿತ್ತು. ಆ ವೇಳೆ ಶಾಹೀನ್​ ಅಫ್ರಿದಿ ಎರಡು ವಿಕೆಟ್​ಗಳನ್ನು ಕಿತ್ತು ಲಂಕಾಗೆ ಒತ್ತಡ ಹೇರಿದರು. ಕೊನೆಯ ಓವರ್​ನಲ್ಲಿ 6 ಎಸೆತಗಳಲ್ಲಿ 8 ರನ್​ಗಳ ಸವಾಲು ಎದುರಾದಗ ಲಂಕಾ ಅಭಿಮಾನಿಗಳು ಉಸಿರು ಬಿಗಿಹಿಡಿದು ತಮ್ಮ ತಂಡ ಗೆಲ್ಲುವಂತೆ ಪ್ರಾರ್ಥಿಸತೊಡಗಿದರು. ಈ ಓವರ್​ ಜಮಾನ್ ಖಾನ್ ಎಸೆದರು. ಮೊದಲ ನಾಲ್ಕು ಎಸೆತವನ್ನು ಘಾತಕವಾಗಿ ಎಸೆದ ಜಮಾನ್ ಪಾಕ್​ಗೆ ಗೆಲುವು ತಂದು ಕೊಡಲಿದ್ದಾರೆ ಎಂದು ನಿರೀಕ್ಷಿಸಲಾಯಿತು. ಲಂಕಾಗೆ ಎರಡು ಎಸೆತದಲ್ಲಿ ಆರು ರನ್​ಗಳ ಅಗತ್ಯವಿತ್ತು. ಆದರೆ ಚರಿತ್ ಅಸಲಂಕಾ ಬೌಂಡರಿ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ 2 ರನ್​ ಬಾರಿಸುವಲ್ಲಿಯೂ ಯಶಸ್ವಿಯಾದ ಅಸಲಂಕಾ ಲಂಕಾಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಪಾಕ್​ನ ಫೈನಲ್​ ಕನಸು ಭಗ್ನಗೊಂಡಿತು.

Exit mobile version