Site icon Vistara News

Team India : ಹೀಗಾದ್ರೆ ನಡೆಯಲ್ಲ; ದ್ರಾವಿಡ್ ಸೇರಿದಂತೆ ಕೋಚ್​​ಗಳಿಗೆ ಬಿಸಿಸಿಐ ವಾರ್ನಿಂಗ್!

Team india Coaching Staff

#image_title

ನವ ದೆಹಲಿ: ಹೆಡ್​ ಕೋಚ್​ ರಾಹುಲ್​ ದ್ರಾವಿಡ್ (Rahul Dravid) ಸೇರಿದಂತೆ ಭಾರತ ಕ್ರಿಕೆಟ್ ತಂಡದ (Team India) ಸಹಾಯಕ ಸಿಬ್ಬಂದಿಗೆ ಕಷ್ಟದ ಸಮಯ ಎದುರಾಗಿದೆ. ಅವರ ಕಾರ್ಯವೈಖರಿ ಬಗ್ಗೆ ಬಿಸಿಸಿಯ ಕ್ಷಕಿರಣ ಬಿಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಸೋಲಿನ ನಂತರ ಕೋಚ್​ಗಳ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದೆ. ಹೀಗಾಗಿ ಅವರೆಲ್ಲರಿಗೂ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

ಟೀಮ್​ ಇಂಡಿಯಾದ ಹೆಡ್​ ಕೋಚ್​ ದ್ರಾವಿಡ್​ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅವರ ಮೇಲೆ ನಿಗಾ ಇಡಲಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ 2023 ರ ವಿಶ್ವಕಪ್​​ವರೆಗೆ ಅವಕಾಶ ಪಡೆಯಲಿದ್ದಾರೆ ಆದರೆ ಆ ಮೆಗಾ ಟೂರ್ನಿಯಲ್ಲಿ ಭಾರತ ತಂಡ ಯಶಸ್ಸು ಗಳಿಸದೇ ಹೋದರೆ ಅವರ ಸ್ಥಾನಕ್ಕೂ ಕುತ್ತು ಬರಬಹುದು ಎನ್ನಲಾಗಿದೆ.

ಸದ್ಯ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಷ್ಟು ಪರಿಸ್ಥಿತಿ ಕೆಟ್ಟದ್ದಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದಾಗ್ಯೂ, ಮುಂದಿನ ಐಸಿಸಿ ಈವೆಂಟ್​ನಲ್ಲಿ ಮತ್ತೊಂದು ವೈಫಲ್ಯ ಕಂಡರೆ ಕ್ರಮ ಕೈಗೊಳ್ಳುವುದು ಖಚಿತ ಎಂದಿದ್ದಾರೆ. ಹೀಗಾಗಿ ವಿಶ್ವಕಪ್​​ಗೆ 4 ತಿಂಗಳು ಬಾಕಿ ಇರುವಾಗಲೇ ರಾಥೋಡ್​ ಮತ್ತು ಮಾಂಬ್ರೆಗೆ ಎಚ್ಚರಿಕೆ ನೀಡಲಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಅವರನ್ನು ತಕ್ಷಣವೇ ಸ್ಥಾನಗಳಿಂದ ಕೆಳಗಿಳಿಸವುದು ಅಷ್ಟು ಸುಲಭವಲ್ಲ. ಅವರು ಉತ್ತಮ ಸಾಧನೆ ಮಾಡಿಲ್ಲ ಎಂದೂ ನಾವು ಹೇಳಲು ಸಾಧ್ಯವಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ ತಲುಪುವುದು ಕೂಡ ತಮಾಷೆಯ ಸಂಗತಿಯಲ್ಲ ಎಂದು ಅವರು ಹೇಳಿದ್ದಾರೆ..

ಆದರೆ ವಿದೇಶಗಳಲ್ಲಿ ತಂಡದ ಸಾಧನೆ ತೃಪ್ತಿಕರವಾಗಿಲ್ಲ. ಅದೇ ರೀತಿ ನಾಲ್ಕು ತಿಂಗಳ ಅವಧಿಯಲ್ಲಿ ವಿಶ್ವ ಕಪ್ ಬರಲಿದೆ ಎಂಬ ಅಂಶವನ್ನು ನಾವು ಪರಿಗಣಿಸಬೇಕಾಗಿದೆ. ಈ ಆಂತರಿಕ ಚರ್ಚೆಗಳು ಖಂಡಿತವಾಗಿಯೂ ನಡೆಯಲಿವೆ, ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಟರ್​​ಗಳ ಸಮಸ್ಯೆ

ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿದ್ದ ಅವಧಿಯಲ್ಲಿ, ಭಾರತೀಯ ಬ್ಯಾಟ್ಸ್​ಮನ್​​ಗಳು ಮಿಂಚಲು ವಿಫಲರಾಗಿದ್ದಾರೆ ಮಾತ್ರವಲ್ಲ, ಬಹುತೇಕ ಎಲ್ಲಾ ಅಗ್ರ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಭಾರತದ ಅಗ್ರ 5 ಆಟಗಾರರು ವಿದೇಶದಲ್ಲಿ ಹೆಣಗಾಡುತ್ತಿರುವುದು ಅಭಿಮಾನಿಗಳ ಕಳವಳವಾಗಿದೆ.

ಬೌಲಿಂಗ್​ ಕೋಚ್​ ಭರತ್ ಅರುಣ್ ಕೆಳಗಿಳಿದ ನಂತರ ಮಾಂಬ್ರೆಗೆ ಸಾಕಷ್ಟು ಅವಕಾಶಗಳಿದ್ದವು. ಕೆಲವು ಗಮನಾರ್ಹ ಪ್ರದರ್ಶನಗಳ ಹೊರತಾಗಿ ಅವರ ಅಧಿಕಾರಾವಧಿಯು ಬೌಲರ್​​ಗಳ ವಿಭಾಗ ಗಾಯದಿಂದ ಬಳಲುತ್ತಿದೆ. ಸ್ಪಿನ್ ಸ್ನೇಹಿ ಪರಿಸ್ಥಿತಿಗಳನ್ನು ಹೊರತುಪಡಿಸಿ, ಭಾರತೀಯ ಬೌಲಿಂಗ್ ಘಟಕವು ವಿದೇಶಿ ಅಥವಾ ಕಠಿಣ ಬೌಲಿಂಗ್ ಪರಿಸ್ಥಿತಿಗಳಲ್ಲಿ ವೈಫಲ್ಯ ಎದುರಿಸುತ್ತಿದೆ.

ಆರ್ ಶ್ರೀಧರ್ ಅವರ ನಾಯಕತ್ವದಲ್ಲಿ ವಿಶ್ವದ ಅತ್ಯುತ್ತಮ ಫೀಲ್ಡಿಂಗ್ ವಿಭಾಗವನ್ನು ಹೊಂದಿತ್ತು ಭಾರತ ತಂಡ. ಆದರೆ ಟಿ ದಿಲೀಪ್ ಅವರ ಅಡಿಯಲ್ಲಿ ಭಾರತವು ಬಹಳ ಸಾಮಾನ್ಯ ಫೀಲ್ಡಿಂಗ್ ಮಾಡುತ್ತಿದೆ.. ಟಿ 20 ವಿಶ್ವಕಪ್, ಏಷ್ಯಾ ಕಪ್ ಮತ್ತು ಡಬ್ಲ್ಯುಟಿಸಿ ಫೈನಲ್ ಇದಕ್ಕೆ ಕೆಲವು ಉದಾಹರಣೆಗಳಾಗಿವೆ.

ದ್ರಾವಿಡ್​ ಕುರಿತ ಆಕ್ಷೇಪಗಳೇನು?

ಸದ್ಯಕ್ಕೆ ಭಾರತದ ಮುಖ್ಯ ಕೋಚ್ ದ್ರಾವಿಡ್​ ಅವರಸ್ಥಾನ ಸುರಕ್ಷಿತವಾಗಿದೆ. ಏಷ್ಯಾ ಕಪ್, ಟಿ 20 ವಿಶ್ವಕಪ್ ಮತ್ತು ಡಬ್ಲ್ಯುಟಿಸಿ ಫೈನಲ್​​ನಲ್ಲಿ ಸೋತರೂ ಮಂಡಳಿಯು ಭಾರತದ ಮಾಜಿ ನಾಯಕನ ಮೇಲೆ ಇನ್ನೂ ನಂಬಿಕೆ ಹೊಂದಿದೆ. ದ್ರಾವಿಡ್ ಅವರ ಒಪ್ಪಂದವು ವಿಶ್ವ ಕಪ್​ನೊಂದಿಗೆ ನವೆಂಬರ್​ನಲ್ಲಿ ಕೊನೆಗೊಳ್ಳುವುದರಿಂದ, ಅವರು ಅಲ್ಲಿಯವರೆಗೆ ಸುರಕ್ಷಿತವಾಗಿದ್ದಾರೆ. ನಂತರ ಏನಾಗುತ್ತದೆ ಎಂಬುದು ವಿಶ್ವಕಪ್ ಫಲಿತಾಂಶದ ಬಳಿಕ ಗೊತ್ತಾಗಲಿದೆ.

ಇದನ್ನೂ ಓದಿ : WTC Final 2023 : ಫೈನಲ್​ನಲ್ಲಿ ಸೋತ ಬಳಿಕವೂ ದೊಡ್ಡ ಮೊತ್ತ ಜೇಬಿಗಿಳಿಸಿದ ರೋಹಿತ್​ ಶರ್ಮಾ ಬಳಗ!

ಆತಿಥೇಯರಾಗಿರುವ ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಆದರೆ ಯಾವುದೇ ಎಡವಟ್ಟುಗಳು ಖಂಡಿತವಾಗಿಯೂ ತಂಡಕ್ಕೆ ವಿರುದ್ಧವಾಗಿರಲಿದೆ. 2023ರ ಏಷ್ಯಾಕಪ್​​ನಲ್ಲಿ ಭಾರತ ಆಡಲಿದೆ. ಮತ್ತೊಮ್ಮೆ, ಪಾಕಿಸ್ತಾನವು ಪಂದ್ಯಾವಳಿಯಲ್ಲಿ ಏಕೈಕ ಕಠಿಣ ಎದುರಾಳಿಯಾಗಿರುವುದರಿಂದ ಭಾರತವು ನೆಚ್ಚಿನ ತಂಡವಾಗಿದೆ. ಇಲ್ಲೂ ಸಾಧನೆ ಮಾಡಲೇಬೇಕು. ಏಷ್ಯಾ

ವಿಶ್ವಕಪ್ ನಂತರ ದ್ರಾವಿಡ್ ಅಧಿಕಾರದಿಂದ ಕೆಳಗಿಳಿಯಬಹುದು ಎಂಬ ಆಲೋಚನೆಗಳೂ ಇವೆ. ಹೆಚ್ಚು ಯಶಸ್ಸು ದೊರಕದ ಕಾರಣ ಅವರು ಕೋಚಿಂಗ್​ ಹುದ್ದೆಯಲ್ಲಿ ಮುಂದುವರಿಯಲಾರರು ಎಂದು ಹೇಳಲಾಗುತ್ತಿದೆ.

Exit mobile version