Site icon Vistara News

Team India | ಮೊಹಮ್ಮದ್‌ ಶಮಿ ಸ್ಥಾನ ತುಂಬಲು ತ್ರಿಕೋನ ಸ್ಪರ್ಧೆ, ಯಾರಿಗೆ ಸಿಗಲಿದ ಅವಕಾಶ?

team india

ಮುಂಬಯಿ : ಟೀಮ್ ಇಂಡಿಯಾದಲ್ಲಿ (Team india) ಗಾಯದ ಸಮಸ್ಯೆಗಳು ಉಲ್ಬಣಿಸುತ್ತಿವೆ. ಒಬ್ಬೊಬ್ಬರಾಗಿ ಗಾಯದ ಕಾರಣಕ್ಕೆ ಪ್ರಮುಖ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ ಹೊಸಬರಿಗೆ ಅವಕಾಶ ಸಿಗುತ್ತಿದೆ. ಅದರೆ, ಪ್ರದರ್ಶನ ವಿಚಾರಕ್ಕೆ ಬಂದಾಗ ಅವರಿಗೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟೀಮ್‌ ಇಂಡಿಯಾದ ಒಟ್ಟು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ.

ಭಾರತ ತಂಡ ಬಾಂಗ್ಲಾದೇಶ ಪ್ರವಾಸದ ಏಕ ದಿನ ಸರಣಿಯನ್ನು ಕಳೆದುಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಸೋಲು ಕಂಡಿರುವ ಕಾರಣ ಕೊನೇ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕಷ್ಟೆ. ಏತನ್ಮಧ್ಯೆ, ಡಿಸೆಂಬರ್‌ ೧೪ರಂದು ಆರಂಭವಾಗಲಿರುವ ಟೆಸ್ಟ್‌ ಸರಣಿಗಾಗಿ ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿವೆ. ಇದರ ನಡುವೆ ಯಾರನ್ನು ಆಡುವ ೧೧ರ ಬಳಗಕ್ಕೆ ಆಯ್ಕೆ ಮಾಡುವುದೆನ್ನು ಚಿಂತೆ ಶುರುವಾಗಿದೆ. ಬೌಲಿಂಗ್ ವಿಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ.

ಆರಂಭದಲ್ಲಿ ಪ್ರಕಟ ಮಾಡಿದ ಟೆಸ್ಟ್‌ ತಂಡದಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್‌ ಶಮಿಯನ್ನು ಸೇರಿಸಲಾಗಿತ್ತು. ಜಡೇಜಾ ಇನ್ನೂ ಗುಣಮುಖರಾಗದ ಕಾರಣ ಅವರು ಬಾಂಗ್ಲಾ ಪ್ರವಾಸ ಹೋಗಿಲ್ಲ. ಅತ್ತ ಏಕ ದಿನ ಸರಣಿಗಾಗಿ ಬಾಂಗ್ಲಾಗೆ ಹೋಗಿದ್ದ ಮೊಹಮ್ಮದ್ ಶಮಿ ಅಭ್ಯಾಸದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡು ಸರಣಿಗೆ ಅಲಭ್ಯರಾಗಿದ್ದರು. ಹೀಗಾಗಿ ಅವರು ಟೆಸ್ಟ್‌ಗೂ ಲಭ್ಯರಾಗುವುದು ಅಸಾಧ್ಯ. ಹೀಗಾಗಿ ಅವರ ಸ್ಥಾನ ತುಂಬಲು ಮೂವರು ಬೌಲರ್‌ಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಉಮ್ರಾನ್‌ ಮಲಿಕ್‌, ನವದೀಪ್‌ ಸೈನಿ ಹಾಗೂ ಮುಕೇಶ್‌ ಕುಮಾರ್ ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳು. ಇದರಲ್ಲಿ ಉಮ್ರಾನ್‌ ಮಲಿಕ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡಿದ್ದು, ಅತಿ ವೇಗ ಹಾಗೂ ಬೌನ್ಸರ್‌ಗಳ ಮೂಲಕ ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ ಮನ ಗೆದ್ದಿದ್ದಾರೆ. ನವದೀಪ್‌ ಸೈನಿ ಹಾಗೂ ಮುಕೇಶ್‌ ಕುಮಾರ್‌ ಭಾರತ ಎ ತಂಡದ ಪರವಾಗಿ ಬಾಂಗ್ಲಾದೇಶ ಎ ತಂಡದ ವಿರುದ್ಧ ಆಡಿದ್ದಾರೆ. ಅವರಿಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರಲ್ಲಿ ಯಾರಿಗೆ ಚಾನ್ಸ್‌ ಕೊಡುವುದು ಎಂಬ ಲೆಕ್ಕಾಚಾರದಲ್ಲಿದೆ ಬಿಸಿಸಿಐ.

ಇದನ್ನೂ ಓದಿ | Team India | ರೋಹಿತ್‌ ಶರ್ಮ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ ಅಧ್ಯಕ್ಷ ಜಯ್‌ ಶಾ

Exit mobile version