Site icon Vistara News

Virat kohli | ವಿರಾಟ್ ಕೊಹ್ಲಿಯ ಹೋಟೆಲ್ ರೂಮ್‌ಗೆ ಅನಧಿಕೃತ ಪ್ರವೇಶ, ಕ್ರಿಕೆಟಿಗ ಹಾಗೂ ಪತ್ನಿ ಕೆಂಡಾಮಂಡಲ

virat kohli

ಪರ್ತ್‌ : ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿಯ (Virat kohli) ಹೋಟೆಲ್‌ ಕೊಠಡಿಗೆ ನುಗ್ಗಿದ ಅಭಿಮಾನಿಯೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ವಿಚಾರ ಗಂಭೀರ ರೂಪ ಪಡೆಯುತ್ತಿದೆ. ಅಭಿಮಾನಿಯ ಕುಕೃತ್ಯಕ್ಕೆ ವಿರಾಟ್‌ ಕೊಹ್ಲಿಯೇ ಕ್ರೋಧ ವ್ಯಕ್ತಪಡಿಸಿದ್ದು ಅವರ ಪತ್ನಿ ಅನುಷ್ಕಾ ಶರ್ಮ ಕೂಡ ಭಯಂಕರ ಸಿಟ್ಟಿಗೆದ್ದಿದ್ದಾರೆ.

ಭಾನುವಾರ ಭಾರತ ತಂಡ ಪರ್ತ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಂಡಿತ್ತು ಈ ವೇಳೆ ಕಿಲಾಡಿಯೊಬ್ಬ ವಿರಾಟ್‌ ಕೊಹ್ಲಿಯ ಹೋಟೆಲ್‌ ರೂಮ್‌ ಅನುಮತಿ ಇಲ್ಲದೆ ನುಗ್ಗಿದ್ದಾನೆ. ಅಲ್ಲದೆ, ವಿರಾಟ್‌ ಕೊಹ್ಲಿಗೆ ಸಂಬಂಧಿಸಿದ ಎಲ್ಲ ವಸ್ತುಗಳ ವಿಡಿಯೊವನ್ನು ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ”ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಬಯಕೆ ಸಹಜ. ಆ ಭಾವನೆ ನನಗೆ ಅರ್ಥವಾಗುತ್ತದೆ. ಅದನ್ನು ನಾನು ಗೌರವಿಸುತ್ತೇನೆ. ಆದರೆ, ನನ್ನ ಕೊಠಡಿಗೆ ನುಗ್ಗಿ ವಿಡಿಯೊ ಮಾಡುವ ಮೂಲಕ ನನ್ನ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ನನ್ನ ಕೊಠಡಿಯಲ್ಲೇ ಖಾಸಗಿತನ ಎಂಬುದು ಇಲ್ಲ ಎಂದಾದರೆ, ವೈಯುಕ್ತಿಕ ಜಾಗ ಎಲ್ಲಿ ಸಿಗುತ್ತದೆ. ಈ ವಿಡಿಯೊದಿಂದ ನನಗೆ ಖುಷಿಯಾಗಿಲ್ಲ. ದಯವಿಟ್ಟು ಜನರ ವೈಯಕ್ತಿಕ ವಿಚಾರಕ್ಕೆ ಗೌರವ ನೀಡಿ. ಇದು ಮನರಂಜನೆಯ ಸಂಗತಿಯಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಕೊಠಡಿಗೆ ನುಗ್ಗಿ ವಿಡಿಯೊ ಮಾಡಿರುವುದಕ್ಕೆ ಅವರ ಪತ್ನಿ ಅನುಷ್ಕಾ ಶರ್ಮ ಕೆಂಡಾಮಂಡಲರಾಗಿದ್ದಾರೆ. ಕನಿಷ್ಠ ಪ್ರಜ್ಞೆ ಇರುವವರು ಈ ರೀತಿಯ ಕೃತ್ಯ ನಡೆಸುವುದಿಲ್ಲ. ನಿಮ್ಮ ಮನೆಯ ಬೆಡ್‌ರೂಮ್‌ಗೆ ಈ ರೀತಿ ನುಗ್ಗಿದರೆ ಏನು ಅನಿಸಬಹುದು,” ಎಂಬುದಾಗಿ ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್‌ ಡೇವಿಡ್‌ ವಾರ್ನರ್‌ ಕೂಡ ಅಭಿಮಾನಿಯ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ಸ್ಟಾರ್‌ಗಳನೇಕರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Virat Kohli | ದಕ್ಷಣ ಆಫ್ರಿಕಾ ವಿರುದ್ಧ 12 ರನ್​ ಗಳಿಸಿದರೂ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್​ ಕೊಹ್ಲಿ

Exit mobile version