Site icon Vistara News

INDvsPAK | ರಮೀಜ್‌ ರಾಜಾಗೆ ಖಡಕ್‌ ಉತ್ತರ ಕೊಟ್ಟ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌

indvspak

ಮುಂಬಯಿ : ಭಾರತದ ಕ್ರೀಡಾ ಕ್ಷೇತ್ರದ ಪ್ರಗತಿ ಹಾಗೂ ಬಿಸಿಸಿಐ ಸಂಪತ್ತಿನ ಕುರಿತು ಅಸೂಯೆ ಹೊಂದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದೆ. ಜತೆಗೆ ವಿಶ್ವದ ಬಲಿಷ್ಠ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐಗೆ ಸವಾಲೆಸೆಯುವ ಕೃತ್ಯವನ್ನೂ ಆರಂಭಿಸಿದೆ. ಅಂತೆಯೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರಾದ ರಮೀಜ್‌ ರಾಜಾ ಅವರು, ಭಾರತ ತಂಡ ಪಾಕಿಸ್ತಾನಕ್ಕೆ ಕ್ರಿಕೆಟ್‌ ಅಡಲು ಬರದೇ ಹೋದರೆ ನಾವು ನಮ್ಮ ತಂಡವನ್ನು ಏಕ ದಿನ ವಿಶ್ವ ಕಪ್‌ಗಾಗಿ ಭಾರತಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಅದಾಗಲೇ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಖಡಕ್‌ ಉತ್ತರಗಳನ್ನು ಕೊಟ್ಟಿದ್ದಾರೆ. ಇದೀಗ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್‌ ಠಾಕೂರ್‌ ಅವರು ರಮೀಜ್‌ಗೆ ನೇರ ಮಾತಿನ ಪ್ರತ್ಯುತ್ತ ಕೊಟ್ಟಿದ್ದಾರೆ.

ಪಾಕಿಸ್ತಾನದ ಅತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಟೀಮ್‌ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಕೆಲವು ದಿನಗಳ ಹಿಂದೆ ಹೇಳಿಕೆ ಕೊಟ್ಟಿದ್ದರು. ಅದನ್ನು ಸಹಿಸದ ಪಿಸಿಬಿ ಮುಖ್ಯಸ್ಥ ರಮೀಜ್‌ ಅವರು, ಹಾಗಾದರೆ ನಾವು ಭಾರತಕ್ಕೆ ನಮ್ಮ ತಂಡವನ್ನೂ ಕಳುಹಿಸುವುದಿಲ್ಲ ಎಂದು ಹೇಳಿತ್ತು.

ಈ ಬಗ್ಗೆ ಶನಿವಾರ ಪತ್ರಕರ್ತರು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು “ಸೂಕ್ತ ಕಾಲಕ್ಕೆ ಕಾಯಿರಿ. ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಜಾಗತಿಕ ಕ್ರೀಡಾ ಕ್ಷೇತ್ರದ ಸೂಪರ್‌ ಪವರ್‌ ಎನಿಸಿಕೊಳ್ಳಲಿದೆ. ಆಗ ಯಾರೂ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ,” ಎಂಬುದಾಗಿ ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ರಮೀಜ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅದೇ ರೀತಿ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ ಸಭೆಯೂ ನಡೆದಿಲ್ಲ. ಹೀಗಾಗಿ ತಟಸ್ಥ ಜಾಗಕ್ಕೆ ಟೂರ್ನಿಯನ್ನು ಸ್ಥಳಾಂತರ ಮಾಡುವ ಮಾಹಿತಿ ಪ್ರಕಟಗೊಂಡಿಲ್ಲ.

ಇದನ್ನೂ ಓದಿ | Team India | ರಾಜಾ, ನೀವು ಬರದಿದ್ದರೆ ನಮಗೇನೂ ಆಗುವುದಿಲ್ಲ; ಪಾಕ್‌ಗೆ ತಿರುಗೇಟು ಕೊಟ್ಟ ಅಭಿಮಾನಿಗಳು!

Exit mobile version