ಮೊಹಾಲಿ : ಭಾರತ ವಿರುದ್ಧದ ಮೂರು ಪಂದ್ಯಗಳ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡ ವಿಶೇಷ ದಾಖಲೆಯೊಂದನ್ನು ಮಾಡಿದೆ. ಈ ಪಂದ್ಯದಲ್ಲಿ ಭಾರತ ನೀಡಿದ್ದ ೨೦೮ ರನ್‌ಗಳಿಗೆ ಪ್ರತಿಯಾಗಿ ನಿಗದಿತ ೨೦ ಓವರ್‌ಗಳಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ೨೧೧ ರನ್ ಬಾರಿಸಿದ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾ ವಿರುದ್ಧ ಗರಿಷ್ಠ ರನ್‌ಗಳ ಚೇಸಿಂಗ್ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಹಾರ್ದಿಕ್ ಪಾಂಡ್ಯ ಅವರು ಸ್ಫೋಟಕ ೭೧ ರನ್ ಹಾಗೂ ಕೆ. ಎಲ್ ರಾಹುಲ್ (೫೫) ಅರ್ಧ ಶತಕದ ನೆರವಿನಿಂದ ೨೦೮ ರನ್ ಬಾರಿಸಿತ್ತು. ಬ್ಯಾಟಿಂಗ್‌ಗೆ ಪೂರಕವಾಗಿದ್ದ ಈ ಪಿಚ್‌ನಲ್ಲಿ ಗೆಲುವು ಸರಳವಾಗಿರಲಿಲ್ಲ. ಆದರೆ, ಆಸ್ಟ್ರೇಲಿಯಾ ತಂಡ ಕ್ಯಾಮೆರಾನ್ ಗ್ರೀನ್ (೬೧), ಸ್ಟೀವ್ ಸ್ಮಿತ್ (೩೫), ಮ್ಯಾಥ್ಯೂ ವೇಡ್ (೪೫) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬಲಿಷ್ಠ ಟೀಮ್ ಇಂಡಿಯಾದ ವಿರುದ್ಧ ಬೃಹತ್ ಜಯ ಸಾಧಿಸಿತು. ಇದಕ್ಕಿಂತ ಮೊದಲು ೨೦೧೯ರಲ್ಲಿ ಭಾರತ ವಿರುದ್ಧ ೧೯೧ ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿತ್ತು.
ಭಾರತ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲು ವೈಫಲ್ಯಗೊಂಡ ಕಾರಣ ಭಾರತ ತಂಡದ ಸೋಲಿಗೆ ಒಳಗಾಗಿದೆ ಎಂಬುದಾಗಿ ಕ್ರಿಕೆಟ್ ಪಂಡಿತರ ಅಭಿಪ್ರಾಯಪಟ್ಟಿದ್ದಾರೆ.’
ಇದನ್ನೂ ಓದಿ | IND vs AUS | ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 4 ವಿಕೆಟ್ ಸೋಲು