Site icon Vistara News

IND vs ZIM | ಮೊದಲಿಗೆ ರಮಿಜ್‌ ರಾಜಾ ಅವರನ್ನು ಪಿಸಿಬಿಯಿಂದ ಕಿತ್ಹಾಕಿ ಎಂದ ಮಾಜಿ ಬೌಲರ್‌

ಇಸ್ಲಾಮಾಬಾದ್‌ : ದುರ್ಬಲ ಜಿಂಬಾಬ್ವೆ ವಿರುದ್ಧ ೧ ರನ್‌ಗಳ ಸೋಲಿಗೆ ಒಳಗಾಗಿರುವ ಪಾಕಿಸ್ತಾನ ಕ್ರಿಕೆಟ್‌ ತಂಡ ಆಘಾತಕ್ಕೆ ಒಳಗಾಗಿದೆ. ತಂಡದ ಸದಸ್ಯರಂತೂ ಆಕಾಶವೇ ಕಳಚಿ ಬಿದ್ದಂತೆ ಕುಳಿತಿದ್ದಾರೆ. ಅತ್ತ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಪರಸ್ಪರ ಆರೋಪಗಳು ಮತ್ತು ಕೆಸರೆರಚಾಟ ಮುಂದುವರಿದಿದೆ. ಅಂತೆಯೇ ಪಾಕಿಸ್ತಾನ ತಂಡದ ಮಾಜಿ ಬೌಲರ್‌ ಮೊಹಮ್ಮದ್ ಅಮಿರ್‌, ಪಿಸಿಬಿಯ ಮುಖ್ಯಸ್ಥ ರಮಿಜ್‌ ರಾಜಾ ಅವರೇ ಸೋಲಿಗೆ ಹೊಣೆ ಎಂದು ಆರೋಪಿಸಿದ್ದಾರೆ.

ಪಾಕ್‌ ತಂಡದ ಸೋಲಿನ ಬಳಿಕ ಟ್ವೀಟ್ ಮಾಡಿರುವ ಅವರು, ತಂಡದ ಆಯ್ಕೆಯಲ್ಲಿ ರಮಿಜ್‌ ಅವರು ಎಡವಿದ್ದಾರೆ. ಹೀಗಾಗಿ ಅವರೇ ಸೋಲಿಗೆ ಹೊಣೆ ಎಂದು ಬರೆದುಕೊಂಡಿದ್ದಾರೆ.

ಆರಂಭದಿಂದಲೇ ನಾನು ಹೇಳುತ್ತಿದ್ದೆ. ತಂಡದ ಅಯ್ಕೆ ಕಳಪೆಯಾಗಿದೆ. ಈಗ ಸೋಲಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ. ಪಿಸಿಬಿಯ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ದೊಡ್ಡ ಮನುಷ್ಯನನ್ನು ಪದಚ್ಯುತಿಗೊಳಿಸಲು ಇದು ಸೂಕ್ತ ಸಮಯ. ಅವರ ಪ್ರಕಾರ ತಾವೊಬ್ಬ ಉತ್ತಮ ಆಯ್ಕೆಗಾರ,” ಎಂಬುದಾಗಿ ಅಮಿರ್‌ ಬರೆದುಕೊಂಡಿದ್ದಾರೆ.

ಈ ಸೋಲಿನೊಂದಿಗೆ ಪಾಕಿಸ್ತಾನ ತಂಡದ ಸೆಮಿಫೈನಲ್‌ ಪ್ರವೇಶ ಕಷ್ಟಕರ ಎನಿಸಿದೆ. ಎರಡು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿದ | PAK VS ZIM | ಪಾಕಿಸ್ತಾನವನ್ನು ಬಗ್ಗುಬಡಿದ ಜಿಂಬಾಬ್ವೆ, ಬಾಬರ್​ ತಂಡದ ಸೆಮೀಸ್​ ಹಾದಿ ಇನ್ನು ದುರ್ಗಮ

Exit mobile version