ಕರಾಚಿ: ಪಾಕಿಸ್ತಾನದ ಸ್ಟಾರ್ ಸ್ನೂಕರ್(Top Pakistani snooker) ಹಾಗೂ ಏಷ್ಯನ್ ಅಂಡರ್-21 ಸ್ಪರ್ಧೆಯ ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಅವರು ಆತ್ಮಹತ್ಯೆ(Majid Ali Suicide) ಮಾಡಿಕೊಂಡಿದ್ದಾರೆ. ಪಾಕಿಸ್ತಾನ ಪಂಜಾಬ್ ಪಾಂತ್ಯದ ಫೈಸಲಾಬಾದ್ನಲ್ಲಿ(Faisalabad) ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಚಾರವನ್ನು ಅವರ ಕುಟುಂಬ ಮೂಲಗಳು ಶುಕ್ರವಾರ ಅಧಿಕೃತವಾಗಿ ತಿಳಿಸಿದೆ.
ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. “ಮಜೀದ್ ತನ್ನ ಹದಿಹರೆಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದರು. ಆದರೆ ಆತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದು ಸಹೋದರ ಉಮರ್ ಹೇಳಿದರು. ಮಜೀದ್ ಸಾವಿಗೆ ಪಾಕಿಸ್ತಾನದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಮಿತಿಯ ಅಧ್ಯಕ್ಷ ಅಲಂಗೀರ್ ಶೇಖ್(Alamgir Sheikh) ಸೇರಿ ಅನೇಕ ವಿಶ್ವ ಮಟ್ಟದ ಬಿಲಿಯರ್ಡ್ಸ್ಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ World Cup 2023 : ಪಾಕಿಸ್ತಾನದ ಗೊಡ್ಡು ಬೆದರಿಕೆ ಠುಸ್; ಭಾರತ ಹೇಳಿದ್ದೇ ಫೈನಲ್!
ಕಳೆದ ಒಂದು ತಿಂಗಳಲ್ಲಿ ಪಾಕ್ನಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರ ಮಜೀದ್ ಅಲಿ. ಕಳೆದ ತಿಂಗಳು, ಮತ್ತೊಬ್ಬ ಅಂತಾರಾಷ್ಟ್ರೀಯ ಸ್ನೂಕರ್ ಆಗುಗಿದ್ದ ಮುಹಮ್ಮದ್ ಬಿಲಾಲ್(Muhammad Bilal) ಹೃದಯ ಸ್ತಂಭನದಿಂದ ನಿಧನ ಹೊಂದಿದ್ದರು.
ಹೃದಯಾಘಾತದಿಂದ ಸಾವನ್ನಪಿದ್ದ ಬ್ಯಾಡ್ಮಿಂಟನ್ ಆಟಗಾರ
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸೆಕ್ಟರ್ 21 ಎನಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದರು.
ಸೆಕ್ಟರ್ 11ನೇ ನಿವಾಸಿಯಾಗಿರುವ ಮಹೇಂದ್ರ ಶರ್ಮಾ ಅವರು ಕಳೆದ ಐದು ವರ್ಷದಿಂದ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅಷ್ಟರಮಟ್ಟಿಗೆ ಅವರು ಆರೋಗ್ಯದ ಕಡೆ ಗಮನ ಹರಿಸುತ್ತಿದ್ದರು. ಆದರೆ, ಏಕಾಏಕಿ ಹಾರ್ಟ್ ಅಟಾಕ್ ಆಗಿ ಅವರು ಮೃತಪಟ್ಟಿರುವುದು ದುಃಖದ ವಿಚಾರ ಎಂದು ಮಹೇಂದ್ರ ಶರ್ಮಾ ಗೆಳೆಯರು ವಿಷಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ, ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.