Site icon Vistara News

Asia Cup- 2022 | ಶ್ರೀಲಂಕಾ, ಅಫಘಾನಿಸ್ತಾನ ನಡುವೆ ಇಂದು ಮೊದಲ ಹಣಾಹಣಿ

Asia cup-2022

ದುಬೈ : ಏಷ್ಯಾ ಕಪ್‌ ಟೂರ್ನಿಯ (Asia Cup- 2022) ಉದ್ಘಾಟನಾ ಪಂದ್ಯದಲ್ಲಿ ಇಂದು ಅಫಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಬಿ ಗುಂಪಿನಲ್ಲಿರುವ ಈ ತಂಡಗಳು ಗೆಲುವಿನ ಮೂಲಕ ಅಭಿಯಾನ ಆರಂಭಿಸುವ ಇರಾದೆ ಹೊಂದಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. 

ಟೂರ್ನಿಯಲ್ಲಿ ಐದು ಬಾರಿ ಟ್ರೋಫಿ ಗೆದ್ದು ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಶ್ರೀಲಂಕಾ ಹಿಂದಿನಷ್ಟು ಬಲಿಷ್ಠವಾಗಿಲ್ಲ. ಆಲ್‌ರೌಂಡರ್‌ ದಸುನ್‌ ಶನಕ ಅವರು ತಂಡದ ನಾಯಕರಾಗಿದ್ದಾರೆ. ತಂಡದ ಪ್ರಮುಖ ವೇಗದ ಬೌಲರ್‌ ಎನಿಸಿಕೊಂಡಿರುವ ದುಷ್ಮಾಂತ ಚಾಮೀರ ಟೂರ್ನಿಯಿಂದ ಔಟಾಗಿರುವುದು ದೊಡ್ಡ ಹಿನ್ನಡೆ. ಪಾತುಮ್‌ ನಿಸಂಕ, ಭಾನುಕಾ ರಾಜಪಕ್ಷ, ವಾನಿಂದು ಹಸರಂಗ ಹಾಗೂ ಮಹೀಶ್‌ ತೀಕ್ಷಣ ತಂಡದಲ್ಲಿರುವ ಪ್ರಭಾವಿ ಆಟಗಾರರಿದ್ದಾರೆ.

ಇತ್ತ ಟಿ20 ಲೀಗ್‌ಗಳಲ್ಲಿ ಕರಾಮತ್ತು ತೋರುವ ಅಫಘಾನಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ಮೊಹಮ್ಮದ್‌ ನಬಿ, ರಶೀದ್‌ ಖಾನ್‌ ಮತ್ತು ಹಝರತ್‌ ಉಲ್ಲಾ ಜಜೈ ಅವರಂತಹ ದಾಂಡಿಗರು ಈ ತಂಡದಲ್ಲಿದ್ದಾರೆ. ಹೀಗಾಗಿ ಮೊದಲ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಲಿದೆ.

ಪಂದ್ಯದ ತಾಣ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌

ಸಮಯ: ಭಾರತೀಯ ಕಾಲಮಾಣ ಪ್ರಕಾರ ರಾತ್ರಿ ೭.೩೦ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌ನಲ್ಲಿ ಲೈವ್‌ ವೀಕ್ಷಿಸಬಹುದು.

Exit mobile version