Site icon Vistara News

Trent Boult: ಕೊನೆಯ ಟಿ20 ವಿಶ್ವಕಪ್​ ಆಡಲು ಸಿದ್ಧರಾದ ಟ್ರೆಂಟ್​ ಬೌಲ್ಟ್

Trent Boult

Trent Boult: Spotlight on NZ transition after Boult confirms this will be his last T20 World Cup

ನ್ಯೂಯಾರ್ಕ್​: ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್(​Trent Boult) ಅವರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ ವೃತ್ತಿ ಬುದುಕಿಗೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಇದು ತನ್ನ ಕೊನೆಯ ಟಿ20 ವಿಶ್ವಕಪ್​ ಟೂರ್ನಿ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದಂತಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ನ್ಯೂಜಿಲ್ಯಾಂಡ್​ ತನ್ನ ಕೊನೆಯ ಲೀಗ್​ ಪಂದ್ಯವನ್ನು ಜೂನ್​ 17ರಂದು ಪಪುವಾ ನ್ಯೂಗಿನಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಬೌಲ್ಟ್​ ಅವರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ.


34 ವರ್ಷದ ಎಡಗೈ ವೇಗಿ ಬೌಲ್ಟ್​ ಇದುವರೆಗೆ ನ್ಯೂಜಿಲ್ಯಾಂಡ್​ ಪರ 60 ಟಿ20 ಪಂದ್ಯಗಳನ್ನು ಆಡಿ ಒಟ್ಟು 81 ವಿಕೆಟ್​ ಕಬಳಿಸಿದ್ದಾರೆ. 13 ರನ್​ಗೆ 4 ವಿಕೆಟ್​ ಕಿತ್ತದ್ದು ವೈಯಕ್ತಿಕ ಜೀವಮಾನ ಶ್ರೇಷ್ಠ ಬೌಲಿಂಗ್​ ಸಾಧನೆಯಾಗಿದೆ. 2013ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಆಡುವ ಮೂಲಕ ಬೌಲ್ಟ್​ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಐಪಿಎಲ್​ ಟೂರ್ನಿಯಲ್ಲಿ 103 ಪಂದ್ಯಗಳನ್ನಾಡಿ 121 ವಿಕೆಟ್​ ಕಿತ್ತಿದ್ದಾರೆ. ಕಿವೀಸ್​ ತಂಡದ ಪರ ಟಿ20 ಆಡದಿದ್ದರೂ ಕೂಡ ಅವರು ವಿದೇಶಿ ಟಿ20 ಲೀಗ್​ನಲ್ಲಿ ಆಟ ಮುಂದುವರಿಸಲಿದ್ದಾರೆ.


2014-2024ರ ತನಕ ಟಿ0 ವಿಶ್ವಕಪ್​ ಆಡಿರುವ ಬೌಲ್ಟ್​ ಇದುವರೆಗೆ 17 ಪಂದ್ಯಗಳಿಂದ 32 ವಿಕೆಟ್​ ಕಲೆಹಾಕಿದ್ದಾರೆ. ಇಂದು(ಶನಿವಾರ) ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಬೌಲ್ಟ್​ 4 ಓವರ್​ ನಡೆಸಿ ಒಂದು ಮೇಡನ್​ ಸಹಿತ ಕೇವಲ 7 ರನ್​ಗೆ 2 ವಿಕೆಟ್​ ಕಿತ್ತು ಮಿಂಚಿದ್ದರು.

ಇದನ್ನೂ ಓದಿ T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಪಂದ್ಯ ಗೆದ್ದ ಕಿವೀಸ್​


ಟ್ರಿನಿಡಾಡ್​ನ ಬ್ರಿಯನ್​ ಲಾರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಉಗಾಂಡ, ಟಿಮ್​ ಸೌಥಿ ಮತ್ತು ಬೌಲ್ಟ್​ ಘಾತದ ದಾಳಿಗೆ ತತ್ತರಿಸಿ ಕೇವಲ 40 ರನ್​ಗೆ ಆಲೌಟ್​ ಆಯಿತು. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 5.2 ಓವರ್​ಗಳಲ್ಲಿ 1 ವಿಕೆಟ್​ಗೆ 41 ರನ್​ ಬಾರಿಸಿ 9 ವಿಕೆಟ್​ ಅಂತರದಿಂದ ಗೆಲುವು ಸಾಧಿಸಿತು. ಇದು ಕಿವೀಸ್​ಗೆ ಟೂರ್ನಿಯಲ್ಲಿ ಒಲಿದ ಮೊದಲ ಗೆಲುವು. ಇದಕ್ಕು ಮುನ್ನ ಆಡಿದ 2 ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿತ್ತು. ಕಿವೀಸ್​ ಪರ ಬೌಲಿಂಗ್​ನಲ್ಲಿ ಟಿಮ್​ ಸೌಥಿ 4 ಓವರ್​ ಎಸೆದು ಕೇವಲ 4 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು. ಚೇಸಿಂಗ್​ನಲ್ಲಿ ಡೆವೋನ್​ ಕಾನ್ವೆ ಅಜೇಯ 22 ರನ್​ ಬಾರಿಸಿ ತಂಡದ ಗೆಲುವು ಸಾರಿಸಿದರು.

Exit mobile version