Site icon Vistara News

ICC World Cup 2023 : ಗೆಲುವಿನ ಜತೆಗೆ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ

Travis Head

ನವ ದೆಹಲಿ: ಟ್ರಾವಿಸ್ ಹೆಡ್ ಪ್ರಸ್ತುತ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್​ನಲ್ಲಿ (ICC World Cup 2023) ಭಾಗವಹಿಸುತ್ತಿರುವ ಆಸ್ಟ್ರೇಲಿಯಾ ತಂಡವನ್ನು ಸೇರಲು ಭಾರತಕ್ಕೆ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ. ಅವರು ಪಾಕಿಸ್ತಾನ ವಿರುದ್ಧದ ತಂಡದ ನಾಲ್ಕನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಆದರೆ ಅಕ್ಟೋಬರ್ 25 ರಂದು ದೆಹಲಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗಬಹುದು.

ಸೆಪ್ಟೆಂಬರ್ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ 29 ವರ್ಷದ ಬ್ಯಾಟರ್​​ನ ಕೈಗೆ ಗಾಯವಾಗಿತ್ತು. ಜೆರಾಲ್ಡ್ ಕೊಟ್ಜೆ ಅವರ ಎಸೆತ ಅವರ ಕೈಗೆ ಬಡಿದಿತ್ತು. ಸ್ಕ್ಯಾನ್ ನಂತರ ಅವರ ಎಡಗೈಯ ಕೀಲಿನಲ್ಲಿ ಮೂಳೆ ಮುರಿತ ಕಂಡುಬಂದಿತ್ತು. ಗಾಯದ ಹೊರತಾಗಿಯೂ ಅವರು ಆಸ್ಟ್ರೇಲಿಯಾ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರ. ಆರಂಭದಲ್ಲೇ ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕು ಮತ್ತು ಗುಂಪು ಹಂತದ ಅರ್ಧದಷ್ಟು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಗಾಯದಿಂದ ಬಳಲುತ್ತಿರುವ ನಂತರ ಹೆಡ್ ಈಗಾಗಲೇ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬ್ಯಾಟಿಂಗ್​ಗೆ ಮರಳಿದ್ದರು. ಅವರು ಇತ್ತೀಚೆಗೆ ತಮ್ಮ ಫಿಟ್ನೆಸ್ ಬಗ್ಗೆ ಅಪ್​ಡೇಟ್​​ ನೀಡಿದ್ದರು. ಅವರು ಭಾರಿ ಪ್ರಗತಿ ಸಾಧಿಸಿದ್ದಾರೆ ಎಂದು ಹೇಳಲಾಗಿತ್ತು.

“ಫಿಟ್ನೆಸ್​ ಉತ್ತಮವಾಗಿ ತೋರುತ್ತಿದೆ. ಬಹುಶಃ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ. ನಾವು ಶಸ್ತ್ರಚಿಕಿತ್ಸೆಗೆ ಹೋಗದಿರಲು ನಿರ್ಧರಿಸಿದಾಗ, ಅಂದರೆ 10 ವಾರಗಳ ಚೇತರಿಕೆಯನ್ನು ನಿರಿಕ್ಷಿಸಿದ್ದೆವು. ಕನಿಷ್ಠ ಆರು ವಾರಗಳು ಫಿಟ್​ ಆಗಲು ಬೇಕಾಗುತ್ತದೆ ಎಂದು ಹೇಳಲಾಗಿತ್ತು ಎಂದು ಅವರು ಹೇಳಿದ್ದರು.

ಈ ಸುದ್ದಿಗಳನ್ನೂ ಓದಿ
Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ
Virat Kohli : ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆಯಾಗಲು ಕೊಹ್ಲಿಯೇ ಕಾರಣವಂತೆ
ICC World Cup 2023 : ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ರಿಜ್ವಾನ್​ ಬೆಂಡೆತ್ತಿದ ಪಾಕ್​ ಕ್ರಿಕೆಟಿಗ!

ಆಸೀಸ್​ ಬಳಗಕ್ಕೆ ಮೊದಲ ಜಯ

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಹಾಲಿ ವಿಶ್ವ ಕಪ್​ನಲ್ಲಿ (ICC World Cup 2023) ತನ್ನ ಮೊದಲ ವಿಜಯವನ್ನು ಕಂಡಿದೆ. ಸೋಮವಾರ (ಅಕ್ಟೋಬರ್ 16) ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್​ಗಳ ಸುಲಭ ಜಯ ಗಳಿಸಿದ ಪ್ಯಾಟ್​ ಕಮಿನ್ಸ್ ಬಳಗ ಗೆಲುವಿನ ನಗೆ ಬೀರಿದೆ. ಕಾಂಗರೂ ಪಡೆ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ 6 ವಿಕೆಟ್​ಗಳ ಸೋಲಿಗೆ ಒಳಗಾಗಿದ್ದರೆ, ನಂತರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆಯುವ ಮೂಲಕ ವಿಮರ್ಶೆಗೆ ಒಳಪಟ್ಟಿತ್ತು. ಇದೀಗ ಮೈ ಚಳಿ ಬಿಟ್ಟು ಆಡುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್​ಗಳಲ್ಲಿ 209 ರನ್​ಗಳಿಗೆ ಆಲ್​​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಾಣಲಿಲ್ಲ. ಡೇವಿಡ್​ ವಾರ್ನರ್​ (11ರನ್​) ಹಾಗೂ ಸ್ಟೀವ್ ಸ್ಮಿತ್​ (0) ಬೇಗ ಔಟಾಗುವ ಮೂಲಕ 24 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ಮರ್ನಸ್​ ಲಾಬುಶೇನ್ (40) ಹಾಗೂ ಆರಂಭಿಕ ಬ್ಯಾಟರ್​ ಮಿಚೆಲ್ ಮಾರ್ಷ್​ (52) ಚೇತರಿಕೆ ತಂದರು. ಮಾರ್ಷ್​ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು. ಬಳಿಕ ಆಡಲು ಇಳಿದ ವಿಕೆಟ್​ಕೀಪರ್​ ಬ್ಯಾಟರ್​ ಜೋಶ್ ಇಂಗ್ಲಿಸ್​ (58) ಕೂಡ ಅರ್ಧ ಶತಕ ಬಾರಿಸಿ ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಮಾರ್ಕಸ್​ ಸ್ಟೊಯ್ನಿಸ್​ 10 ಎಸೆತಗಳಲ್ಲಿ 20 ರನ್ ಬಾರಿಸಿ ಜಯ ತಂದುಕೊಟ್ಟರು. ಲಂಕಾ ಪರ ಬೌಲಿಂಗ್​ನಲ್ಲಿ ಮದುಶಂಕ 38 ರನ್​ಗಳಿಗೆ 3 ವಿಕೆಟ್ ಕಿತ್ತು ಮಿಂಚಿದರು.

Exit mobile version