Site icon Vistara News

TPL SEASON 2: ಇಂದಿನಿಂದ ನಾಲ್ಕು ದಿನಗಳ ಕಾಲ ಕಿರುತೆರೆ ತಾರೆಯರ ಕ್ರಿಕೆಟ್ ರಂಗು

TPL SEASON 2: TV star cricket rang for four days from today

TPL SEASON 2: TV star cricket rang for four days from today

ಬೆಂಗಳೂರು: ಬಹುನಿರೀಕ್ಷಿತ ಎರಡನೇ ಆವೃತ್ತಿಯ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್​ಗೆ(TPL SEASON 2) ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಚಾಲನೆ ಸಿಕ್ಕಿದೆ. ಈ ಟೂರ್ನಿ ನಾಲ್ಕು ದಿನಗಳ ಕಾಲ ನೆಯಲಿದೆ.

ಇಷ್ಟು ದಿನ ಕಿರುತೆರೆಯಲ್ಲಿ ರಂಜಿಸುತ್ತಿದ್ದ ಕಲಾವಿದರು ಈ ಕ್ರಿಕೆಟ್​ ಟೂರ್ನಿಗಾಗಿ ಬಿಡುವು ಮಾಡಿಕೊಂಡು ಬ್ಯಾಟ್ ಬಾಲ್ ಹಿಡಿದು ಮೈದಾನದಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಮೊದಲ ಆವೃತ್ತಿಗೆ ಉತ್ತಮ ಬೆಂಬಲ ಸಿಕ್ಕ ಕಾರಣ ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಸುನೀಲ್ ಕುಮಾರ್.ಬಿ.ಆರ್ ಸೀಸನ್ 2 ಮಾಡಲು ನಿರ್ಧರಿಸಿದರು. ಇದೀಗ 2ನೇ ಆವೃತ್ತಿಗೆ ಭಾನುವಾರ(ಮಾರ್ಚ್​ 12) ಚಾಲನೆ ದೊರೆತಿದೆ. ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿದೆ.

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ TPL SEASON 2: ಮಾರ್ಚ್ 12ರಿಂದ ಕಿರುತೆರೆ ತಾರೆಯರ ಕ್ರಿಕೆಟ್ ರಂಗು ಆರಂಭ

ಎಲ್ಲ ತಂಡಗಳಿಗೂ ಬ್ರ್ಯಾಂಡ್‌ ಅಂಬಾಸಿಡರ್

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳಿಗೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ನಲ್ಲಿ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Exit mobile version