Site icon Vistara News

Jio Cinema : ಜಿಯೋಸಿನಿಮಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ಟಿವಿಎಸ್​ ಯೂರೋಗ್ರಿಪ್​ ಪ್ರಾಯೋಜಕತ್ವ

jio cinema

ಮುಂಬೈ: ಕಳೆದ ವರ್ಷ ಪ್ರಾರಂಭವಾದ ಜಿಯೋಸಿನಿಮಾದ (Jio Cinema) ‘ಸರಿ ಉತ್ತರ ನೀಡಿ ಬಹುಮಾನ ಗೆಲ್ಲುವಂಥ’ ಆಟವಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ‘ಟಿವಿಎಸ್ ಯೂರೋಗ್ರಿಪ್’ ಪ್ರಶಸ್ತಿಗೆ ಪ್ರಾಯೋಜಕತ್ವ (ಟೈಟಲ್​​​ ಸ್ಪಾನ್ಸರ್​) ವಹಿಸಿದೆ. ಹೊಸ ಒಪ್ಪಂದವನ್ನು ವಯಾಕಾಮ್18 ಪ್ರಕಟಿಸಿದೆ. ಅಭಿಮಾನಿಗಳ ಪಾಲ್ಗೊಳ್ಳುವಿಕೆ ಹೆಚ್ಚಿರುವ ಜತೆಗೆ ಐಪಿಎಲ್ ನಂತರವೂ ಭಾರತದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳು ಸೇರಿದಂತೆ ಪ್ರಮುಖ ಕ್ರೀಡಾ ಕೂಟಗಳ ಉಚಿತ ನೇರಪ್ರಸಾರ ಮುಂದುವರಿದಿರುವ ಹಿನ್ನೆಲೆಯಲ್ಲಿ, ಟಿವಿಎಸ್ ಯೂರೋಗ್ರಿಪ್ ಈಗ ಭಾರತ – ಇಂಗ್ಲೆಂಡ್ ಸರಣಿಯಾದ್ಯಂತ ಅಭಿಮಾನಿಗಳಿಗೆ ಆಟವಾಡಿ, ಬಹುಮಾನ ಗೆಲ್ಲುವ ಅವಕಾಶ ನೀಡುತ್ತಿದೆ.

2023ರ ಐಪಿಎಲ್ ಸಮಯದಲ್ಲಿ ಪರಿಚಯಿಸಲ್ಪಟ್ಟ ‘ಜೀತೋ ಧನ್ ಧನಾ ಧನ್’ ಭರ್ಜರಿ ಯಶಸ್ಸನ್ನು ಕಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ 50 ದಶಲಕ್ಷ ಕ್ರಿಕೆಟ್ ಅಭಿಮಾನಿಗಳು ಅತ್ಯಾಕರ್ಷಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 60 ಅದೃಷ್ಟಶಾಲಿಗಳು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಹುಮಾನವಾಗಿ ಒಲಿಸಿಕೊಂಡಿದ್ದಾರೆ. ಐಪಿಎಲ್‌ನ ಕೇವಲ ಒಂದು ಆವೃತ್ತಿಯಲ್ಲಿ, ಜೀತೋ ಧನ್ ಧನಾ ಧನ್ ಭಾರತದ ಅದೃಷ್ಟಶಾಲಿಗಳ ಮನ ಗೆದ್ದಿದೆ.

ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಜಿಯೋ ಸಿನಿಮಾ ಪ್ರತಿಯೊಂದು ವಿಷಯಕ್ಕೂ ಕ್ರೀಡಾಸ್ಪರ್ಶ ನೀಡಿತ್ತು. ಶತಕೋಟಿ ಆಟಗಳನ್ನು ಆಡಿಸುವಂಥ ಹೊಸ ಮಾದರಿಯ ಮಾನದಂಡವನ್ನು ನಿಗದಿಪಡಿಸಿತ್ತು. ಹೀಗಾಗಿ, ಈ ಸ್ಪರ್ಧೆಗೆ ಭರ್ಜರಿ ಸ್ಪಂದನೆ ದೊರೆತಿದ್ದು, ಇದರ ಬೆನ್ನಲ್ಲೇ ಜೀತೋ ಧನ್ ಧನಾ ಧನ್ ಪ್ರಶಸ್ತಿಯ ಹೊಸ ಪ್ರಾಯೋಜಕತ್ವವನ್ನು ಘೋಷಿಸಲಾಗಿದೆ.

ಈ ಕುರಿತು ಮಾತನಾಡಿದ ಟಿವಿಎಸ್ ಶ್ರೀಚಕ್ರ ಲಿಮಿಟೆಡ್ ಕಂಪನಿಯ ಇವಿಪಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ನ ಪಿ. ಮಾಧವನ್ ಅವರು, “ನಾವು ಡಿಜಿಟಲ್ ನತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದೇವೆ. ಈಗ ಟಿವಿಎಸ್ ಯೂರೋಗ್ರಿಪ್ ಟೈರ್ಸ್ ಜೀತೋ ಧನ್ ಧನಾ ಧನ್ ಸ್ಪರ್ಧೆಯಲ್ಲಿ ವಯೋಕಾಮ್ 18 ಜತೆಗಿನ ಪಾಲುದಾರಿಕೆಯು ನಮಗೆ ಹರ್ಷ ತಂದಿದೆ. ನಮ್ಮ ಗ್ರಾಹಕರಾದ- ಹೊಸ ತಲೆಮಾರಿನ ಯುವಜನತೆ ಮತ್ತು ಜೆನ್ ಝೆಡ್ ರೈಡರ್ ಗಳೊಂದಿಗೆ ಸಂಪರ್ಕ ಸಾಧಿಸುವ ಅತ್ಯುತ್ತಮ ಮಾರ್ಗವೂ ಇದಾಗಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲೂ ಅತ್ಯುತ್ತಮ ಬ್ರ್ಯಾಂಡ್ ಅನುಭವವನ್ನು ಪಡೆಯುವಲ್ಲಿ ಇಂಥ ಅರ್ಥಪೂರ್ಣ ಪಾಲುದಾರಿಕೆಗಳನ್ನು ನಾವು ಎದುರು ನೋಡುತ್ತೇವೆ” ಎಂದೂ ಅವರು ಹೇಳಿದ್ದಾರೆ.

“ಕಂಟೆಂಟ್ ಗಳಿಗೆ ಕ್ರೀಡಾ ಸ್ಪರ್ಶ ನೀಡುವುದರಿಂದ ತೆರೆದುಕೊಳ್ಳುವ ಅಪಾರ ಅವಕಾಶಗಳನ್ನು ನೋಡಿಕೊಂಡು, ಟಿವಿಎಸ್ ಯೂರೋಗ್ರಿಪ್ ಸಂಸ್ಥೆಯು ನಮ್ಮೊಂದಿಗೆ ಪಾಲುದಾರರಾಗಿ ಕೈಜೋಡಿಸಿರುವುದು ಸಂತೋಷ ತಂದಿದೆ” ಎಂದು ವಯಾಕಾಮ್ 18 ವಕ್ತಾರರು ಹೇಳಿದ್ದಾರೆ. ಜೊತೆಗೆ, “ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಗ್ಗದ ದರದ ಲಭ್ಯತೆಯಲ್ಲಿದ್ದ ಕೆಲವು ಅಡೆತಡೆಗಳನ್ನು ಈ ಬಾರಿ ವ್ಯವಸ್ಥಿತವಾಗಿ ನಿವಾರಿಸಿದ್ದೇವೆ. ಹೀಗಾಗಿ ಪಂದ್ಯಗಳ ಉಚಿತ ನೇರಪ್ರಸಾರದ ವ್ಯಾಪ್ತಿಯೂ ಹೆಚ್ಚಾಯಿತು. ಜನಸಾಮಾನ್ಯರು ಮತ್ತು ಬ್ರ್ಯಾಂಡ್‌ಗಳ ನಡುವಿನ ಅಂತರವನ್ನೂ ಇದು ಕಡಿಮೆಗೊಳಿಸಿತು. ಬ್ರ್ಯಾಂಡ್ ಗಳು ಅರ್ಥಪೂರ್ಣವಾಗಿ ತಮ್ಮ ಬಳಕೆದಾರರೊಂದಿಗೆ ಸಂವಹನವನ್ನು ಗೇಮಿಫೈ ಮಾಡಲು ಮತ್ತು ಉತ್ತೇಜಿಸಲು ಸಾಧ್ಯವಾಯಿತು. ಇದು ಆರಂಭವಷ್ಟೇ. ಈಗ ಜೀತೋ ಧನ್ ಧನಾ ಧನ್ ಗೆ ಟಿವಿಎಸ್ ಯೂರೋಗ್ರಿಪ್ ಕೂಡ ಹೆಜ್ಜೆಯಿಟ್ಟಿರುವ ಕಾರಣ ಮುಂದಿನ ದಿನಗಳಲ್ಲಿ ದಾಖಲೆ ಸಂಖ್ಯೆಯ ಬಳಕೆದಾರರನ್ನು ಪಡೆಯಲು ಸಾಧ್ಯವಾಗಲಿದೆ ಎಂದು ನಾವು ನಂಬಿದ್ದೇವೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಅವಕಾಶ

ಜಿಯೋಸಿನಿಮಾದ ಬಳಕೆದಾರರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲೂ ಪ್ರತಿ ಪಂದ್ಯದ ದಿನಗಳಲ್ಲಿ ಆಕರ್ಷಕವಾದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳನ್ನು ಹೊಂದಿರುತ್ತಾರೆ. ವೀಕ್ಷಕರು ಮೊದಲು ತಮ್ಮ ಫೋನ್ ಗಳನ್ನು ಪೋರ್ಟ್ರೈಟ್ ಮೋಡ್ ನಲ್ಲಿ ಹಿಡಿದುಕೊಳ್ಳಬೇಕು. ಆಗ, ಮೊಬೈಲ್ ಪರದೆಯ ಕೆಳಭಾಗದಲ್ಲಿ ಒಂದು ಚಾಟ್ ಬಾಕ್ಸ್ ತೆರೆಯುತ್ತದೆ. ಇಲ್ಲಿ ಪ್ರತಿ ಓವರ್ ಗೂ ಮುನ್ನ ಒಂದು ಪ್ರಶ್ನೆ ಮತ್ತು ಅದಕ್ಕೆ ಉತ್ತರವಾಗಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಸರಿಯಾದ ಉತ್ತರ ನೀಡಿದ ಅದೃಷ್ಟಶಾಲಿಗಳಿಗೆ ಹಲವಾರು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಲಭ್ಯವಾಗಲಿದೆ.

ಇದನ್ನೂ ಓದಿ :Katrina Kaif : ಸಿಎಸ್​ಕೆ ಬ್ರಾಂಡ್ ಅಂಬಾಸಿಡರ್ ಆದ ಕತ್ರಿಕಾ ಕೈಫ್

ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸುವುದನ್ನು ಮುಂದುವರಿಸಬಹುದು. ಹೊಸ ಹೊಸ ಅಪ್ಡೇಟ್ ಗಳು, ತಾಜಾ ಸುದ್ದಿಗಳು, ಸ್ಕೋರ್ ಗಳು, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.

Exit mobile version