ಮೆಲ್ಬೋರ್ನ್ : ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್‌ಗೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಬೇಕು, ಬೇಡ ಎಂಬ ವಿಚಾರದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನಕ್ಕೆ ಭಾರತ ತಂಡ ಹೋಗುವುದಿಲ್ಲ ಎಂದು ಹೇಳಿದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾವು ಕೂಡ ಏಕ ದಿನ ವಿಶ್ವ ಕಪ್‌ಗಾಗಿ ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳಿದೆ. ಈ ಚರ್ಚೆ ಈಗ ತಾರಕ್ಕಕೇರಿದೆ. ಈ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶನಿವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದನ್ನು ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧಾರ ಮಾಡಲಿವೆ ಎಂದು ಹೇಳಿದ್ದಾರೆ.
“ನಾವೀಗ ವಿಶ್ವ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನ ಹರಿಸುತ್ತಿದ್ದೇವೆ. ಯಾಕೆಂದರೆ ಈ ಟೂರ್ನಿ ನನಗೆ ಅತ್ಯಂತ ಪ್ರಮುಖ. ಮುಂದಿನ ದಿನಗಳಲ್ಲಿ ಏನು ನಡೆಯುತ್ತದೆ ಎಂಬದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಪಾಕಿಸ್ತಾನಕ್ಕೆ ಪ್ರವಾಸ ಮಾಡುವ ವಿಚಾರವನ್ನು ಬಿಸಿಸಿಐ ನಿರ್ಧರಿಸಲಿದೆ. ನಾವು ಪಾಕಿಸ್ತಾನ ವಿರುದ್ಧದ ನಾಳೆಯ ಪಂದ್ಯವನ್ನು ಗೆಲ್ಲುವ ಬಗ್ಗೆ ಗಮನ ಹರಿಸಿದ್ದೇವೆ,” ಎಂದು ರೋಹಿತ್ ಶ್ರಮ ಅವರು ಹೇಳಿದ್ದಾರೆ.
ಮುಂದಿನ ವರ್ಷದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆತಿಥ್ಯ ಲಭಿಸಿದೆ. ಆದರೆ, ಭಾರತ ತಂಡ ಆ ದೇಶಕ್ಕೆ ಹೋಗದಿರುವ ಕಾರಣ ತಟಸ್ಥ ಜಾಗದಲ್ಲಿ ಪಂದ್ಯ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವೆ ಪರ- ವಿರೋಧ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ | T20 World Cup| ಸಂದರ್ಭಕ್ಕೆ ತಕ್ಕಂತೆ ಆಟಗಾರರ ಬದಲಾವಣೆ ನಿಶ್ಚಿತ; ನಾಯಕ ರೋಹಿತ್ ಶರ್ಮಾ