ಮುಂಬಯಿ : ಜಿಂಬಾಬ್ವೆ ಪ್ರವಾಸಕ್ಕೆ ಹೊರಟಿರುವ ಭಾರತ ತಂಡಕ್ಕೆ (Team India) ಕೆ. ಎಲ್ ರಾಹುಲ್ ಅವರನ್ನು ಏಕಾಏಕಿ ನಾಯಕರನ್ನಾಗಿ ಅಯ್ಕೆ ಮಾಡಿರುವುದಕ್ಕೆ ಶಿಖರ್ ಧವನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಇದು ಮೋಸ. ಹಿರಿಯ ಆಟಗಾರನಿಗೆ ಮಾಡಿದ ಅವಮಾನ ಎಂದೆಲ್ಲ ಸೋಶಿಯಲ್ ಮೀಡಿಯಾಗಳ ಮೂಲಕ ಜರೆದಿದ್ದಾರೆ. ಶಿಖರ್ ಧವನ್ ಅವರಂಥ ಅನುಭವಿ ಆಟಗಾರನಿಗೆ ಹಿಂಬಡ್ತಿ ನೀಡಿರುವ ಕ್ರಮ ಸರಿಯಾಗಿಲ್ಲ ಎಂದು ಅವರೆಲ್ಲರೂ ಟೀಕೆಗಳ ಬಾಣಗಳನ್ನು ಬಿಟ್ಟಿದ್ದಾರೆ.
ಭಾರತ ತಂಡದ ಕಾಯಂ ಉಪನಾಯಕರಾಗಿರುವ ಕೆ. ಎಲ್ ರಾಹುಲ್ ಗಾಯದ ಸಮಸ್ಯೆ ಹಾಗೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹಲವು ಸರಣಿಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಆದರೆ, ಗುರುವಾರ ಸಂಜೆ ವೇಳೆಗೆ ಅವರು ಏಕಾಏಕಿ ಫಿಟ್ ಎಂದು ಘೋಷಿಸಿದ ಬಿಸಿಸಿಐ ಅವರನ್ನು ಜಿಂಬಾಬ್ವೆ ಪ್ರವಾಸ ಹೋಗಲಿರುವ ಭಾರತ ತಂಡಕ್ಕೆ ನಾಯಕನ ಹೊಣೆಗಾರಿಕೆ ನೀಡಿದ್ದರು. ಅದಕ್ಕಿಂತ ಮೊದಲು ನಾಯಕತ್ವವನ್ನು ಶಿಖರ್ ಧವನ್‌ಗೆ ಕೊಡಲಾಗಿತ್ತು. ಒಂದು ಬಾರಿ ರಾಹುಲ್ ಫಿಟ್ ಎನಿಸಿದ ತಕ್ಷಣ , ಧವನ್‌ಗೆ ಉಪನಾಯಕನ ಪಟ್ಟ ನೀಡಿ ರಾಹುಲ್‌ಗೆ ಬಡ್ತಿ ಕೊಡಲಾಗಿದೆ. ಇದು ಶಿಖರ್ ಧವನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಶಿಖರ್ ಧವನ್ ಈ ಹಿಂದಿನ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಭಾರತ ತಂಡದ ನಾಯಕರಾಗಿದ್ದರು. ಮೂರು ಪಂದ್ಯಗಳ ಏಕ ದಿನ ಸರಣಿಯನ್ನು ಧವನ್ ನೇತೃತ್ವದ ಟೀಮ್ ಇಂಡಿಯಾ ೩-೦ ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಹೀಗಾಗಿ ಜಿಂಬಾಬ್ವೆ ವಿರುದ್ಧದ ಸರಣಿಗೂ ಅವರನ್ನೇ ಆರಂಭದಲ್ಲಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇಷ್ಟೆಲ್ಲ ಸಾಧನೆ ಮಾಡಿರುವ ಅವರನ್ನು ಏಕಾಏಕಿ ನಾಯಕನ ಸ್ಥಾನದಿಂದ ಇಳಿಸಿರುವುದು ಸರಿಯಲ್ಲ ಎಂಬುದು ಅಭಿಮಾನಿಗಳ ವಾದ.
ಡಿಟೆಕ್ಟಿವ್ ಅರ್ಜುನ್ ಎಂಬುವರೊಬ್ಬರು ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಧವನ್ ಮಾಡಿರುವ ಅವಮಾನ ಇದು. ಅವರನ್ನು ಈಗಾಗಲೇ ನಾಯಕ ಎಂದು ಘೋಷಿಸಿದ ಬಳಿಕ ಮುಂದುವರಿಸಬೇಕಿತ್ತು. ರಾಹುಲ್‌ಗೆ ಪಟ್ಟ ಕಟ್ಟುವ ಉದ್ದೇಶ ಇದ್ದಿದ್ದರೆ ಅಲ್ಲಿಯ ತನಕ ನಾಯಕರನ್ನೇ ಘೋಷಿಸಬಾರದಿತ್ತು. ಒಂದು ಬಾರಿ ಘೋಷಣೆ ಮಾಡಿದ ಬಳಿಕ ಹಿಂಬಡ್ತಿ ನೀಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೊಬ್ಬರು ನೀವು ನಾಯಕನ ವಿಚಾರದಲ್ಲಿಯೇ ಸಿಕ್ಕಾಪಟ್ಟೆ ಆಟವಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಇನೊಬ್ಬರು ಶಿಖರ್ ಧವನ್ ಅವರಿಗೆ ಲಭಿಸಿದ ಅವಕಾಶಗಳನ್ನು ಕೊಳ್ಳೆ ಹೊಡೆಯಲಾಯಿತು ಎಂದು ಬರೆದುಕೊಂಡಿದ್ದಾರೆ.
ಆರು ತಿಂಗಳ ಬಳಿಕ ಕಣಕ್ಕೆ
ಶಿಖರ್ ಧವನ್ ಅವರು ಕಳೆದ ಆರು ತಿಂಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಐಪಿಎಲ್‌ನಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಕೊನೆ ಹಂತದಲ್ಲಿ ಗಾಯಗೊಂಡಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದರೂ ಅವರಿಗೆ ಆಡಲು ಸಾಧ್ಯವಾಗಿರಲಿಲ್ಲ. ಅಂತೆಯೆ ಜತೆಗೆ ಇಂಗ್ಲೆಂಡ್ ಪ್ರವಾಸ ಮಿಸ್ ಮಾಡಿಕೊಂಡಿದ್ದರು. ಇದಾಗ ಬಳಿಕ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ವೆಸ್ಟ್ ಇಂಡೀಸ್ ಪ್ರವಾಸದ ಅವಕಾಶವೂ ಕಳೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಏತನ್ಮಧ್ಯೆ, ಜಿಂಬಾಬ್ವೆ ಪ್ರವಾಸದ ತಂಡಕ್ಕೆ ನಾಯಕರಾಗಿ ಅಯ್ಕೆಯಾಗಿದ್ದಾರೆ.
ಇದನ್ನೂ ಓದಿ | Team India | ಕನ್ನಡಿಗ ಕ್ರಿಕೆಟಿಗನಿಗೆ ಶುಭ ಸುದ್ದಿ, ಜಿಂಬಾಬ್ವೆ ಪ್ರವಾಸಕ್ಕೆ ಇವರೇ ನಾಯಕ