Site icon Vistara News

Neeraj Chopra | ಗರ್ಬಾ ನೃತ್ಯ ಮಾಡಿದ ಟೋಕಿಯೊ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ

neeraj chopra

ವಡೋದರಾ : ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್‌ ಎಸೆತಗಾರು ನೀರಜ್‌ ಚೋಪ್ರಾ ಅವರು ವಿಶ್ರಾಂತಿಯಲ್ಲಿದ್ದಾರೆ. ಡೈಮಂಡ್‌ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಬಳಿಕ ಅವರು ಯಾವುದೇ ಸ್ಪರ್ಧಾತ್ಮಕ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಮುಂದಿನ ವರ್ಷದ ಏಷ್ಯನ್‌ ಗೇಮ್ಸ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಅವರು ತಯಾರಿ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ನವರಾತ್ರಿ ಸಂಭ್ರಮದ ಜೋಶ್‌ನಲ್ಲಿದ್ದಾರೆ.

ಸಾಯ್‌ ಮೀಡಿಯಾ ಟ್ವಿಟರ್‌ ಹ್ಯಾಂಡಲ್‌ನಲ್ಲಿ ನೀರಜ್‌ ಚೋಪ್ರಾ ಅವರು ನವರಾತ್ರಿ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ. ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ಬೃಹತ್‌ ನವರಾತ್ರಿ ಉತ್ಸವದಲ್ಲಿ ನೀರಜ್‌ ಅವರು ಪಾಲ್ಗೊಂಡಿದ್ದು, ಅಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರು ಡಾನ್ಸ್‌ ಮಾಡಿದ್ದಾರೆ.

ನೀರಜ್‌ ಅವರು ಗುಜರಾತ್‌ನಲ್ಲಿ ನಡೆಯಲಿರುವ ನ್ಯಾಷನಲ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಕಳೆದ ೮ ತಿಂಗಳಲ್ಲಿ ಸತತ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಅವರಿಗೆ ವಿಶ್ರಾಂತಿ ಬೇಕು ಎಂಬುದಾಗಿ ಅವರ ಫಿಸಿಯೊ ತಿಳಿಸಿದ್ದಾರೆ. ಹೀಗಾಗಿ ಜ್ಯೂರಿಚ್‌ನಲ್ಲಿನಲ್ಲಿ ಡೈಮಂಡ್‌ ಲೀಗ್ ಬಳಿಕ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಅವರು ಘೋಷಿಸಿದ್ದಾರೆ.

ಇದನ್ನೂ ಓದಿ \National Games | ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ನ್ಯಾಷನಲ್ ಗೇಮ್ಸ್‌ನಿಂದ ವಿನಾಯಿತಿ

Exit mobile version