Site icon Vistara News

U19 T20 World Cup : ಐಸಿಸಿ 19ರ ವಯೋಮಿತಿಯ ತಂಡದಲ್ಲಿ ಶಫಾಲಿ ವರ್ಮಾ ಸೇರಿ ಮೂವರು ಭಾರತೀಯರಿಗೆ ಸ್ಥಾನ

under 19 cricket team

#image_title

ದುಬೈ: ಐಸಿಸಿ 19ರ ವಯೋಮಿತಿಯ ವಿಶ್ವ ಕಪ್ (U19 T20 World Cup)​ ಭಾನುವಾರ (ಜನವರಿ 29ರಂದು) ಮುಕ್ತಾಯಗೊಂಡಿದ್ದು, ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಸೋಲಿಸಿರುವ ಭಾರತ ತಂಡ ಟ್ರೋಫಿ ಜಯಿಸಿದೆ. ಟೂರ್ನಿ ಮುಕ್ತಾಯದ ಬೆನ್ನಲ್ಲೇ ಐಸಿಸಿ, ಅತ್ಯುತ್ತಮ ಪ್ರದರ್ಶನ ನೀಡಿದ 12 ಆಟಗಾರ್ತಿಯರನ್ನು ಸೇರಿಸಿಕೊಂಡು ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಸೇರಿದಂತೆ ಮೂವರು ಸ್ಥಾನ ಪಡೆದುಕೊಂಡಿದ್ದಾರೆ. ಯಾವುದೇ ಒಂದು ಟೂರ್ನಿ ಮುಗಿದ ಬಳಿಕ ಐಸಿಸಿ ಈ ಮಾದರಿಯ ತಂಡವೊಂದನ್ನು ಘೋಷಿಸುತ್ತದೆ ಹಾಗೂ ಉತ್ತಮ ಪ್ರದರ್ಶನ ತೋರಿದವರಿಗೆ ಅಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ.

ಭಾರತ ತಂಡದ ನಾಯಕಿಯಾಗಿರುವ ಶಫಾಲಿ ವರ್ಮಾ ಟೂರ್ನಿಯುದ್ಧಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಅವರಿಗೆ ತಂಡದಲ್ಲಿ ಅವಕಾಶ ದೊರಕಿದೆ. ಆರಂಭಿಕ ಬ್ಯಾಟರ್​ ಶ್ವೇತಾ ಸೆಹ್ರಾವತ್​ ತಂಡದಲ್ಲಿ ಅವಕಾಶ ಪಡೆದ ಮತ್ತೊಬ್ಬ ಆಟಗಾರ್ತಿ. ಅವರು ಒಟ್ಟು 99 ಸರಾಸರಿಯಲ್ಲಿ 139.43 ಸ್ಟ್ರೈಕ್​ರೇಟ್​ನಂತೆ 297 ರನ್​ಗಳನ್ನು ಬಾರಿಸಿದ್ದಾರೆ.

ಬೌಲರ್​ ಪಾರ್ಶವಿ ಚೋಪ್ರಾ ತಂಡದಲ್ಲಿ ಅವಕಾಶ ಪಡೆದ ಮತ್ತೊಂದು ಪ್ರತಿಭೆ. ಅವರು ಟೂರ್ನಿಯಲ್ಲಿ ಒಟ್ಟಾರೆ 11 ವಿಕೆಟ್​ಗಳನ್ನು ಕಬಳಿಸಿದ್ದು ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ 5 ರನ್​ಗಳಿಗೆ ನಾಲ್ಕು ವಿಕೆಟ್​ ಮಿಂಚಿದ್ದರು.

ಇದನ್ನೂ ಓದಿ : Shweta Sehrawat: 19ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್​ನಲ್ಲಿ ಶ್ವೇತಾ ಸೆಹ್ರಾವತ್​ ಸಾಧನೆಗಳು

ತಂಡ ಇಂತಿದೆ

ಶ್ವೇತಾ ಸೆಹ್ರಾವತ್ (ಭಾರತ), ಗ್ರೇಸ್ ಸ್ಕ್ರಿವೆನ್ಸ್ (ಇಂಗ್ಲೆಂಡ್​-ನಾಯಕಿ), ಶಫಾಲಿ ವರ್ಮಾ (ಭಾರತD), ಜಾರ್ಜಿಯಾ ಪ್ಲಿಮ್ಮರ್ (ನ್ಯೂಜಿಲ್ಯಾಂಡ್​), ದೇವ್ಮಿ ವಿಹಂಗಾ (ಶ್ರೀಲಂಕಾ), ಶೋರ್ನಾ ಅಕ್ಟರ್ (ಬಾಂಗ್ಲಾದೇಶ), ಕರಾಬೊ ಮೆಸೊ (ದಕ್ಷಿಣ ಆಫ್ರಿಕಾ), ಪಾರ್ಶವಿ ಚೋಪ್ರಾ (ಭಾರತ), ), ಹನ್ನಾ ಬೇಕರ್ (ಇಂಗ್ಲೆಂಡ್​), ಎಲ್ಲೀ ಆಂಡರ್ಸನ್ (ಇಂಗ್ಲೆಂಡ್​), ಮ್ಯಾಗಿ ಕ್ಲಾರ್ಕ್ (ಆಸ್ಟ್ರೇಲಿಯಾ), ಅನೋಶಾ ನಾಸಿರ್ (ಪಾಕಿಸ್ತಾನ-12 ನೇ ಆಟಗಾರ್ತಿ)

Exit mobile version