ಕೊಲಂಬೊ: ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಪದಾಪರ್ಣೆ ಮಾಡಿದ್ದ ತಿಲಕ್ ವರ್ಮಾ(Tilak Varma), ಇದೀಗ ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದಾರೆ. ಏಷ್ಯಾಕಪ್ನಲ್ಲಿ(Asia Cup 2023) ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದರು. ನಾಯಕ ರೋಹಿತ್ ಶರ್ಮ ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು.
ಭವಿಷ್ಯದ ಯುವರಾಜ್ ಸಿಂಗ್
ವೆಸ್ಟ್ ಇಂಡೀಸ್ ವಿರುದ್ಧ ಆಡಿದ 5 ಟಿ20 ಪಂದ್ಯಗಳಲ್ಲಿ ತಿಲಕ್ ವರ್ಮ 57.66 ಸರಾಸರಿಯಲ್ಲಿ ಮತ್ತು 140.65 ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಬಾರಿಸಿದ್ದರು. ಒಂದು ಅರ್ಧಶತಕ ಕೂಡ ಬಾರಿಸಿದ್ದರು. ಇದೇ ಕಾರಣಕ್ಕೆ ಅವನ್ನು ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿತ್ತು. ಯುವರಾಜ್ ಸಿಂಗ್ ಅವರಂತೆ ಬ್ಯಾಟ್ ಬೀಸಬಲ್ಲ ಈ ಆಟಗಾರ ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ.
ವಿಶ್ವಕಪ್ಗೆ ಆಯ್ಕೆ ಸಾಧ್ಯತೆ
ಈಗಾಗಲೇ ಭಾರತ ಏಕದಿನ ವಿಶ್ವಕಪ್ಗೆ 15 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಅವರು ಗಾಯಕೀಡಾಗಿದ್ದಾರೆ. ಅವರಿಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಕಾಡಿದೆ. ಇದೇ ಕಾರಣಕ್ಕೆ ಅವರು ಏಷ್ಯಾಕಪ್ನಲ್ಲಿ ಪಂದ್ಯಗಳನ್ನು ಆಡುತ್ತಿಲ್ಲ. ಅಲ್ಲದೆ ಬಿಸಿಸಿಐ ಕೂಡ ಅಯ್ಯರ್ ಸಂಪೂರ್ಣ ಫಿಟ್ ಆಗಿಲ್ಲ ಎಂದು ಹೇಳಿದೆ. ಇದೇ ಕಾರಣಕ್ಕೆ ತಿಲಕ್ ವರ್ಮ ಅವರನ್ನು ಬಾಂಗ್ಲಾ ವಿರುದ್ಧ ಆಡಿಸಿ ಉತ್ತಮ ಪ್ರದರ್ಶನ ತೋರಿದರೆ ಅಯ್ಯರ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವುದು ಬಿಸಿಸಿಐ ಯೋಜನೆಯಾಗಿದೆ.
ಆಸೀಸ್ ಏಕದಿನ ಸರಣಿಗೂ ಆಯ್ಕೆ ಸಾಧ್ಯತೆ
ಆಲ್ರೌಂಡರ್ ಮತ್ತು ಏಡಗೈ ಬ್ಯಾಟರ್ ಆಗಿರುವ ತಿಲಕ್ ವರ್ಮ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಅವಕಾಶ ನೀಡುವ ಸಾಧ್ಯತೆ ಇದೆ. ಇಲ್ಲಿ ಮೂರು ಪಂದ್ಯಗಳಲ್ಲಿಯೂ ಅವರನ್ನು ಆಡಿಸಿ ಒಂದೊಮ್ಮೆ ಅಯ್ಯರ್ ಫಿಟ್ ಆಗದಿದ್ದರೆ ಅವರ ಸ್ಥಾನಕ್ಕೆ ಬ್ಯಾಕ್ಅಪ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿ ಅನೇಕರು ತಿಲಕ್ಗೆ ವಿಶ್ವಕಪ್ನಲ್ಲಿ ಸ್ಥಾನ ನೀಡುವಂತೆ ಅಭಿಪ್ರಾಯಪಟ್ಟಿದ್ದರು. ಆದರೆ ಅವರು 15 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಒಟ್ಟಾರೆ ತಿಲಕ್ ವರ್ಮ ಬಾಂಗ್ಲಾ ವಿರುದ್ಧ ತೋರುವ ಪ್ರದರ್ಶನದ ಮತ್ತು ಅಯ್ಯರ್ ಅವರ ಫಿಟ್ನೆಸ್ ಭವಿಷ್ಯದ ಮೇಲೆ ವಿಶ್ವಕಪ್ ಸ್ಥಾನ ನಿರ್ಧಾರವಾಗಲಿದೆ.
ಇದನ್ನೂ ಓದಿ Tilak Varma: ಚೊಚ್ಚಲ ಅರ್ಧಶತಕವನ್ನು ತಿಲಕ್ ವರ್ಮಾ ಅರ್ಪಿಸಿದ್ದು ಯಾರಿಗೆ? ಆಕೆಯ ಸಂಭ್ರಮ ಹೇಗಿತ್ತು?
All set for his ODI debut! 👌👌
— BCCI (@BCCI) September 15, 2023
Congratulations to Tilak Varma as he receives his #TeamIndia ODI cap from captain Rohit Sharma 👏 👏#AsiaCup2023 | #INDvBAN pic.twitter.com/kTwSEevAtn
ಪಂತ್ ದಾಖಲೆ ಮರಿದಿದ್ದ ತಿಲಕ್
ವಿಂಡೀಸ್ ವಿರುದ್ಧದ ದ್ವಿತೀಯ ಟಿ20ಯಲ್ಲಿ ಅರ್ಧಶತಕ ಬಾರಿಸಿದ್ದ ತಿಲಕ್ ವರ್ಮ ಅವರು ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಅವರ ದಾಖಲೆ ಮುರಿದಿದ್ದರು. ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ 2ನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ತಿಲಕ್ ವರ್ಮಾ (21 ವರ್ಷ, 271 ದಿನಗಳು) ಪಾತ್ರರಾಗಿದ್ದರು. ರಿಷಭ್ ಪಂತ್ (21 ವರ್ಷ, 38 ದಿನಗಳು) ದಾಖಲೆ ಬರೆದಿದ್ದರು. ಇದಲ್ಲದೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಬರೆದು ಸೂರ್ಯಕುಮಾರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ್ದರು.