Site icon Vistara News

Boxing Federation of India ವಿರುದ್ಧ ದೌರ್ಜನ್ಯ ಆರೋಪ ಹೊರಿಸಿದ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್‌

Boxing Federation of India

ನವ ದೆಹಲಿ: ಭಾರತೀಯ ಬಾಕ್ಸಿಂಗ್ ಒಕ್ಕೂಟ (Boxing Federation of India) ನನ್ನ ಮೇಲೆ ಮಾನಸಿಕ ದೌರ್ಜನ್ಯ ಎಸಗುತ್ತಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಆರೋಪಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ಗಾಗಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ಗೆ ತೆರಳಿರುವ ಅವರು ಅಲ್ಲಿಂದಲೇ ಟ್ವೀಟ್ ಮೂಲಕ ಆರೋಪ ಹೊರಿಸಿದ್ದಾರೆ. ಒಕ್ಕೂಟ ರಾಜಕೀಯ ಮಾಡುತ್ತಿದ್ದು ಸ್ಪರ್ಧೆಯ ಕಡೆಗೆ ಗಮನ ಕೊಡಲು ನನಗೆ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪದೇ ಪದೆ ನನ್ನ ಕೋಚ್‌ಗಳನ್ನು ಬದಲಿಸಲಾಗಿದೆ. ಒಬ್ಬರಿಗೆ ಕಾಮನ್ವೆಲ್ತ್‌ ಗೇಮ್ಸ್‌ ಕ್ರೀಡಾ ಗ್ರಾಮಕ್ಕೆ ಕಳುಹಿಸಿಲ್ಲ. ಇಂಗ್ಲೆಂಡ್‌ ಬಂದಿದ್ದ ಇನ್ನೊಬ್ಬರನ್ನು ವಾಪಸ್‌ ಭಾರತಕ್ಕೆ ಕಳುಹಿಸಲಾಗಿದೆ. ಒಕ್ಕೂಟದ ರಾಜಕೀಯದಿಂದ ನನಗೆ ಸ್ಪರ್ಧೆಯ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗದೆ ಪದಕ ಗೆಲ್ಲವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಆದಾಗ್ಯೂ ರಾಜಕೀಯಕ್ಕೆ ಕಿಮ್ಮತ್ತು ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಸ್ಸಾಮನ್‌ ಬಾಕ್ಸರ್‌

ಲವ್ಲಿನಾ ಬೊರ್ಗೊಹೈನ್‌ ಅಸ್ಸಾಮ್‌ನ ಮೊದಲ ಬಾಕ್ಸರ್‌ ಆಗಿದ್ದು, ಟೋಕಿಯೊ ಒಲಿಂಪಿಕ್ಸ್‌ನ ೬೦ ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೂರನೇ ಬಾಕ್ಸರ್‌ ಎನಿಸಿಕೊಂಡಿದ್ದರು. ಅದಕ್ಕಿಂದ ಹಿಂದೆ ವಿಜೇಂದ್ರ ಸಿಂಗ್‌ (೨೦೦೮), ಮೇರಿ ಕೋಮ್‌ (೨೦೧೨) ಈ ಸಾಧನೆ ಮಾಡಿದ್ದರು. ಅಂತೆಯೇ ಲವ್ಲಿನಾ ಅವರು ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಅಲ್ಲಿಂದಲೇ ಅವರು ತಮಗೆ ತೊಂದರೆ ಆಗುತ್ತಿದೆ ಎಂದು ಟ್ವೀಟ್‌ನಲ್ಲಿ ದೂರಿದ್ದಾರೆ.

Boxing Federation of India ನನಗೆ ಮಾನಸಿಕ ದೌರ್ಜನ್ಯ ನೀಡುತ್ತಿರುವ ಬಗ್ಗೆ ಹೇಳಲು ನನಗೆ ಸಾಕಷ್ಟು ಬೇಸರ ಎನಿಸುತ್ತಿದೆ. ಒಲಿಂಪಿಕ್‌ ಪದಕ ಗೆಲ್ಲುವುದಕ್ಕೆ ನನಗೆ ಸಹಾಯ ಮಾಡಿದ್ದ ಕೋಚ್‌ ಸಂಧ್ಯಾ ಗುರುಂಗ್ಜಿ ಅವರಿಗೆ ಕಾಮನ್ವೆಲ್ತ್‌ ಕ್ರೀಡಾ ಗ್ರಾಮಕ್ಕೆ ಪ್ರವೇಶ ಮಾಡಲು ಅವಕಾಶ ಕೊಡಲಿಲ್ಲ. ಹೀಗಾಗಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಟೂರ್ನಿ ಆರಂಭಕ್ಕೆ ೮ ದಿನ ಮೊದಲೇ ಅಭ್ಯಾಸ ಮೊಟಕುಗೊಳಿಸಲಾಗಿದೆ. ನನ್ನ ಎರಡನೇ ಕೋಚ್ ಅವರನ್ನೂ ಭಾರತಕ್ಕೆ ವಾಪಸ್‌ ಕಳುಹಿಸಲಾಗಿದೆ. ನಾನು ಮಾಡಿರುವ ಮನವಿಗೆ ಒಪ್ಪಲಿಲ್ಲ. ಇಷ್ಟೊಂದು ಮಾನಸಿಕ ದೌರ್ಜನ್ಯ ಎಸಗಿದರೆ ಅಭ್ಯಾಸ ನಡೆಸುವುದು ಹೇಗೆ. ಆದರೆ, ನಾನು ಈ ರಾಜಕೀಯಕ್ಕೆ ಬಗ್ಗುವುದಿಲ್ಲ. ದೇಶಕ್ಕಾಗಿ ಪದಕ ಗೆಲ್ಲಲು ಪ್ರಯತ್ನ ಮುಂದುವರಿಸುವೆ,” ಎಂದು ಹೇಳಿದ್ದಾರೆ.

ಜುಲೈ ೮ರಿಂದ ಆಗಸ್ಟ್‌ ೨೮ರಿಂದ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆಯಲಿದ್ದು, ಭಾರತದ ಅಥ್ಲೀಟ್‌ಗಳ ನಿಯೋಗ ಅಲ್ಲಿಗೆ ತೆರಳಿದೆ.

Exit mobile version