Site icon Vistara News

Umesh Yadav: ಅಪ್ಪನಾದ ಉಮೇಶ್​ ಯಾದವ್​; ಹೆಣ್ಣು ಮಗುವಿನೆ ಜನ್ಮ ನೀಡಿದ ಪತ್ನಿ ತಾನ್ಯಾ

Umesh Yadav: Father Umesh Yadav; Wife Tanya gave birth to a baby girl

Umesh Yadav: Father Umesh Yadav; Wife Tanya gave birth to a baby girl

ಮುಂಬಯಿ: ವಿಶ್ವ ಮಹಿಳಾ ದಿನಾಚರಣೆಯಂದೇ(International Women’s Day) ಟೀಮ್​ ಇಂಡಿಯಾದ ವೇಗಿ ಉಮೇಶ್​ ಯಾದವ್ ತಂದೆಯಾದ ಸಂಭ್ರದಲ್ಲಿದ್ದಾರೆ. ಉಮೇಶ್ ಯಾದವ್(Umesh Yadav) ಪತ್ನಿ ತಾನ್ಯಾ ಇಂದು(ಬುಧವಾರ ಮಾರ್ಚ್​ 8) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.​

ಈ ಬಗ್ಗೆ ಉಮೇಶ್ ಯಾದವ್ ಸ್ವತಃ ಟ್ವೀಟ್ ಮಾಡಿದ್ದು, ನಾವು ರೋಮಾಂಚನಗೊಂಡಿದ್ದೇವೆ. ಇಂದು(ಬುಧವಾರ ಮಾರ್ಚ್​ 8) ಬೆಳಗ್ಗೆ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾನ್ಯಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Team India Holi: ಹೋಳಿ ಆಚರಿಸಿದ ಟೀಮ್​ ಇಂಡಿಯಾ

2013 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಉಮೇಶ್ ಯಾದವ್ ಮತ್ತು ತಾನ್ಯಾ ದಂಪತಿಗಳಿಗೆ 2021 ರಲ್ಲಿ ಮೊದಲ ಹೆಣ್ಣು ಮಗು ಜನಿಸಿತ್ತು. ಇದೀಗ ಅವರ ಮನೆಗೆ ಮತ್ತೊಂದು ಹೆಣ್ಣು ಮಗು ಆಗಮನವಾಗಿದೆ. ಇತ್ತೀಚಿಗಷ್ಟೇ ಉಮೇಶ್ ಯಾದವ್ ಅವರ ತಂದೆ ಸಾವನ್ನಪ್ಪಿದ್ದರು. ಈ ನೋವಿನಲ್ಲಿದ್ದ ಅವರ ಮನೆಗೆ ಇದೀಗ ಮಗುವೊಂದು ಬಂದಿರುವುದು ಉಮೇಶ್ ಕುಟುಂಬದ ನೋವನ್ನು ಕೊಂಚ ಕಡಿಮೆ ಮಾಡಿದೆ. ತಂದೆಯಾದ ಉಮೇಶ್​ ಯಾದವ್​ ಸ್ಟ್ರೇಲಿಯಾ ವಿರುದ್ಧ ನಡೆಯುವ ಅಂತಿಮ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

Exit mobile version