ಗಯಾನಾ: ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ದ್ವಿತೀಯ ಟಿ20(West Indies vs India, 2nd T20) ಮುಖಾಮುಖಿಯಲ್ಲಿ ಭಾರತ ತಂಡ 2 ವಿಕೆಟ್ಗಳ ಸೋಲು ಕಂಡಿದೆ. ಸದ್ಯ 5ಪಂದ್ಯಗಳ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿದೆ. ಪಂದ್ಯ ಸೋತರೂ ತಿಲಕ್ ವರ್ಮಾ(Tilak Varma) ಅವರು ರಿಷಭ್ ಪಂತ್(Rishabh Pant) ಮತ್ತು ಸೂರ್ಯಕುಮಾರ್ ಯಾದವ್(suryakumar yadav) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 152 ರನ್ ಬಾರಿಸಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ ನಿಕೋಲಸ್ ಪೂರಣ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 18.5 ಓವರ್‌ಗಳಲ್ಲಿ 8 ವಿಕೆಟಿಗೆ 155 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತದ ಸರದಿಯಲ್ಲಿ ತಿಲಕ್ ವರ್ಮಾ ಅವರು ಅರ್ಧ ಶತಕ ಬಾರಿಸಿದೇ ಹೋಗಿದ್ದರೆ ತಂಡ 100 ಗಡಿ ದಾಟಯವುದು ಕಷ್ಟಕರವಾಗಿತ್ತು. ಒಟ್ಟು 41 ಎಸೆತಗಳನ್ನು ಎದುರಿಸಿದ ತಿಲಕ್ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಅಕೀಲ್ ಹೊಸೈನ್ಗೆ ವಿಕೆಟ್ ಒಪ್ಪಿಸಿದರು. ಇದು ಅವರ ಚೊಚ್ಚಲ ಅರ್ಧಶತಕವಾಗಿದೆ. ಮೊದಲ ಪಂದ್ಯದಲ್ಲಿ 39 ರನ್ ಬಾರಿಸಿದ್ದರು.
ಪಂತ್ ದಾಖಲೆ ಉಡೀಸ್
ದ್ವಿತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ರಿಷಭ್ ಪಂತ್ ಹೆಸರಿನಲ್ಲಿದ್ದ ದಾಖಲೆಯೊಂದು ಪತನಗೊಂಡಿತು. ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ 2ನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ತಿಲಕ್ ವರ್ಮಾ (21 ವರ್ಷ, 271 ದಿನಗಳು) ಪಾತ್ರದಾದರು. ರಿಷಭ್ ಪಂತ್ (21 ವರ್ಷ, 38 ದಿನಗಳು) ದಾಖಲೆ ಬರೆದಿದ್ದರು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (20 ವರ್ಷ, 143 ದಿನಗಳು) ಅಗ್ರಸ್ಥಾನದಲ್ಲಿದ್ದಾರೆ.
ಸೂರ್ಯ ದಾಖಲೆ ಪತನ
ಮೊದಲ ಟಿ20 ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದ ತಿಲಕ್ ವರ್ಮಾ ದ್ವಿತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೊಂದನ್ನು ಬರೆದರು. ಈ ಮೂಲಕ ಸೂರ್ಯಕುಮಾರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಸೂರ್ಯಕುಮಾರ್ ಯಾದವ್ ಅವರು 89 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ತಿಲಕ್ 90 ರನ್‌ಗಳೊಂದಿಗೆ ಸೂರ್ಯ ದಾಖಲೆಯನ್ನು ಮುರಿದರು. ಸೂರ್ಯಕುಮಾರ್ ಯಾದವ್ ಈ ಹಿಂದನಂತೆ ನಿರೀಕ್ಷಿತ ಪ್ರದರ್ಶನ ತೋರಿವಲ್ಲಿ ವಿಫಲವಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ Tilak Varma: ಚೊಚ್ಚಲ ಅರ್ಧಶತಕವನ್ನು ತಿಲಕ್ ವರ್ಮಾ ಅರ್ಪಿಸಿದ್ದು ಯಾರಿಗೆ? ಆಕೆಯ ಸಂಭ್ರಮ ಹೇಗಿತ್ತು?
ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಪಂತ್
ಕಳೆದ ಡಿಸೆಂಬರ್ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ರಿಷಭ್ ಪಂತ್ ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.