ಮುಂಬಯಿ : ಭಾರತ ಮತ್ತು ಪಾಕಿಸ್ತಾನ ತಂಡಗಳು ನಡುವಿನ ಕ್ರಿಕೆಟ್ ಪಂದ್ಯವೆಂದರೆ ಪರಸ್ಪರ ಜಿದ್ದು ಜೋರು. ಇತ್ತಂಡಗಳ ನಡುವಿನ ಹಣಾಹಣಿಯನ್ನು ವೀಕ್ಷಿಸುವುದಕ್ಕೆ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅಂತೆಯೇ ಅಕ್ಟೋಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಎರಡೆರಡು ಪಂದ್ಯಗಳು ನಡೆಯಲಿವೆ ಎಂದರೆ ಅಭಿಮಾನಿಗಳಿಗೆ ಖುಷಿಯ ಸಂಗತಿಯೇ ಸರಿ. ಒಂದು ಪುರುಷರ ಟಿ೨೦ ವಿಶ್ವ ಕಪ್ ಪಂದ್ಯ. ಇದು ಅಕ್ಟೋಬರ್ ೨೩ರಂದು ನಡೆಯಲಿದೆ. ಇನ್ನೊಂದು ಮಹಿಳೆಯ ಏಷ್ಯಾ ಕಪ್ ಪಂದ್ಯ. ಇದು ಅಕ್ಟೋಬರ್ ೭ರಂದು ನಡೆಯಲಿದೆ.
ಆರು ಮಹಿಳೆಯರ ತಂಡಗಳ ನಡುವೆ ಏಷ್ಯಾ ಕಪ್ ಟೂರ್ನಿ ಆಯೋಜನೆಗೊಂಡಿದ್ದು, ಅಕ್ಟೋಬರ್ ೧ರಂದು ಆರಂಭವಾಗಲಿದೆ. ಬಾಂಗ್ಲಾದೇಶ ತಂಡ ಈ ಪ್ರತಿಷ್ಠಿತ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ ೧೬ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ಅಂತೆಯೇ ಅಕ್ಟೋಬರ್ ೭ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
೨೦೦೪ರಿಂದ ಏಷ್ಯಾ ಕಪ್ ಟೂರ್ನಿಯ ಏಳು ಆವೃತ್ತಿಗಳು ನಡೆದಿದೆ. ನಾಲ್ಕು ಬಾರಿ ಏಕ ದಿನ ಮಾದರಿಯಲ್ಲಿ ಹಾಗೂ ಮೂರು ಬಾರಿ ಟಿ೨೦ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿತ್ತು. ಏಕ ದಿನ ಮಾದರಿಯ ಅಷ್ಟೂ ಆವೃತ್ತಿಗಳಲ್ಲಿ ಭಾರತವೇ ಚಾಂಪಿಯನ್. ಟಿ೨೦ ಮಾದರಿಯಲ್ಲಿ ೨ ಬಾರಿ ಟ್ರೋಫಿ ಗೆದ್ದಿದ್ದು, ಈ ಹಿಂದಿನ ಆವೃತ್ತಿ ಅಂದರೆ ೨೦೧೮ರಲ್ಲಿ ಬಾಂಗ್ಲಾದೇಶ ವಿರುದ್ಧ ಫೈನಲ್‌ನಲ್ಲಿ ೩ ವಿಕೆಟ್‌ಗಳ ಸೋಲು ಅನುಭವಿಸುವ ಮೂಲಕ ರನ್ನರ್‌ಅಪ್ ಪಟ್ಟ ಪಡೆದುಕೊಂಡಿತ್ತು.
ಏಷ್ಯಾ ಕಪ್ ವಿವರ
ಮಹಿಳೆಯರ ತಂಡದ ಏಷ್ಯಾ ಕಪ್ ಅಕ್ಟೋಬರ್ ೧ರಿಂದ ೧೬ರವರೆಗೆ ನಡೆಯಲಿದೆ.
ಎಲ್ಲಿ ಆಯೋಜನೆ : ಬಾಂಗ್ಲಾದೇಶದ ಸೈಲೆಟ್ ಇಂಟರ್‌ನ್ಯಾಷನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಆಯೋಜನೆ
ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ಪಂದ್ಯಗಳ ನೇರ ಪ್ರಸಾರವಿದೆ.
ಇದನ್ನೂ ಓದಿ | Virat Kohli | ಏಷ್ಯಾ ಕಪ್‌ನಲ್ಲಿ ಮಿಂಚಿದ ಬಳಿಕ ವಿರಾಟ್ ಕೊಹ್ಲಿ ಟಿ-20 ರ‍್ಯಾಂಕಿಂಗ್ ಎಷ್ಟು?