ಮುಂಬಯಿ : ವೆಸ್ಟ್ ಇಂಡೀಸ್ ವಿರುದ್ಧದ ಟಿ೨೦ ಸರಣಿಯ (IND vs WI T20) ಕೊನೇ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯವುದು ಅನುಮಾನ ಕ್ರಿಕೆಟ್ ವೆಬ್‌ಸೈಟ್ ಒಂದು ವರದಿ ಮಾಡಿದೆ. ಭಾರತೀ ಕ್ರಿಕೆಟಿಗರಿಗೆ ಇನ್ನೂ ಅಮೆರಿಕ ವೀಸಾ ಲಭಿಸದ ಕಾರಣ ಈ ಎರಡೂ ಹಣಾಹಣಿಗಳನ್ನು ವಿಂಡೀಸ್ ನೆಲದಲ್ಲಿಯೇ ನಡೆಸಲು ಅಲ್ಲಿನ ಕ್ರಿಕೆಟ್ ಸಮಿತಿ ತೀರ್ಮಾನಿಸಿದೆ.
ಅಮೆರಿಕದಲ್ಲಿ ಕ್ರಿಕೆಟ್‌ಗೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಐಸಿಸಿ ಹಾಗೂ ಬಿಸಿಸಿಐ ಸೇರಿ ವಿಂಡೀಸ್ ವಿರುದ್ಧದ ಸರಣಿಯ ಕೊನೇ ಎರಡು ಪಂದ್ಯಗಳನ್ನು ಪ್ಲೋರಿಡಾದ ಲ್ಯಾಡರ್ ಹಿಲ್ ಸ್ಟೇಡಿಯಮ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ನಿಗದಿಯಂತೆ ಆ ಪಂದ್ಯಗಳು ಆಗಸ್ಟ್ ೬ ಮತ್ತು ೭ರಂದು ನಡೆಯಬೇಕು. ಆದರೆ, ರೋಹಿತ್ ಶರ್ಮ ಬಳಗಕ್ಕೆ ಇನ್ನೂ ಯುಎಸ್ ವೀಸಾ ಸಿಕ್ಕಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್‌ನ ಯಾವುದಾದರೂ ಮೈದಾನದಲ್ಲಿ ಪಂದ್ಯ ನಡೆಸಲು ಬಿಸಿಸಿಐ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | IND vs WI T20 | 2ನೇ ಪಂದ್ಯದ ಗೆಲುವಿಗೆ ಹಳೆ ತಂತ್ರ ಫಲಿಸುವುದೇ?