Site icon Vistara News

IPL Auction 2023 | ಈ ಬಾರಿ ಐಪಿಎಲ್​ನಲ್ಲಿ ಪಾಕಿಸ್ತಾನದ ಆಟಗಾರನಿಗೂ ಸಿಕ್ಕಿದೆ ಚಾನ್ಸ್; ಹೇಗೆ ಸಾಧ್ಯ?

ಕೊಚ್ಚಿ : ಕೇರಳದ ಕೊಚ್ಚಿಯಲ್ಲಿ ಡಿಸೆಂಬರ್​ 23ರಂದು ನಡೆದ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಗೆ ಭರ್ಜರಿ ಪ್ರತಿಕ್ರಿಯೆ ಲಭಿಸಿದೆ. ಸ್ಯಾಮ್​ ಕರ್ರನ್​ (18.5 ಕೋಟಿ ರೂಪಾಯಿ), ಕ್ಯಾಮೆರಾನ್​ ಗ್ರೀನ್​ (17.5 ಕೋಟಿ ರೂಪಾಯಿ) ಹಾಗೂ ಬೆನ್​ಸ್ಟೋಕ್ಸ್​ (16.5) ಕೋಟಿ ರೂಪಾಯಿ ದೊಡ್ಡ ಮೊತ್ತದ ಥೈಲಿಯನ್ನು ಪಡೆದುಕೊಂಡಿದ್ದಾರೆ. ಇವೆಲ್ಲದರ ನಡುವೆ ಪಾಕಿಸ್ತಾನದ ಕ್ರಿಕೆಟಿಗರೊಬ್ಬರು ಸದ್ದಿಲ್ಲದೇ ಐಪಿಎಲ್​ ರಂಗಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಪಾಕಿಸ್ತಾನ ಆಟಗಾರರಿಗೆ ಐಪಿಎಲ್​ಗೆ ಎಂಟ್ರಿ ಇಲ್ಲದಿರುವಾಗ ಅವರು ಹೇಗೆ ಬರಲು ಸಾಧ್ಯ ಎಂಬುದು ಪ್ರಶ್ನೆ. ಆದರೂ ಬಂದಿದ್ದು ಹೇಗೆ?

ಐಪಿಎಲ್​ ಹರಾಜಿನಲ್ಲಿ ಪಾಲ್ಗೊಂಡು ಅವಕಾಶ ಗಿಟ್ಟಿಸಿಕೊಂಡಿರುವ ಪಾಕ್ ಆಟಗಾರ ಮತ್ಯಾರೂ ಅಲ್ಲ. ಪಂಜಾಜ್​ ಕಿಂಗ್ಸ್​ ಬಳಗಕ್ಕೆ 50 ಲಕ್ಷ ರೂಪಾಯಿ ಮೂಲ ಬೆಲೆಗೆ ಆಯ್ಕೆಯಾಗಿರುವ ಸಿಕಂದರ್​ ರಾಜಾ. ಬಿಸಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹಾವು- ಮುಂಗುಸಿ ರೀತಿಯಲ್ಲಿ ಕಚ್ಚಾಡುವಾಗ ರಾಜಾ ಐಪಿಎಲ್​ಗೆ ಬಂದಿದ್ದು ಸೋಜಿಗದ ಸಂಗತಿಯಾಗಿದ್ದರೂ ಅದು ಸತ್ಯ. ಹೇಗೆಂದರೆ, ಸಿಕಂದರ್​ ರಾಜಾ ಅವರು ಪಾಕಿಸ್ತಾನ ಮೂಲದ ಕ್ರಿಕೆಟಿಗರಾಗಿದ್ದರೂ ಅವರು ಆಡುತ್ತಿರುವುದು ಜಿಂಬಾಬ್ವೆ ಕ್ರಿಕೆಟ್​ ತಂಡಕ್ಕೆ. ಅಲ್ಲದೆ ಜಿಂಬಾಬ್ವೆ ತಂಡದ ಸ್ಟಾರ್​ ಆಲ್​ರೌಂಡರ್​ ಹಾಗೂ ನಾಯಕ ಕೂಡ. ಹೀಗಾಗಿ ಅವರು ಹರಾಜಿನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದರು. ಇದರ ಮೂಲಕ ಬಾರಿ ಜಿಂಬಾಬ್ವೆ ಆಟಗಾರನೂ ಅವಕಾಶ ಪಡೆದಂತಾಗಿದೆ.

ಇನ್ನೂ ನಮೀಬಿಯಾ ತಂಡದ ವೇಗದ ಬೌಲರ್ ಡೇವಿಡ್​ ವೈಸ್ ಕೂಡ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಂಡು 1 ಕೋಟಿ ರೂಪಾಯಿ ಪಡೆಯಲು ಶಕ್ತರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ನಮೀಬಿಯಾ ಆಟಗಾರರೊಬ್ಬರು ಐಪಿಎಲ್​ನಲ್ಲಿ ಅವಕಾಶ ಪಡೆದಂತಾಗಿದೆ.

ಐರ್ಲೆಂಡ್​ನ ಆಟಗಾರನ ಎಂಟ್ರಿ

ಇನ್ನೂ ಐರ್ಲೆಂಡ್​ನ ವೇಗಿ ಜೋಶುವಾ ಲಿಟಲ್​ ಕೂಡ ಈ ಬಾರಿ ಐಪಿಎಲ್​ ಹರಾಜಿನ ಮೂಲಕ ಗುಜರಾತ್​ ಜಯಂಟ್ಸ್​ ತಂಡ ಸೇರಿಕೊಂಡಿದ್ದಾರೆ. ಅವರಿಗೆ ಗುಜರಾತ್​ ಜಯಂಟ್ಸ್ ತಂಡ 4.4 ಕೋಟಿ ರೂಪಾಯಿ ನೀಡಿದೆ. ಅವರು ಮೂಲ ಬೆಲೆ 50 ಲಕ್ಷ ರೂಪಾಯಿಗಳಾಗಿತ್ತು. ಈ ಮೂಲಕ ಐರ್ಲೆಂಡ್​ ಆಟಗಾರರೊಬ್ಬರೂ ಐಪಿಎಲ್​ಗೆ ಎಂಟ್ರಿ ಗಿಟ್ಟಿಸಿಕೊಂಡರು.

ಇದನ್ನೂ ಓದಿ | IPL Auction | ಐಪಿಎಲ್​ನಲ್ಲಿ ಈ ಬಾರಿ ಗರಿಷ್ಠ ಪ್ರಮಾಣದ ನಷ್ಟ ಅನುಭವಿಸಿದ ಆಟಗಾರರು ಯಾರು? ಇಲ್ಲಿದೆ ವಿವರ

Exit mobile version