Site icon Vistara News

IPL 2024: ಧೋನಿ ಡೀಸೆಲ್‌ ಎಂಜಿನ್‌ ಇದ್ದಂತೆ, ಈ ಬಾರಿಯೂ ಚೆನ್ನೈ ಕಪ್​ ಗೆಲ್ಲಲಿದೆ; ಭವಿಷ್ಯ ನುಡಿದ ಆರ್​ಸಿಬಿ ಮಾಜಿ ಆಟಗಾರ

MS Dhoni

ಮುಂಬಯಿ: ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಯ(MS Dhoni) ಬಗ್ಗೆ ಆರ್​ಸಿಬಿ ತಂಡದ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌(AB de Villiers) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಧೋನಿ ಡೀಸೆಲ್‌ ಎಂಜಿನ್‌ ಇದ್ದಂತೆ ಎಂದು ಹೇಳಿದ್ದಾರೆ.

“ಕಳೆದ ವರ್ಷ ಧೋನಿ ಅವರು ಐಪಿಎಲ್​ಗೆ(IPL 2024) ನಿವೃತ್ತಿ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ನಿವೃತ್ತಿಯನ್ನು ಒಂದು ವರ್ಷ ಮುಂದೆ ಹಾಕಿದ್ದರು. ಈ ಬಾರಿಯೂ ಅವರು ನಿವೃತ್ತಿ ಘೋಷಿಸುವುದಿಲ್ಲ ಎಂದು ನಾನು ನಂಬಿದ್ದೇನೆ. ಏಕೆಂದರೆ ಅವರು ಡೀಸೆಲ್‌ ಎಂಜಿನ್‌ ಇದ್ದಂತೆ. ಇದನ್ನು ನಿಲ್ಲಿಸುವುದು ಕಷ್ಟ. ಧೋನಿ ಅವರಿಗೆ ಇನ್ನೂ ಒಂದೆರಡು ವರ್ಷಗಳ ಕಾಲ ಐಪಿಎಲ್​ ಆಡುವ ಸಾಮರ್ಥ್ಯವಿದೆ” ಎಂದು ಎಬಿಡಿ ಹೇಳಿದ್ದಾರೆ.

ಈ ಬಾರಿಯೂ ಚೆನ್ನೈ ತಂಡ ಚಾಂಪಿಯನ್​ ಆಗಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ತಂಡದಲ್ಲಿ ಅನುಭವಿ ಆಟಗಾರರು ಬೆರಳೆಣಿಕೆಯಷ್ಟಿದ್ದರೂ ಕೂಡ ಕಪ್​ ಗೆದ್ದಿತ್ತು. ಈ ಬಾರಿ ಅತ್ಯಂತ ಬಲಿಷ್ಠ ಆಟಗಾರರ ಸಂಯೋಜನೆ ಇದೆ. ಹೀಗಾಗಿ ಚೆನ್ನೈ 6ನೇ ಕಪ್​ ಗೆಲ್ಲುವುದು ಖಚಿತ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಅಗ್ರ 5 ಬ್ಯಾಟರ್​ಗಳು ಇವರೇ ನೋಡಿ!

ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರೂ ಆಡಿದ್ದರು. ನೋವು ನಿವಾರಕ ಪ್ಲಾಸರ್​ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಉತ್ತಮ ಫಿಟ್​ನೆಸ್​ ಹೊಂದಿದ್ದಾರೆ. ಉದ್ದನೆಯ ಕೂದಲು ಕೂಡ ಬಿಟ್ಟಿದ್ದು ಕ್ರಿಕೆಟ್​ಗೆ ಪದಾರ್ಪಣೆ ಮಾಡುವಾಗ ಇದ್ದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿಯ(MS Dhoni) ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಧೋನಿ ಅವರು ನೆಟ್ಸ್​ನಲ್ಲಿ(training session for CSK) ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ವಿಂಟೇಜ್ ಶೈಲಿಯ ಉದ್ದನೆಯ ಕೂದಲಿನೊಂದಿಗೆ ಧೋನಿ ಬ್ಯಾಟಿಂಗ್​ ನಡೆಸುತ್ತಿರುವ ಫೋಟೊ ವೈರಲ್​ ಆಗಿತ್ತು. ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಲಿದೆ

Exit mobile version