ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮುಗಿಯುತ್ತಿದ್ದಂತೆ ಹಲವಾರು ಕ್ರಿಕೆಟಿಗರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಲ್ಲಿ ಮೊದಲಿಗರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಋತುರಾಜ್ ಗಾಯಕ್ವಾಡ್. ಕ್ರಿಕೆಟರ್ ಉತ್ಕರ್ಷ ಪವಾರ್ ಅವರನ್ನು ಋತುರಾಜ್ ಮದುವೆಯಾಗಿದ್ದಾರೆ. ಇದೀಗ, ಸಿಎಸ್ಕೆ ತಂಡದ ವೇಗದ ಬೌಲರ್ ತುಷಾರ್ ದೇಶಪಾಂಡೆ ಕೂಡ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅವರು ತಮ್ಮ ಬಾಲ್ಯದ ಗೆಳತಿಯೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ದೇಶಪಾಂಡೆ ಅವರು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ ನಭಾ ಗಡ್ಡಮ್ವಾರ್ ಅವರೊಂದಿಗೆ ಉಂಗುರಗಳ ವಿನಿಮಯ ಮಾಡಿಕೊಂಡಿದ್ದಾರೆ. ತುಷಾರ್ ಕೂಡ ಮುಂಬಯಿ ತಂಡ ಪರವಾಗಿ ದೇಶೀಯ ಕ್ರಿಕೆಟ್ ಆಡುವವರು. “ಅವಳು ನನ್ನ ಶಾಲಾ ದಿನಗಳ ಕ್ರಶ್ ಆಗಿದ್ದಳು. ಇದೀಗ ನನ್ನ ಭಾವಿ ಪತ್ನಿಯಾಗಿ ಬಡ್ತಿ ಪಡೆದಳು” ಎಂದು ದೇಶಪಾಂಡೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಶಿವಂ ದುಬೆ ಮತ್ತು ಸಿಮ್ರನ್ಜೀತ್ ಸಿಂಗ್ ಸೇರಿದಂತೆ ಹಲವಾರು ಸಿಎಸ್ಕೆ ತಾರೆಯರು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ದೇಶಪಾಂಡೆ ಈ ವರ್ಷ ಸಿಎಸ್ಕೆ ಪರ 16 ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಋತುವಿನಲ್ಲಿ ಐದು ಬಾರಿ ವಿಜೇತ ತಂಡದ ಪರವಾಗಿ ಅತ್ಯಂತ ಸುಧಾರಿತ ಬೌಲರ್ ಎನಿಸಿಕೊಂಡಿದ್ದಾರೆ. ಗಾಯಗೊಂಡ ಮುಕೇಶ್ ಚೌಧರಿ ಬದಲಿಗೆ ತುಷಾರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಕ್ಕಿತು. ಕೊಟ್ಟ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದರು.
ಯಾರಿವರು ನಭಾ ಗಡ್ಡಮ್ವಾರ್?
ನಭಾ ಗಡ್ಡಮ್ವಾರ್ ಒಬ್ಬ ಭಾರತೀಯ ಕಲಾ ಶಿಕ್ಷಕಿ . ಅವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ನಲ್ಲಿ ಜನಿಸಿದ್ದಾರೆ. ತುಷಾರ್ ತನ್ನ ಶಾಲಾ ದಿನಗಳಿಂದಲೂ ಅವಳ ಮೇಲೆ ಕ್ರಶ್ ಹೊಂದಿದ್ದರು. ನಭಾ ಇನ್ಸ್ಟಾಗ್ರಾಮ್ ಪೇಜ್ ಮೇಳೆ ಪೇಂಟ್ ಮಾಡಿರುವ ಪ್ಯಾಲೆಟ್ ಅನ್ನು ಹೊಂದಿದ್ದಾರೆ. ಅವರು ಕೈಯಿಂದ ರಚಿಸಿದ ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳನ್ನು ಮಾರಾಟ ಮಾಡುತ್ತಾರೆ.
ಅವರು ಕಲ್ಯಾಣ್ನಲ್ಲಿ 10 ನೇ ತರಗತಿಯವರೆಗೆ ಮತ್ತು ಮುಂಬೈನಲ್ಲಿ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ. ಅವರು ಕಲಾ ಬೋಧನಾ ವಿಷಯದಲ್ಲಿ ಡಿಪ್ಲೊಮಾ ಕೂಡ ಹೊಂದಿದ್ದಾರೆ. ಆ ಬಳಿಕ ನಭಾ ಕಲಾ ಶಿಕ್ಷಕಿಯ ವೃತ್ತಿ ಆರಂಭಿಸಿದ್ದರು.. ಅವರು ವಿವಿಧ ಶಾಲೆಗಳಲ್ಲಿ ಕಲೆಗಳನ್ನು ಕಲಿಸಿದ್ದಾರೆ.
ಇದನ್ನೂ ಓದಿ : ಸಿಎಸ್ಕೆ ಆರಂಭಿಕ ಬ್ಯಾಟರ್ ಋತುರಾಜ್ಗೆ ಜೂ.3ರಂದು ಮದುವೆ; ಅವರ ಕೈಹಿಡಿಯಲಿರುವ ಲಕ್ಕಿ ಲೇಡಿ ಯಾರು?
2022 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತುಷಾರ್ ಅವರನ್ನು ಐಪಿಎಲ್ 2022 ಕ್ಕೆ ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತು. ,ಕಳೆದ ಋತುವಿನಲ್ಲಿ ಕೇವಲ 3 ಪಂದ್ಯಗಳನ್ನು ಆಡಿದ್ದರು ತುಷಾರ್.