Site icon Vistara News

TK Chathunni: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ, ಕೋಚ್​ ಟಿ.ಕೆ. ಚತುನ್ನಿ ನಿಧನ

TK Chathunni

TK Chathunni: Distinguished Football Coach TK Chathunni Dies At 75

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರ ಟಿ.ಕೆ.ಚತುನ್ನಿTK Chathunni) (75) ಅವರು ಬುಧವಾರ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು( ಬುಧವಾರ) ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿದೆ.

ಗೋಲ್‌ಕೀಪರ್‌ ಆಗಿದ್ದ ಚತುನ್ನಿ, ಕೇರಳ ಮತ್ತು ಗೋವಾ ತಂಡದ ಪರ ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಆಟಗಾರನಾಗಿ ಮಾತ್ರವಲ್ಲದೆ ಭಾರತೀಯ ಫುಟ್‌ಬಾಲ್‌ನ ಅತ್ಯುತ್ತಮ ತರಬೇತುದಾರರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. 40 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದಾರೆ.

ಇವರ ಮಾರ್ಗದರ್ಶನಲ್ಲಿ ಐ.ಎಂ.ವಿಜಯನ್, ಬ್ರೂನೊ ಕುಟಿನ್ಹೊ, ಜೊ ಪಾಲ್ ಅಂಚೇರಿ, ಸಿ.ವಿ.ಪಾಪ್ಪಚ್ಚನ್ ಹಾಗೂ ಶರಫಾಲಿಯಂತಹ ಖ್ಯಾತ ಫುಟ್​ಬಾಲ್ ಕ್ರೀಡಾಪಟುಗಳು ಬೆಳಕಿಗೆ ಬಂದಿದ್ದರು. 1979 ರಲ್ಲಿ ಅವರು ಕೇರಳದ ಸಂತೋಷ್ ಟ್ರೋಫಿ ತಂಡದ ತರಬೇತುದಾರರಾಗಿದ್ದರು. ಜತೆಗೆ ಮೋಹನ್ ಬಗಾನ್, ಡೆಂಪೊ ಗೋವಾ ಮತ್ತು ಎಫ್‌ಸಿ ಕೊಚ್ಚಿನ್ ಸೇರಿದಂತೆ ಹಲವಾರು ಪ್ರಸಿದ್ಧ ತಂಡಗಳಿಗೆ ತರಬೇತಿ ನೀಡಿದ ಹಿರಿಮೆಯೂ ಅವರದ್ದಾಗಿದೆ.

ಇದನ್ನೂ ಓದಿ Harbhajan Singh: ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್

‘ಫುಟ್ಬಾಲ್ ಮೈ ಸೋಲ್’ ಎಂಬ ಆತ್ಮಚರಿತ್ರೆಯನ್ನೂ ಕೂಡ ಬರೆದಿದ್ದಾರೆ. ಚತುನ್ನಿ ಅವರ ನಿಧನಕ್ಕೆ ಭಾರತೀಯ ಫುಟ್​ಬಾಲ್​ ಫೆಡರೇಶನ್​ ಸೇರಿ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಸಂತಾಪ ಸೂಚಿಸಿದ್ದಾರೆ.

ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

ದೋಹಾ: ಮಂಗಳವಾರ ನಡೆದಿದ್ದ ಫಿಫಾ ವಿಶ್ವಕಪ್(FIFA World Cup) ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್(India vs Qatar) ವಿರುದ್ಧ 2-1 ಗೋಲುಗಳ ಅಂತರದಿಂದ ಸೋತು ಐತಿಹಾಸಿಕ ಮೂರನೇ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಕಳೆದುಕೊಂಡಿತ್ತು. ಭಾರತದ ಈ ಸೋಲಿಗೆ ಈ ಪಂದ್ಯದಲ್ಲಿ ರೆಫರಿ ನೀಡಿರುವ ವಿವಾದಾತ್ಮಕ(Controversial Goal) ಗೋಲು ಪ್ರಮುಖ ಕಾರಣ ಎಂದು ರೆಫರಿ ಮತ್ತು ಸಂಘಟಕರ ವಿರುದ್ಧ ಎಲ್ಲಡೆ ವಿರೋಧ ವ್ಯಕ್ತವಾಗಿದೆ. ಈ ಕುರಿತು ದೂರು ದಾಖಲಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌(All India Football Federation) (ಎಐಎಫ್‌ಎಫ್‌) ತನಿಖೆಯನ್ನು ಬಯಸಿದೆ.

ಕತಾರ್‌ನ ಆಟಗಾರ ಅಬ್ದುಲ್ಲಾ ಅಲರಾಕ್ ಅವರ ‘ಫ್ರಿ-ಕಿಕ್’ ಅನ್ನು ಯೂಸೆಫ್ ಅಯೆಮ್ ಹೆಡರ್ ಮೂಲಕ ಭಾರತದ ಗೋಲು ಪೆಟ್ಟಿಗೆಗೆ ಸೇರಿಸಲು ಯತ್ನಿಸಿದರು. ಈ ವೇಳೆ ಭಾರತೀಯ ಗೋಲು ಕೀಪರ್ ಗುರ್ಪಿತ್ ಸಿಂಗ್ ಸಂಧು ಅವರು ಗೋಲು ಪೋಸ್ಟ್ ಸಮೀಪದಲ್ಲಿ ಚೆಂಡನ್ನು ತಡೆಯಲು ಯತ್ನಿಸಿದಾಗ ಕೈಯಿಂದ ಕೈಚೆಲ್ಲಿದ ಚೆಂಡು ಗೆರೆ ದಾಟಿ ಹೊರಗೆ ಹೋಯಿತು. ಇದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಆದರೆ ಈ ವೇಳೆ ಮೋಸದಾಟದ ಮೂಲಕ ಕತಾರ್ ಆಟಗಾರ ಹಶ್ಮಿ ಹುಸೇನ್ ಚೆಂಡನ್ನು ಮತ್ತೆ ಒಳಕ್ಕೆ ಒದ್ದಿದ್ದಾರೆ. ಈ ವೇಳೆ ಮತೋರ್ವ ಆಟಗಾರ ಯೂಸುಫ್ ಐಮೆನ್ ಚೆಂಡನ್ನು ಬಲೆಯೊಳಗೆ ಸೇರಿಸಿದ್ದಾರೆ. ರೆಫರಿ ಗೋಲ್​ ಎಂದು ತೀರ್ಪು ನೀಡಿದರು.

ಚೆಂಡು ಭಾರತೀಯ ಗೋಲು ಕೀಪರ್ ಕೈಗೆ ತಾಗಿ ಹೊರ ಹೋಗಿರುವುದು ಸ್ಪಷ್ಟವಾಗಿ ಕಂಡು ಬಂದರೂ ಕೂಡ ರೆಫರಿಗಳು ಕತಾರ್​ಗೆ ಯಾವ ಮಾನದಂಡದಲ್ಲಿ ಗೋಲು ನೀಡಿದರು ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ. ಫಿಫಾ ನಿಯಮದ ಪ್ರಕಾರ ಚೆಂಡು ಗೆರೆ ದಾಟಿದ ಬಳಿಕ ಆಟ ಅಲ್ಲಿಗೆ ನಿಲುಗಡೆಗೊಳ್ಳಬೇಕು. ಜತೆಗೆ ಕತಾರ್‌ಗೆ ‘ಕಾರ್ನರ್-ಕಿಕ್’ ನೀಡಬೇಕಿತ್ತು. ಆದರೆ ಇಲ್ಲಿ ಹೀಗಾಗಲಿಲ್ಲ.

Exit mobile version