Site icon Vistara News

IND VS NZ | ನ್ಯೂಜಿಲೆಂಡ್​ ಮತ್ತು ಭಾರತ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ

New Zealand vs India, 1st T20I

ವೆಲ್ಲಿಂಗ್ಟನ್​: ಪ್ರವಾಸಿ ಟೀಮ್​ ಇಂಡಿಯಾ ಮತ್ತು ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಟಾಸ್​ ವಿಳಂಬಗೊಂಡಿದೆ. ಮಳೆ ನಿಂತ ಬಳಿಕ ಪಂದ್ಯ ಆರಂಭಗೊಳ್ಳುವ ನಿರೀಕ್ಷೆ ಇದೆ.

ಪಿಚ್​ ರಿಪೋರ್ಟ್​

ಸಾಮಾನ್ಯವಾಗಿ ನ್ಯೂಜಿಲೆಂಡ್​ ಪಿಚ್​ಗಳಲ್ಲಿ ರನ್​ ಪ್ರವಾಹ ಹರಿದರೂ, ವೆಲ್ಲಿಂಗ್ಟನ್​ ಮೈದಾನದ ಪಿಚ್​ ಕೊಂಚ ಭಿನ್ನವಾದುದು. ಇಲ್ಲಿನ ಸರಾಸರಿ ಮೊದಲ ಇನಿಂಗ್ಸ್​ ಮೊತ್ತ 160. ಆದ್ದರಿಂದ ಈ ಪಂದ್ಯವೂ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುವುದು ಅನುಮಾನ ಎನ್ನಬಹುದು. ಇನ್ನು ಈ ಮೈದಾನದಲ್ಲಿ 20 ತಿಂಗಳ ಬಳಿಕ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ.

ಸಂಭಾವ್ಯ ತಂಡ

ಭಾರತ ತಂಡ

ಇಶಾನ್​ ಕಿಶನ್​, ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​/ಸಂಜು ಸ್ಯಾಮ್ಸನ್​, ದೀಪಕ್​ ಹೂಡಾ, ಸೂರ್ಯಕುಮಾರ್​ ಯಾದವ್​, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ಅರ್ಶ್​ದೀಪ್​ ಸಿಂಗ್​, ಹರ್ಷಲ್​ ಪಟೇಲ್​, ಉಮ್ರಾನ್​ ಮಲಿಕ್​. ಭುವನೇಶ್ವರ್​ ಕುಮಾರ್​.

ನ್ಯೂಜಿಲೆಂಡ್​:

ಫಿನ್​ ಅಲೆನ್​, ಡೆವೋನ್ ಕಾನ್ವೆ, ಕೇನ್​ ವಿಲಿಯಮ್ಸನ್​, ಗ್ಲೆನ್​ ಫಿಲಿಪ್ಸ್​, ಡ್ಯಾರಿಲ್​ ಮಿಚೆಲ್​, ಜೇಮ್ಸ್​ ನೀಶಮ್​, ಮಿಚೆಲ್​ ಸ್ಯಾಂಟ್ನರ್​, ಟಿಮ್​ ಸೌಥಿ, ಲಾಕಿ ಫರ್ಗ್ಯುಸನ್​, ಆಡಂ ಮಿಲ್ನೆ. ಐಶ್​ ಸೋಧಿ.

ಇದನ್ನೂ ಓದಿ | IND VS NZ | ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ಟಿ20 ಸಾಧನೆ ಹೇಗಿದೆ?

Exit mobile version