ಗುವಾಹಟಿ: ಭಾರತ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಉಮ್ರಾನ್ ಮಲಿಕ್(Umran Malik) ತಮ್ಮದೇ ದಾಖಲೆಯನ್ನು ಮುರಿದ್ದಾರೆ. ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಗಂಟೆಗೆ 156 ಕಿ.ಮೀ ವೇಗದಲ್ಲಿ ಬಾಲ್ ಎಸೆಯುವ ಮೂಲಕ ಭಾರತದ ಪರ ಅತಿ ವೇಗದ ಬಾಲ್ ಎಸೆದು ತಮ್ಮದೇ ದಾಖಲೆಯನ್ನು ತಿದ್ದಿ ಬರೆದಿದ್ದಾರೆ.
ಇದಕ್ಕೂ ಮುನ್ನ ಉಮ್ರಾನ್ ಮಲಿಕ್ ಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 155 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿ ದಾಖಲೆ ನಿರ್ಮಿಸಿದ್ದರು. ಇದೀಗ ತನ್ನದೇ ದಾಖಲೆಯನ್ನು ಮುರಿದಿದ್ದಾರೆ.
ಐಪಿಎಲ್ನಲ್ಲಿ ತಮ್ಮ ವೇಗದ ಎಸೆತದಿಂದ ಗುರುತಿಸಿಕೊಂಡಿದ್ದ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ವೇಳೆ ಗಂಟೆಗೆ 155 ಕಿಲೋಮೀಟರ್ ವೇಗದಲ್ಲಿ ಬಾಲ್ ಎಸೆದು ದಾಖಲೆ ನಿರ್ಮಿಸಿದ್ದರು. ಈ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದಿದ್ದರು.
ಜಸ್ಪ್ರೀತ್ ಬುಮ್ರಾ, 153.36 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದು ಭಾರತೀಯ ಬೌಲರ್ ಒಬ್ಬನ ದಾಖಲೆಯಾಗಿತ್ತು. ಆದರೆ ಇದನ್ನು ಟಿ20 ಸರಣಿಯಲ್ಲಿ ಉಮ್ರಾನ್ ಮಲಿಕ್ ಮುರಿದಿದ್ದರು. ಇದೀಗ 156 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿ ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿದ್ದಾರೆ. ಮಲಿಕ್, ಬುಮ್ರಾ ಹೊರತುಪಡಿಸಿ ಮೊಹಮ್ಮದ್ ಶಮಿ 153.3 ಕಿ.ಮೀ , ನವದೀಪ್ ಸೈನಿ 152.85 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | IND VS SL | ಚಿರತೆ ವೇಗದಲ್ಲಿ ಜಿಗಿದು ಕ್ಯಾಚ್ ಹಿಡಿದ ಇಶಾನ್ ಕಿಶನ್; ವಿಡಿಯೊ ವೈರಲ್!