Site icon Vistara News

Turkey Earthquake: ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು ನಾಪತ್ತೆ

Christian Atsu

#image_title

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭಯಾನಕ ಭೂಕಂಪದಲ್ಲಿ (Turkey Earthquake) ನ್ಯೂಕ್ಯಾಸಲ್(Newcastle) ತಂಡದ ಮಾಜಿ ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು(Christian Atsu) ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಗಿನ ಜಾವ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪಕ್ಕೆ ಪ್ರಮುಖ ನಗರಗಳು ನೆಲಸಮಗೊಂಡಿದೆ. ಇದುವರೆಗೆ ಮೃತಪಟ್ಟವರ ಸಂಖ್ಯೆ 4000ವನ್ನೂ ಮೀರಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಫುಟ್ಬಾಲ್​ ಆಟಗಾರ ಕ್ರಿಶ್ಚಿಯನ್ ಅಟ್ಸು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅಟ್ಸು ಅವರು ಅವಶೇಷಗಳಡಿಯಲ್ಲಿ ಸಿಕ್ಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಅವರ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರು ಫುಟ್ಬಾಲ್​ ಆಟಗಾರರನ್ನು ರಕ್ಷಿಸಲಾಗಿತ್ತು.

ಸದ್ಯ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಆದರೆ ತೀವ್ರ ಚಳಿಗಾಲದ ಹವಾಮಾನ ರಾತ್ರಿಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಾತ್ರಿ ಶೂನ್ಯ ತಾಪಮಾನ ಇದ್ದುದರಿಂದ ಅವಶೇಷಗಳಡಿಯಲ್ಲಿ ಸಿಲುಕಿರುವ ಅಥವಾ ನಿರಾಶ್ರಿತರಾದ ಜನರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಇದನ್ನೂ ಓದಿ IND VS AUS: ಬಾರ್ಡರ್​-ಗವಾಸ್ಕರ್ ಸರಣಿಯಲ್ಲಿ ಭಾರತಕ್ಕೆ ಪಂತ್ ಅವರ​ ಕೊರಗು ಕಾಡಲಿದೆ: ಚಾಪೆಲ್

31 ವರ್ಷದ ಕ್ರಿಶ್ಚಿಯನ್ ಅಟ್ಸು ನ್ಯೂಕ್ಯಾಸಲ್ ತಂಡ ತೊರೆದ ಬಳಿಕ ಕಳೆದ ವರ್ಷ ಹ್ಯಾಟೈಸ್‌ ಪೋರ್​ ತಂಡ ಸೇರಿದ್ದರು. ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ನಡೆದ ಫುಟ್ಬಾಲ್​ ಲೀಗ್​ನಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದರು.

Exit mobile version