Site icon Vistara News

Turkey Earthquake: ಭೂಕಂಪದಲ್ಲಿ ಮೃತಪಟ್ಟ ಟರ್ಕಿಯ ಫುಟ್ಬಾಲ್​ ಆಟಗಾರ

Ahmet Eyup Turkaslan

#image_title

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭಯಾನಕ ಭೂಕಂಪದಲ್ಲಿ(Turkey Earthquake) ಕಟ್ಟಡಗಳ ಅವಶೇಷಗಳಡಿ ಸಿಲುಕಿ ಟರ್ಕಿ ಫುಟ್ಬಾಲ್‌ ತಂಡದ ಪ್ರಮುಖ ಆಟಗಾರ ಅಹ್ಮತ್‌ ಐಯುಪ್‌ ಟರ್ಕಸ್ಲಾನ್(Ahmet Eyup Turkaslan) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಟರ್ಕಿಯ ಫುಟ್ಬಾಲ್‌ ಕ್ಲಬ್‌ ಯೆನಿ ಮಾಲತ್ಯಸ್ಪೋರ್ ಪರವಾಗಿ ಆಡಿದ ಗೋಲ್‌ ಕೀಪರ್‌ ಅಹ್ಮತ್‌ ಟರ್ಕಸ್ಲಾನ್ (28) ಮೃತಪಟ್ಟಿರುವ ಸುದ್ದಿಯನ್ನು ಫುಟ್ಬಾಲ್‌ ಕ್ಲಬ್‌ ಯೆನಿ ಮಾಲತ್ಯಸ್ಪೋರ್ ತಂಡ ಟ್ವೀಟ್‌ ಮಾಡಿ ಅಧಿಕೃತವಾಗಿ ಹೇಳಿದೆ.

“ನಮ್ಮ ಗೋಲ್‌ಕೀಪರ್, ಅಹ್ಮತ್ ಟರ್ಕಸ್ಲಾನ್, ಭೀಕರ ಭೂಕಂಪದ ಕುಸಿತದ ನಂತರ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬದವರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ. ನಾವು ನಿಮ್ಮನ್ನು ಮರೆಯುವುದಿಲ್ಲ, ನೀವೊಬ್ಬ ಅದ್ಭುತ ವ್ಯಕ್ತಿ” ಎಂದು ಬರೆದು ಫುಟ್ಬಾಲ್‌ ಕ್ಲಬ್‌ ಕಂಬನಿ ಮಿಡಿದಿದೆ.

ಇದನ್ನೂ ಓದಿ Turkey Earthquake: ಭೂಪಂಕದ ಅವಶೇಷದಲ್ಲಿ ಜೀವಂತ ಪತ್ತೆಯಾದ ಫುಟ್ಬಾಲ್​ ಆಟಗಾರ

ಘಾನಾ ಮೂಲದ ಕ್ರಿಸ್ಟಿಯನ್ ಆಟ್ಸು ಎಂಬ ಫುಟ್ಬಾಲ್ ಆಟಗಾರ ಮಂಗಳವಾರ(ಫೆ.7) ಅವಶೇಷಗಳಡಿಯಲ್ಲಿ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವಿನಿಂದ ಬಚಾವ್ ಆಗಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Exit mobile version