Site icon Vistara News

Tilak Varma: ವಿರಾಟ್​ ಕೊಹ್ಲಿಯ ದಾಖಲೆ ಮುರಿಯಲು ಸಿದ್ಧವಾದ ತಿಲಕ್​ ವರ್ಮಾ

tilak varma hitting six

ಫ್ಲೋರಿಡಾ: ವಿಂಡೀಸ್(IND vs WI)​ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ 21 ವರ್ಷದ ತಿಲಕ್​ ವರ್ಮಾ(Tilak Varma) ಇದೀಗ ಕಿಂಗ್​ ವಿರಾಟ್​ ಕೊಹ್ಲಿಯ(virat kohli) ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ. ಉಳಿದಿರುವ 2 ಪಂದ್ಯಗಳಲ್ಲಿ 93 ರನ್​ ಗಳಿಸಿದರೆ ಕೊಹ್ಲಿಯ ದಾಖಲೆ ಪತನಗೊಳ್ಳಲಿದೆ.

ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 39, 51, ಮತ್ತು 49* ರನ್​ ಗಳಿಸಿ ಒಟ್ಟು 139ರನ್​ ಗಳಿಸಿರುವ ತಿಲಕ್​ ವರ್ಮಾ ಮುಂದಿನ ಎರಡು ಪಂದ್ಯಗಳಲ್ಲಿ 93 ರನ್​ ಬಾರಿಸಿದರೆ ದ್ವಿಪಕ್ಷೀಯ ಸರಣಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಟೀಮ್​ ಇಂಡಿಯಾದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಆಗ ವಿರಾಟ್​ ಕೊಹ್ಲಿ ಅವರ ದಾಖಲೆ ಪತನಗೊಳ್ಳಲಿದೆ.

ವಿರಾಟ್​ ಕೊಹ್ಲಿ ಅವರು ಮಾರ್ಚ್ 2021ರಂದು ಇಂಗ್ಲೆಂಡ್​ನಲ್ಲಿ ನಡೆದ ತವರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಅಜೇಯ ಅರ್ಧಶತಕದ ನೆರವಿನಿಂದ 231 ರನ್​ ಗಳಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯಲು ತಿಲಕ್​ ವರ್ಮಾ ಸಜ್ಜಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರಿ ಗಮನ ಸೆಳೆಯುತ್ತಿರುವ ಅವರಿಗೆ ಈ ಸಾಧನೆ ಮುರಿಯುವುದು ಅಷ್ಟು ಕಷ್ಟಕರವಲ್ಲ. ಕೊಹ್ಲಿಯನ್ನು ಹೊರತುಪಡಿಸಿ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಆಟಗಾರನೆಂದರೆ ಕೆ.ಎಲ್​ ರಾಹುಲ್​. ನ್ಯೂಜಿಲ್ಯಾಂಡ್​ ವಿರುದ್ಧ ರಾಹುಲ್​ ಐದು ಪಂದ್ಯಗಳ ಟಿ20 ಸರಣಿಯಲ್ಲಿ 224 ರನ್ ಕಲೆಹಾಕಿದ್ದರು. ಇಶಾನ್​ ಕಿಶನ್​ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ಶ್ರೇಯಾಂಕದಲ್ಲಿಯೂ ಪ್ರಗತಿ

ನೂತನ ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ(ICC T20 Ranking) ಬರೋಬ್ಬರಿ 21 ಸ್ಥಾನಗಳ ಪ್ರಗತಿ ಸಾಧಿಸುವ ಮೂಲಕ ಜೀವನ ಶ್ರೇಷ್ಠ 46ನೇ ಸ್ಥಾನ ಪಡೆದಿದ್ದಾರೆ. ಯುವರಾಜ್​ ಸಿಂಗ್​ ಅವರಂತೆ ಬ್ಯಾಟ್​ ಬೀಸಬಲ್ಲ ಈ ಆಟಗಾರ ಭಾರತ ಕ್ರಿಕೆಟ್​ ತಂಡದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನುಳಿದ ಎರಡು ಟಿ20 ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದರೆ ಅವರ ಶ್ರೇಯಾಂಕದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

ಇದನ್ನೂ ಓದಿ Tilak Varma: ಚೊಚ್ಚಲ ಅರ್ಧಶತಕವನ್ನು ತಿಲಕ್​ ವರ್ಮಾ ಅರ್ಪಿಸಿದ್ದು ಯಾರಿಗೆ? ಆಕೆಯ ಸಂಭ್ರಮ ಹೇಗಿತ್ತು?

ಸೂರ್ಯ ದಾಖಲೆ ಮುರಿದ ತಿಲಕ್​

ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ತಿಲಕ್​ ವರ್ಮಾ ದ್ವಿತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆಯೊಂದನ್ನು ಬರೆದ್ದರು. ಈ ಮೂಲಕ ಸೂರ್ಯಕುಮಾರ್​(suryakumar yadav) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ್ದರು. ಸೂರ್ಯಕುಮಾರ್‌ ಯಾದವ್‌ ಅವರು 89 ರನ್​ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ತಿಲಕ್​ 90 ರನ್‌ಗಳೊಂದಿಗೆ ಸೂರ್ಯ ದಾಖಲೆಯನ್ನು ಮುರಿದಿದ್ದಾರೆ.

ಪಂತ್​ ದಾಖಲೆಯೂ ಪತನ​

ದ್ವಿತೀಯ ಪಂದ್ಯದಲ್ಲಿ ತಿಲಕ್​ ಮರ್ಮಾ ಅರ್ಧಶತಕ ಬಾರಿಸುತ್ತಿದ್ದಂತೆ ರಿಷಭ್​ ಪಂತ್(rishabh pant)​ ಹೆಸರಿನಲ್ಲಿದ್ದ ದಾಖಲೆಯೊಂದು ಪತನಗೊಂಡಿತ್ತು. ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ 2ನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ತಿಲಕ್ ವರ್ಮಾ (21 ವರ್ಷ, 271 ದಿನಗಳು) ಪಾತ್ರರಾಗಿದ್ದರು. ರಿಷಭ್ ಪಂತ್‌ (21 ವರ್ಷ, 38 ದಿನಗಳು) ದಾಖಲೆ ಬರೆದಿದ್ದರು.

Exit mobile version