ಮುಂಬಯಿ: ಟೀಮ್ ಇಂಡಿಯಾದ ಮುಂದಿನ ತಲೆಮಾರಿನ ತಾರೆಯರು ತಮ್ಮ ಟಿ20 ಸರಣಿಗಾಗಿ ಕೆರಿಬಿಯನ್ ದ್ವೀಪಗಳಿಗೆ ಹಾರಿದ್ದಾರೆ. ತಿಲಕ್ ವರ್ಮಾ, ಅವೇಶ್ ಖಾನ್, ರವಿ ಬಿಷ್ಣೋಯ್ ಅವರು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ 20 ಸರಣಿಗಾಗಿ ವೆಸ್ಟ್ ಇಂಡೀಸ್ಗೆ ಪ್ರಯಾಣ ಮಾಡುತ್ತಿರುವ ವಿಮಾನದ ಫೋಟೋಗಳು ಶೇರ್ ಆಗಿವೆ. ಅವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ವಿಮಾನದೊಳಗೆ ಒಟ್ಟಿಗೆ ಫೋಟೋ ತೆಗಿಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾಎರ. ಅವರಿಬ್ಬರು ಅಡಿಡಾಸ್ನ ಹೊಸ ಆಲ್ ಬ್ಲ್ಯಾಕ್ ಇಂಡಿಯಾ ತರಬೇತಿ ಜರ್ಸಿಯನ್ನು ಧರಿಸಿದ್ದರು. ಭಾರತ ಮತ್ತು ವಿಂಡೀಸ್ ನಡುವಿನ ಟಿ20 ಸರಣಿಗೆ ಮುನ್ನ ಅವರೆಲ್ಲರೂ ನಗುತ್ತಿದ್ದರು.
ವಿಮಾನದಲ್ಲಿ ಕಾಣಿಸಿಕೊಂಡ ಇನ್ನೊಬ್ಬ ಹೊಸ ಪೀಳಿಗೆಯ ಬ್ಯಾಟರ್ ತಿಲಕ್ ವರ್ಮಾ. ಟೀಮ್ ಇಂಡಿಯಾಕ್ಕೆ ಮೊದಲ ಬಾರಿಗೆ ಕರೆ ಪಡೆದ ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡದ ಯುವ ಬ್ಯಾಟರ್ ಆಡುವ ಉತ್ಸಾಹದಲ್ಲಿದ್ದಾರೆ. ಅವರ ಕೌತುಕವು ಫೋಟೋದಲ್ಲಿ ಕಾಣಬಹುದು ಸ್ಫೋಟಕ ಬ್ಯಾಟರ್ ಭಾರತದಿಂದ ವೆಸ್ಟ್ ಇಂಡೀಸ್ಗೆ ಹೋಗುವ ನಡುವೆ ಬಕೆಟ್ ಟೋಪಿ ಧರಿಸಿದ್ದರು.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ತಿಲಕ್ವರ್ಮಾ 47 ಐಪಿಎಲ್ ಪಂದ್ಯಗಳಲ್ಲಿ 142 ಕ್ಕೂ ಹೆಚ್ಚು ಸ್ಟ್ರೈಕ್ರೇಟ್ ಹೊಂದಿದ್ದಾರೆ. ಕಳೆದ ಎರಡು ಋತುಗಳಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದರಿಂದಾಗಿ ನಿಸ್ಸಂದೇಹವಾಗಿ ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ : Team India : 9 ವರ್ಷಗಳ ಬಳಿಕ ಒಡಿಐ ಪಂದ್ಯವನ್ನಾಡಲಿರುವ ಜಯದೇವ್ ಉನಾದ್ಕಟ್
ವೇಗಿ ಅವೇಶ್ ಖಾನ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದಾರೆ. ಸೆಪ್ಟೆಂಬರ್ಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಭಾರತವನ್ನು ಕೊನೆಯ ಬಾರಿಗೆ ಪ್ರತಿನಿಧಿಸಿದ್ದ ಬಿಷ್ಣೋಯ್ ಈ ಋತುವಿನಲ್ಲಿ ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು.
ವಿಂಡೀಸ್ ಟಿ20 ಸರಣಿಗೆ ಟೀಂ ಇಂಡಿಯಾ
ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಇಬ್ಬರು ಯುವ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ 5 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಅವರಿ ಅದು ಟಿ 20 ಸರಣಿಗೆ ಮೊದಲ ಕರೆ. ಸೂರ್ಯಕುಮಾರ್ ಯಾದವ್ ಅವರು ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದಲ್ಲಿ ಉಪನಾಯಕರಾಗಿ ಇರಲಿದ್ದಾರೆ. ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಆಯ್ಕೆಯಾಗಿರುವ ವೇಗಿ ಮುಖೇಶ್ ಕುಮಾರ್ ಅವರನ್ನು ಭಾರತ ಮತ್ತು ವಿಂಡೀಸ್ ವಿರುದ್ಧದ ಟಿ 20 ಸರಣಿಯ ಭಾರತ ತಂಡ ಒಳಗೊಂಡಿವೆ. ಭಾರತ ಮತ್ತು ವಿಂಡೀಸ್ ನಡುವಿನ ಟಿ20 ಸರಣಿ ಆಗಸ್ಟ್ 3ರಂದು ಟ್ರಿನಿಡಾಡ್ನಲ್ಲಿ ಆರಂಭವಾಗಲಿದೆ.
ಹಿರಿಯ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಈ ಮೂಲಕ ಅವರಿಬ್ಬರನ್ನು ಬಿಸಿಸಿಐ ಚುಟುಕು ಕ್ರಿಕೆಟ್ನಿಂದ ಹಂತಹಂತವಾಗಿ ತೆಗೆದು ಹಾಕಿದೆ ಎಂದು ಹೇಳಲಾಗುತ್ತಿದೆ.