Site icon Vistara News

Ishan Kishan: ಮತ್ತೆ ಎಡವಟ್ಟು ಮಾಡಿಕೊಂಡು ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಇಶಾನ್​ ಕಿಶನ್​

DY Patil T20 Cup 2024

ಮುಂಬಯಿ: ದೇಶೀಯ ಕ್ರಿಕೆಟ್​ ಕಡೆಗಣಿಸಿ ಉದ್ದಟತನ ತೋರಿದ್ದ ಕಾರಣದಿಂದ ಬಿಸಿಸಿಐ ಕೇಂದ್ರ ವಾರ್ಷಿಕ ಗುತ್ತಿಗೆಯಿಂದ ಹೊರಗುಳಿದಿದ್ದ ಇಶಾನ್ ಕಿಶನ್(Ishan Kishan) ಈಗ ಮತ್ತೊಂದು ಪ್ರಮಾದವೆಸಗಿದ್ದಾರೆ. ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ(DY Patil T20 Cup 2024) ಆಡುವ ಮೂಲಕ ಮತ್ತೆ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಣಜಿ ಆಡುವಂತೆ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಸಲಹೆ ನೀಡಿದ್ದರೂ ಕೂಡ ಇದನ್ನು ಲೆಕ್ಕಿಸದೆ ಇತ್ತೀಚೆಗೆ ಬರೋಡಾದಲ್ಲಿ ಇಶಾನ್​ ಕಿಶನ್​ ಐಪಿಎಲ್​ ಟೂರ್ನಿಗಾಗಿ ಅಭ್ಯಾಸ ನಡೆಸಿದ್ದರು. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಇಶಾನ್​ ಇದಕ್ಕೆ ಕ್ಯಾರೆ ಎಂದಿರಲಿಲ್ಲ. ಹೀಗಾಗಿ ಅವರನ್ನು ಮತ್ತು ಶ್ರೇಯಸ್​ ಅಯ್ಯರ್​ ಅವರನ್ನು ಕೇಂದ್ರ ಗುತ್ತಿಗೆಯಿಂದ ಕಿಕ್​ ಔಟ್​ ಮಾಡಲಾಗಿತ್ತು.

ಇದೀಗ ಬಿಸಿಸಿಐ ಲೋಗೊ ಇರುವ ಹೆಲ್ಮೆಟ್​ ಧರಿಸಿ ಡಿವೈ ಪಾಟೀಲ್ ಟೂರ್ನಿಯಲ್ಲಿ ಕಣಕ್ಕಿಳಿದದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ದೇಶೀಯ ಕ್ರಿಕೆಟ್​ನಲ್ಲಿ ಆಡುವಾಗ ಯಾವುದೇ ಆಟಗಾರರು ಕೂಡ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸಿ ಆಡುವಂತಿಲ್ಲ. ಒಂದೊಮ್ಮೆ ಈ ಹೆಲ್ಮೆಟ್​ ಧರಿಸಿ ಆಡಿದರೂ ಕೂಡ ಲೋಗೊದ ಮೇಲೆ ಪ್ಲಾಸ್ಟರ್​ ಹಾಕಿ ಆಡಬೇಕು. ಆದರೆ ಇಶಾನ್​ ಈ ಕ್ರಮ ಪಾಲಿಸಲಿಲ್ಲ. ಹೀಗಾಗಿ ಬಿಸಿಸಿಐ ಇಶಾನ್​ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ Hardik Pandya : ಬಿಸಿಸಿಐಗೆ ಕಾಡಿ, ಬೇಡಿ ಗುತ್ತಿಗೆ ಉಳಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?

ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ಗ್ರೌಂಡ್​ ರಿಪೋರ್ಟ್​ ಪ್ರಕಾರ ಏಕದಿನ ವಿಶ್ವಕಪ್​ ಸೋಲಿನ ಬಳಿಕ ಇಶಾನ್​ ಕಿಶನ್​ ಮಾನಸಿಕವಾಗಿ ಆಯಾಸಗೊಂಡಿರುವುದು ನಿಜ ಎಂದು ತಿಳಿಸಿತ್ತು. ಇದೇ ಕಾರಣದಿಂದ ಇಶಾನ್​ ಕಳೆದ ಒಂದು ತಿಂಗಳಿನಿಂದ ಬರೋಡಾದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಶಾನ್ ಅವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲೆಂದೇ ಬರೋಡಾದಲ್ಲಿ 2BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿರುವುದು.

ಇಶಾನ್​ ಕಿಶನ್​ ಅವರು ಬರೋಡಾದಲ್ಲಿ ಬಾಡಿಗೆ ಪಡೆದಿರುವ ಫ್ಲಾಟ್​ನಲ್ಲಿ ತಮ್ಮ ಕುಟುಂಬದ ಜತೆಗಿದ್ದಾರೆ ಎನ್ನುದಕ್ಕೆ ಹಲವು ಫೋಟೊಗಳು ಕೂಡ ಸಾಕ್ಷಿಯಾಗಿತ್ತು. ಇಶಾನ್​ ಅವರು ತಮ್ಮ ಸಹೋದನ ಮಕ್ಕಳು ಮತ್ತು ತಾಯಿದೊಂದಿರುವ ಫೋಟೊಗಳು ವೈರಲ್​ ಆಗಿತ್ತು.

Exit mobile version