Site icon Vistara News

IPL 2023 : ಈ ಬಾರಿ ಐಪಿಎಲ್​ 4K ರೆಸೊಲ್ಯೂಶನ್​ನಲ್ಲಿ ಪ್ರಸಾರ, ಅದೂ ಫ್ರೀ

IPL 2023

#image_title

ಮುಂಬಯಿ: ಈ ಬಾರಿ ಐಪಿಎಲ್​ (IPL 2023) ಪಂದ್ಯಗಳ ಆನ್​ಲೈನ್​ ಸ್ಟ್ರೀಮಿಂಗ್ ಹಕ್ಕು ರಿಲಯನ್ಸ್ ಕಂಪನಿಯ ಜಿಯೊ ಬಳಿ ಇದೆ. ಟಿವಿ ನೇರ ಪ್ರಸಾರದ ಹಕ್ಕನ್ನು ಸ್ಟಾರ್​ ಸ್ಪೋರ್ಟ್ಸ್​ ಕಂಪನಿ ತನ್ನದಾಗಿಸಿಕೊಂಡಿದೆ. ಎರಡೂ ಪ್ರತ್ಯೇಕ ಸಂಸ್ಥೆಗಳಾಗಿರುವ ಕಾರಣ ಪ್ರಸಾರದ ವಿಚಾರದಲ್ಲಿ ಪೈಪೋಟಿ ಗ್ಯಾರಂಟಿ. ಯಾಕೆಂದರೆ ಹಿಂದಿನ ಆವೃತ್ತಿಗಳಲ್ಲಿ ಟೀಮ್​ ಸ್ಟಾರ್​ ಸ್ಪೋರ್ಟ್ಸ್​ ಸಂಸ್ಥೆಗೆ ಸೇರಿರುವ ಡಿಸ್ನಿ ಹಾಟ್​ಸ್ಟಾರ್​ ಆನ್​ಲೈನ್​ ಸ್ಟ್ರೀಮಿಂಗ್​ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಹೀಗಾಗಿ ಪೈಪೋಟಿಯಿಲ್ಲದೇ ಪ್ರಸಾರ ನಡೆದಿತ್ತು. ಆದರೆ, ಜಿಯೊ ಈ ಕ್ಷೇತ್ರಕ್ಕೆ ಎಂಟ್ರಿಯಾಗಿರುವ ಕಾರಣ ಇನ್ನಷ್ಟು ಹೊಸತನಗಳ ನಿರೀಕ್ಷೆಯಿತ್ತು. ಅದರಲ್ಲೊಂದು 4ಕೆ ಸ್ಟ್ರೀಮಿಂಗ್ ಗ್ರಾಹಕರ ಪಾಲಿಗೆ ಇದು ಖಂಡಿತವಾಗಿಯೂ ಸಂತಸದ ಸುದ್ದಿ.

ಮೊಬೈಲ್​ ನೆಟ್​ವರ್ಕ್​ ಪೂರೈಕೆದಾರ ಕಂಪನಿಗಳು ಈಗಾಗಲೇ 5ಜಿ ಸೇವೆಯನ್ನು ನೀಡುತ್ತಿದೆ. ಹೀಗಾಗಿ 4 ಲೈವ್ ಸ್ಟ್ರೀಮಿಂಗ್​ ನೀಡುವುದು ಸುಲಭ. ಅದೇ ರೀತಿ ಟಿವಿಯಲ್ಲಿ ತಾಂತ್ರಿಕತೆಯೂ ಸುಧಾರಣೆಯಾಗುತ್ತಿದೆ. ಹೀಗಾಗಿ 4ಕೆ ಟೆಕ್ನಾಲಜಿ ಸಾಮಾನ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಜಿಯೊ ಟಿವಿ ಐಪಿಎಲ್ ಪಂದ್ಯಗಳನ್ನು 4ಕೆಯಲ್ಲಿ ನೀಡಲು ಮುಂದಾಗಿದೆ.

ಇದನ್ನೂ ಓದಿ : IPL 2023: ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ ನಿವೃತ್ತಿಗೆ ದಿನಾಂಕ ನಿಗದಿ; ಚೆಪಾಕ್​ನಲ್ಲಿ ಕೊನೆಯ ಪಂದ್ಯ!

ಮುಂದಿನ ಬಾರಿಯ ಐಪಿಎಲ್​ ಮಾರ್ಚ್​ 31ರಿಂದ ಆರಂಭಗೊಂಡು ಮೇ 28ರವರೆಗೆ ನಡೆಯಲಿದೆ. ಈ ಟೂರ್ನಿಯ ಪಂದ್ಯಗಳು ನಡೆಯು ಸ್ಟೇಡಿಯಮ್​ನಲ್ಲಿ 4ಕೆ ಅಲ್ಟ್ರಾ ಎಚ್​ಡಿಗೆ ಪೂರಕವಾಗಿರುವ ಕ್ಯಾಮೆರಾಗಳನ್ನು ಅಳವಡಿಸಲು ಜಿಯೊ ಕಂಪನಿ ಮುಂದಾಗಿದೆ. ದೊಡ್ಡ ಗಾತ್ರದ ಸ್ಕ್ರೀನ್ ಹೊಂದಿರುವ ಟಿವಿಗಳಲ್ಲಿ ಈ ಪಂದ್ಯಗಳನ್ನು ವೀಕ್ಷಿಸುವುದು ಸುಲಭ ಎನಿಸಿದೆ.

Exit mobile version