ಬೆಂಗಳೂರು: ಐಸಿಸಿ ಅಂಡರ್-19 ಏಕದಿನ(U-19 World Cup) ವಿಶ್ವಕಪ್ ಟೂರ್ನಿಗೆ ಇಂದು(ಜನವರಿ 19) ಚಾಲನೆ ದೊರೆಯಲಿದೆ. ದಕ್ಷಿಣ ಆಫ್ರಿಕಾ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿದೆ. 5 ಬಾರಿಯ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ನಾಳೆ(ಶನಿವಾರ) ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ತಂಡದಲ್ಲಿ ಕರ್ನಾಟಕದ ಯುವ ವೇಗಿ ಧನುಷ್ ಗೌಡ(Dhanush Gowda) ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಉತ್ತಮ ಪ್ರದರ್ಶನ ತೋರಲಿ
ಧನುಷ್ ಗೌಡ ಈಗಾಗಲೇ ಕಿರಿಯರ ಕ್ರಿಕೆಟ್ನಲ್ಲಿ ತಮ್ಮ ಕರಾರುವಾಕ್ ಬೌಲಿಂಗ್ ಮೂಲಕ ಗಮನಸೆಳೆದಿದ್ದಾರೆ. ಇದೇ ಕಾರಣದಿಂದ ಅವರು ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ಆಡುವ ಬಳಗದಲ್ಲಿಯೂ ಅವರಿಗೆ ಸ್ಥಾನ ಸಿಕ್ಕಿ ಉತ್ತಮ ಪ್ರದರ್ಶನ ತೋರುವಂತಾಗಲಿ ಎನ್ನುವುದು ಎಲ್ಲ ಕನ್ನಡಿಗರ ಹಾರೈಕೆಯಾಗಿದೆ. ಭಾರತ ತಂಡವನ್ನು ಉದಯ್ ಶಹರನ್ ಮುನ್ನಡೆಸಲಿದ್ದಾರೆ. ಸೌಮಿ ಕುಮಾರ್ ಪಾಂಡೆ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.
The stars of the future are here 🤩
— Temba Bavuma (@Bavumaaas) January 16, 2024
The stage is set for the ICC U19 World Cup 🏆
📸: ICC pic.twitter.com/sgQSNgiuys
5 ಬಾರಿಯ ಚಾಂಪಿಯನ್
ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನದೇ ಆದ ದಾಖಲೆ ಹೊಂದಿದೆ. ಅಲ್ಲದೆ ಟೂರ್ನಿಯ ಶ್ರೇಷ್ಠ ತಂಡ ಎಂಬ ಹಿರಿಮೆಯನ್ನು ಪಡೆದಿದೆ. ಒಟ್ಟು ಐದು ಪ್ರಶಸ್ತಿಗಳನ್ನು ಗೆದ್ದಿರುವ ಭಾರತ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದರೆ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಕಿರೀಟವನ್ನು ಎತ್ತಿ ಹಿಡಿದಿವೆ.
CSK Player Avanish Rao Aravelly is Ready for U19 World Cup 2024 💙🇮🇳 pic.twitter.com/4338Zhn11w
— Junaid Khan (@JunaidKhanation) January 18, 2024
ಭಾರತ ತಂಡ
ಉದಯ್(ನಾಯಕ), ಸೌಮಿ, ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್, ಸಚಿನ್ ದಾಸ್, ಪ್ರಿಯಾನ್ಶು ಮೋಲಿಯಾ, ಮುಶೀರ್ ಖಾನ್, ಮುರುಗನ್ ಅಭಿಷೇಕ್, ಅವನೀಶ್ ರಾವ್, ಇನ್ನೇಶ್ ಮಹಾಜನ್, ಧನುಶ್, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಇದನ್ನೂ ಓದಿ ICC U19 World Cup 2024: ನಾಳೆಯಿಂದ ಅಂಡರ್-19 ವಿಶ್ವಕಪ್ ಟೂರ್ನಿ ಆರಂಭ; ಭಾರತ ಪಂದ್ಯ ಯಾವಾಗ?
ಬಾಂಗ್ಲಾದೇಶ ತಂಡ
ಮಹ್ಫುಜುರ್ ರಹಮಾನ್ ರಬ್ಬಿ (ನಾಯಕ), ಆಶಿಕುರ್ ರೆಹಮಾನ್ ಶಿಬ್ಲಿ, ಜಿಶಾನ್ ಆಲಂ, ಚೌಧರಿ ಮೊಹಮ್ಮದ್ ರಿಜ್ವಾನ್, ಆದಿಲ್ ಬಿನ್ ಸಿದ್ದಿಕ್, ಮೊಹಮ್ಮದ್ ಅಶ್ರಫುಜ್ಜಮಾನ್ ಬೊರಾನೊ, ಅರಿಫುಲ್ ಇಸ್ಲಾಂ, ಶಿಹಾಬ್ ಜೇಮ್ಸ್, ಅಹ್ರಾರ್ ಅಮೀನ್ (ಉಪನಾಯಕ), ಶೇಖ್, ಪರ್ವೇಜ್ ಉಜಿ ರೋಹನತ್ ದೌಲಾ.ಬೋರ್ಸನ್, ಇಕ್ಬಾಲ್ ಹಸನ್ ಎಮನ್, ವಾಸಿ ಸಿದ್ದಿಕಿ, ಮರೂಫ್ ಮೃಧಾ.
ಭಾರತ ತಂಡದ ಲೀಗ್ ಹಂತದ ವೇಳಾಪಟ್ಟಿ
ಜನವರಿ 20- ಭಾರತ vs ಬಾಂಗ್ಲಾದೇಶ
ಜನವರಿ 22- ಭಾರತ vs ಐರ್ಲೆಂಡ್
ಜನವರಿ 28- ಭಾರತ vs ಯುಎಸ್ಎ