ಇಂದೋರ್: ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಅವರು ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿಯ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿರುವ ಉಮೇಶ್ ಯಾದವ್ ಪಂದ್ಯವನ್ನು ಸ್ಮರಣೀಯಗೊಳಿಸಿದ್ದಾರೆ. ಉಮೇಶ್ ಯಾದವ್ ಟೆಸ್ಟ್ನಲ್ಲಿ ತವರು ನೆಲದಲ್ಲಿ 100 ವಿಕೆಟ್ ಪಡೆದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.
ಉಮೇಶ್ ಯಾದವ್ ಸಾಧನೆ ಬಗ್ಗೆ ಬಿಸಿಸಿಐ ಮಾಡಿದ ಟ್ವೀಟ್ ಇಲ್ಲಿದೆ
ಪಂದ್ಯದ ಎರಡನೇ ದಿನ 74 ಓವರ್ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಮೂಲಕ ತವರು ನೆಲದಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಸಾಧನೆ ಮಾಡಿದ ಐದನೇ ವೇಗದ ಬೌಲರ್ ಎನಿಸಿಕೊಂಡರು. ಉಮೇಶ್ ಯಾದವ್ ಈ ಸಾಧನೆ ಮಾಡಲು 4625 ಎಸೆತಗಳನ್ನು ಎಸೆದಿದ್ದಾರೆ.
ಇದನ್ನೂ ಓದಿ : IND VS AUS: ಸಿಕ್ಸರ್ ಬಾರಿಸಿ ರವಿ ಶಾಸ್ತ್ರಿ ದಾಖಲೆ ಮುರಿದ ವೇಗಿ ಉಮೇಶ್ ಯಾದವ್
ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ (219) ತವರಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗಿಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 108 ವಿಕೆಟ್ ಪಡೆದಿರುವ ಜಾವಗಲ್ ಶ್ರೀನಾಥ್ ಎರಡನೇ ಸ್ಥಾನದಲ್ಲಿದ್ದರೆ, ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ತಲಾ 104 ವಿಕೆಟ್ ಕಬಳಿಸಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ವೇಗದ ಬೌಲರ್ಗಳು.