Site icon Vistara News

Avani Lekhara: ಹುಲಿ ಮರಿಗೆ ಪ್ಯಾರಾ ಒಲಿಂಪಿಯನ್​ ​ಅವನಿ ಲೇಖರ ಹೆಸರಿಟ್ಟ ರಾಜಸ್ಥಾನ​ ಸರ್ಕಾರ

Paralympic Medallist Avani Lekhara

ಜೈಪುರ: ಟೋಕಿಯೊ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟ ಮಹಿಳಾ ಶೂಟರ್ ಅವನಿ ಲೇಖರ(Paralympic Medallist Avani Lekhara) ಅವರ ಹೆಸರನ್ನು ರಾಜಸ್ಥಾನ ಸರ್ಕಾರ(Government of Rajasthan) ಇಲ್ಲಿನ ಹುಲಿ ಮರಿಯೊಂದಕ್ಕೆ ಇಟ್ಟಿದೆ. ಈ ಮೂಲಕ ಅವರ ಸಾಧನೆಗೆ ಗೌರವವೊಂದನ್ನು ನೀಡಲಾಗಿದೆ.

ಇಲ್ಲಿನ ರಣಥಂಬೋರ್‌(Ranthambore) ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಮೂರು ಹುಲಿ ಮರಿಗಳಲ್ಲಿ ಒಂದಕ್ಕೆ ಅವನಿ ಲೇಖರ ಅವರ ಹೆಸರನ್ನು ಇಡಲಾಗಿದೆ. ಈ ವಿಚಾರವನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್(Ashok Gehlot)​ ಅವರು ಟ್ವಿಟ್​ ಮಾಡುವ ಮೂಲಕ ತಿಳಿಸಿದ್ದಾರೆ. ಇನ್ನೆರಡು ಹುಲಿ ಮರಿಗೆ ಚಿರಂಜೀವಿ ಮತ್ತು ಚಿರಾಯು ಎಂದು ನಾಮಕರಣ ಮಾಡಲಾಗಿದೆ. ‘ಅಂತಾರಾಷ್ಟ್ರೀಯ ಹುಲಿ ದಿನ’ವನ್ನು ಐತಿಹಾಸಿಕವಾಗಿ ಆಚರಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಶೋಕ್‌ ಗೆಹಲೋಟ್ ಹೇಳಿದರು. ಈ ಹಿಂದೆ ಜನಿಸಿದ ಹೆಣ್ಣು ಹುಲಿ ಮರಿಗೆ ಕಾಮನ್‌ವೆಲ್ತ್‌ ಚಿನ್ನದ ಪದಕ ವಿಜೇತೆ ಕೃಷ್ಣ ಪೂನಿಯಾ ಅವರ ಹೆಸರನ್ನು ಇಡಲಾಗಿತ್ತು.

“ದೇಶದಲ್ಲಿ ಹುಲಿಗಳು ವಿನಾಶದ ಅಂಚಿನಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1973ರಲ್ಲಿ ‘ಪ್ರಾಜೆಕ್ಟ್ ಟೈಗರ್’ ಎನ್ನುವ ಯೋಜನೆಯನ್ನು ಜಾರಿಗೆ ತರುವ ಮೂಲಕ ಹುಲಿಗಳ ಸಂರಕ್ಷಣೆ ಆರಂಭವಾಯಿತು. ಸದ್ಯ ಭಾರತದಲ್ಲಿ ಹುಲಿ ಸಂರಕ್ಷಣೆಯ ಅಭಿಯಾನದಡಿ ಹುಲಿಗಳ ಸಂಖ್ಯೆ ವೃದ್ದಿಸಿದ್ದರೂ ಈ ಅಭಿಯಾನಕ್ಕೆ ಇನ್ನೂ ದೊಡ್ಡ ಮಟ್ಟದ ಬೆಂಬಲ ಬೇಕು’ ಎಂದು ಗೆಹಲೋಟ್ ತಿಳಿಸಿದರು.

ಇದನ್ನೂ ಓದಿ ರಾಜ ಮಾರ್ಗ ಅಂಕಣ | ಅವನಿಯ ಕಾಲುಗಳಲ್ಲಿ ಶಕ್ತಿಯೇ ಇಲ್ಲ; ಆದರೆ, ಇಡೀ ದೇಶ ಎದ್ದು ನಿಂತು ಸಲಾಂ ಅನ್ನುತ್ತಿದೆ!

ಟೋಕಿಯೊ ಪ್ಯಾರಾ ಒಲಿಂಪಿಕ್ಸ್​ನ ಮಹಿಳಾ ಶೂಟಿಂಗ್​ನಲ್ಲಿ ಅವನಿ ಲೇಖರ ಅವರು 10 ಮೀಟರ್ ಏರ್​ ರೈಫಲ್ ವುಭಾಗದಲ್ಲಿ ಚಿನ್ನ ಮತ್ತು 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದರು. ವಿಶ್ವ ಚಾಂಪಿಯನ್​ಶಿಪ್​ನಲ್ಲಿಯೂ ಚಿನ್ನದ ಪದಕ ಜಯಿಸಿದ ಸಾಧನೆ ಇವರದ್ದಾಗಿದೆ.

Exit mobile version