ಬೆಂಗಳೂರು: ದುಬೈ (Dubai) ಆತಿಥ್ಯನಲ್ಲಿ ನಡೆಯುವ ಪುರುಷರ ಅಂಡರ್-19 ಏಷ್ಯಾಕಪ್ (ACC Men’s U19 Asia Cup 2023) ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಪಂದ್ಯಾವಳಿಯು ಡಿಸೆಂಬರ್ 8 ರಿಂದ ಡಿಸೆಂಬರ್ 17 ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಡಿ.10 ರಂದು ಮುಖಾಮುಖಿಯಾಗಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಆಫ್ಘನ್ ವಿರುದ್ಧ ಆಡಲಿದೆ.
15 ಪಂದ್ಯಗಳು
ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲ್ಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿವೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸಣಸಾಡಲಿವೆ.
Get ready for an adrenaline-packed ride as Dubai gears up to host the U-19 Men's Asia Cup!
— Sri Lanka Cricket 🇱🇰 (@OfficialSLC) November 8, 2023
Matches start Friday, December 8th 2023.#ACCU19MensAsiaCup pic.twitter.com/LfPVzU9eaI
ತಂಡಗಳು
ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಜಪಾನ್, ಯುಎಇ
ಅಫಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ. ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ.
ಇದನ್ನೂ ಓದಿ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ
ಅ-19 ಏಷ್ಯಾಕಪ್ ವೇಳಾಪಟ್ಟಿ
ಡಿಸೆಂಬರ್ 8 – ಭಾರತ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1
ಡಿಸೆಂಬರ್ 8 – ಪಾಕಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2
ಡಿಸೆಂಬರ್ 9 – ಬಾಂಗ್ಲಾದೇಶ vs ಯುಎಇ – ICC ಅಕಾಡೆಮಿ ಓವಲ್ 1
ಡಿಸೆಂಬರ್ 9 – ಶ್ರೀಲಂಕಾ vs ಜಪಾನ್ – ICC ಅಕಾಡೆಮಿ ಓವಲ್ 2
ಡಿಸೆಂಬರ್ 10 – ಭಾರತ vs ಪಾಕಿಸ್ತಾನ – ICC ಅಕಾಡೆಮಿ ಓವಲ್ 1
ಡಿಸೆಂಬರ್ 10 – ಅಫ್ಘಾನಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2
ಡಿಸೆಂಬರ್ 11 – ಶ್ರೀಲಂಕಾ vs ಯುಎಇ – ICC ಅಕಾಡೆಮಿ ಓವಲ್ 1
ಡಿಸೆಂಬರ್ 11 – ಬಾಂಗ್ಲಾದೇಶ vs ಜಪಾನ್ – ICC ಅಕಾಡೆಮಿ ಓವಲ್ 2
ಡಿಸೆಂಬರ್ 12 – ಪಾಕಿಸ್ತಾನ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1
ಡಿಸೆಂಬರ್ 12 – ಭಾರತ vs ನೇಪಾಳ – ICC ಅಕಾಡೆಮಿ ಓವಲ್ 2
ಡಿಸೆಂಬರ್ 13 – ಬಾಂಗ್ಲಾದೇಶ vs ಶ್ರೀಲಂಕಾ – ICC ಅಕಾಡೆಮಿ ಓವಲ್ 1
ಡಿಸೆಂಬರ್ 13 – ಯುಎಇ vs ಜಪಾನ್ – ಐಸಿಸಿ ಅಕಾಡೆಮಿ ಓವಲ್ 2
ಡಿಸೆಂಬರ್ 15 – ಸೆಮಿಫೈನಲ್ 1 – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ
ಡಿಸೆಂಬರ್ 15 – ಸೆಮಿ-ಫೈನಲ್ 2 – ICC ಅಕಾಡೆಮಿ ಓವಲ್ 1
ಡಿಸೆಂಬರ್ 17 – ಫೈನಲ್ – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ