Site icon Vistara News

U19 Women World Cup 2023: ಅಂಡರ್​ 19 ವಿಶ್ವ ಕಪ್ ಗೆದ್ದ ತಂಡಕ್ಕೆ ಶಿರಬಾಗಿ ವಂದಿಸಿದ ನೀರಜ್‌ ಚೋಪ್ರಾ

#image_title

ಪೊಚೆಫ್ ಸ್ಟ್ರೂಮ್: ಚೊಚ್ಚಲ ಐಸಿಸಿ ಮಹಿಳೆಯರ ಅಂಡರ್‌-19 ಟಿ 20ವಿಶ್ವ ಕಪ್‌(U19 Women World Cup 2023) ಫೈನಲ್‌ ಪಂದ್ಯದಲ್ಲಿ ಅಜೇಯ ಇಂಗ್ಲೆಂಡ್‌ ವಿರುದ್ಧ ಭಾರತ 7 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ(neeraj chopra) ಮೈದಾನಕ್ಕೆ ಬಂದು ಭಾರತೀಯ ಆಟಗಾರ್ತಿಯನ್ನು ಅಭಿನಂದಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾನುವಾರ(ಜನವರಿ 29) ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ 17.1 ಓವರ್ ಗಳಲ್ಲಿ ಕೇವಲ 68 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 14 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ಅಮೋಘ ಗೆಲುವು ಸಾಧಿಸಿತು.

ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದಂತೆ ಚಿನ್ನದ ಹುಡುಗ ನೀರಜ್ ಚೋಪ್ರಾ ಮೈದಾನಕ್ಕೆ ಓಡಿ ಬಂದು ಆಟಗಾರ್ತಿಯರ ಸಾಧನೆಗೆ ಶಿರಾಬಾಗಿ ವಂದಿಸಿದ್ದಾರೆ. ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ U19 World Cup | ಕ್ರಿಕೆಟರ್ ಅರ್ಚನಾ ದೇವಿ ಮನೆಗೆ ಇನ್ವರ್ಟರ್​, ಬ್ಯಾಟರಿ ಕಳುಹಿಸಿಕೊಟ್ಟ ಉತ್ತರ ಪ್ರದೇಶ ಪೊಲೀಸರು!

ಫೈನಲ್​ನಗೂ ಮುನ್ನ ಸಲಹೆ ನೀಡಿದ ನೀರಜ್‌ ಚೋಪ್ರಾ​

ಫೈನಲ್​ಗೂ ಮುನ್ನ ನೀರಜ್​​ ಚೋಪ್ರಾ ಅವರು ಭಾರತ ತಂಡವನ್ನು ಭೇಟಿಯಾಗಿ ಒತ್ತಡ ನಿಭಾಯಿಸಲು ಅಮೂಲ್ಯ ಸಲಹೆ ನೀಡಿದ್ದರು. ನೀರಜ್‌ ಅವರು ಶಫಾಲಿ ವರ್ಮ ಸಾರಥ್ಯದ ತಂಡಕ್ಕೆ ಪಾಠ ಮಾಡುತ್ತಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. “ಚಿನ್ನದ ಗುಣಮಟ್ಟದ ಸಭೆ! ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ನೀರಜ್‌ ಚೋಪ್ರಾ ಅಂಡರ್‌-19 ಟಿ20 ವಿಶ್ವಕಪ್‌ ಫೈನಲ್‌ಗ‌ೂ ಮೊದಲು ಭಾರತ ತಂಡದೊಂದಿಗೆ ಸಂವಾದ ನಡೆಸಿದರು’ ಎಂದು ಬಿಸಿಸಿಐ ಶಿರ್ಷಿಕೆ ನೀಡಿತ್ತು.

Exit mobile version