Site icon Vistara News

Love Jihad : ಲವ್ ಜಿಹಾದ್; ಕ್ಷಮೆ ಕೋರಿದ ಗುಜರಾತ್​ ತಂಡದ ವೇಗದ ಬೌಲರ್​ ಯಶ್​ ದಯಾಳ್​​!

Yash Dayal

#image_title

ಅಹಮದಾಬಾದ್​: ಐಪಿಎಲ್​ 2023ನೇ ಆವೃತ್ತಿಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಬ್ಯಾಟರ್​ ರಿಂಕು ಸಿಂಗ್​ ಗುಜರಾತ್​ ಟೈಟನ್ಸ್ ವಿರುದ್ಧದ ಪಂದ್ಯದ ಕೊನೇ ಓವರ್​​ನಲ್ಲಿ ಸತತವಾಗಿ ಆರು ಸಿಕ್ಸರ್​ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಹೆಚ್ಚು ಟೀಕೆಗೆ ಒಳಗಾದವರು ಗುಜರಾತ್​ ತಂಡದ ಬೌಲರ್​ ಯಶ್​ ದಯಾಳ್​. ಈ ಎಡಗೈ ಬೌಲರ್​ ಯಾವುದೇ ರೀತಿ ಚೆಂಡೆಸೆದರೂ ರಿಂಕು ಸಿಂಗ್ ಅದನ್ನು ಉಡೀಸ್ ಮಾಡಿದ್ದರು. ರಿಂಕು ಸಿಂಗ್​ ಕೊನೇ ಸಿಕ್ಸರ್ ಬಾರಿಸಿದ ಬಳಿಕ ದಯಾಳ್​ ಮುಖಮುಚ್ಚಿಕೊಂಡು ಮೈದಾನದಲ್ಲೇ ಬೇಸರದಲ್ಲಿ ಕುಳಿತಿದ್ದರು. ಅಂಥದ್ದೇ ಒಂದು ಅವಮಾನಕರ ಸಂದರ್ಭಕ್ಕೆ ಮತ್ತೆ ಈ ಬೌಲರ್​ ಒಳಗಾಗಿದ್ದಾರೆ. ಆದರೆ, ಈ ಬಾರಿ ಅದರು ಕ್ರೀಡೆಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸೋಶಿಯಲ್​ ಮೀಡಿಯಾ ಬಳಕೆ ಬಗೆಗಿನ ನಿರ್ಲಕ್ಷ್ಯದಿಂದ ಉಂಟಾಗಿರುವುದು. ಆದರೆ, ತಮ್ಮಿಂದ ತಪ್ಪಾಗಿದೆ ಎಂದು ಗೊತ್ತಾದ ತಕ್ಷಣ ಅವರು ಎಲ್ಲರ ಕ್ಷಮೆ ಕೋರಿದ್ದಾರೆ.

ಇತ್ತೀಚೆಗೆ ನವ ದೆಹಲಿಯಲ್ಲಿ ಭೀಕರ ಕೊಲೆಯೊಂದು ನಡೆದಿತ್ತು. ಸಾಹಿಲ್​ ಎಂಬ ಇಸ್ಲಾಂ ಧರ್ಮಕ್ಕೆ ಸೇರಿದ್ದ ಯುವಕ ಸಾಕ್ಷಿ ಎಂಬ ಹಿಂದ ಧರ್ಮದ ಬಾಲಕಿಯನ್ನು ಹಲವು ಬಾರಿ ಚುಚ್ಚಿ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. ಇದು ಪ್ರೇಮ ಪ್ರಸಂಗ, ಮೋಸದ ಗಲಾಟೆ ಎಂಬೆಲ್ಲ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಲವ್​ ಜಿಹಾದ್ (Love Jihad) ಪ್ರಕರಣ ಎಂಬುದಾಗಿ ಸುದ್ದಿಯಾದವು. ಭಾರತದಲ್ಲಿ ಮುಸ್ಲಿಮರು ಹಿಂದು ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ನಾನಾ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಯಿತು. ಅಲ್ಲದೆ, ಲವ್​ ಜಿಹಾದ್​​ಗೆ ಬಿದ್ದ ಹುಡುಗಿಯರ ಭವಿಷ್ಯ ನಾಶ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಕಾರ್ಟೂನ್​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯಶ್​ ದಯಾಳ್​ ಈ ಕಾರ್ಟೂನ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುವ ಮೂಲಕ ಟೀಕೆಗೆ ಒಳಗಾದರು. ತಕ್ಷಣ ಎಚ್ಚೆತ್ತುಕೊಂಡ ಅವರು ತಮ್ಮ ಪೋಸ್ಟ್ ಡಿಲೀಟ್​ ಮಾಡಿ ಕ್ಷಮೆ ಕೋರಿದ್ದಾರೆ.

ಯಶ್ ದಯಾಳ್​ ಅವರು ಫೋಸ್ಟ್​ ಅಳಿಸುವ ಮೊದಲು ಟ್ವಿಟರ್​​ನಲ್ಲಿ ಅನೇಕ ಬಳಕೆದಾರರು ಅದರ ಸ್ಕ್ರೀನ್​ಶಾಟ್​ ತೆಗೆದಿಟ್ಟುಕೊಂಡು ಕಾಮೆಂಟ್​ ಮಾಡಿದ್ದಾರೆ. ಕೆಲವರು ಬಿಸಿಸಿಐ ಮತ್ತು ಗುಜರಾತ್​ ಟೈಟನ್ಸ್ ತಂಡಕ್ಕೆ ಅದನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ : ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಪಾಕಿಸ್ತಾನ ಕ್ರಿಕೆಟಿಗರು!

ತಕ್ಷಣ ಎಚ್ಚೆತ್ತುಕೊಂಡ ದಯಾಳ್​ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಬಂಧುಗಳೇ ತಪ್ಪಾಗಿ ಪೋಸ್ಟ್ ಮಾಡಿದ್ದಕ್ಕೆ ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ದ್ವೇಷವನ್ನು ಹರಡಬೇಡಿ. ಧನ್ಯವಾದಗಳು. ಪ್ರತಿಯೊಂದು ಸಮುದಾಯ ಮತ್ತು ಸಮಾಜದ ಬಗ್ಗೆ ಗೌರವ ಹೊಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

25 ವರ್ಷದ ಯಶ್​ ದಯಾಳ್ ದೇಶೀಯ ಕ್ರಿಕೆಟ್​ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ ಹರಾಜಿನಲ್ಲಿ ಅವರನ್ನು ಜಿಟಿ ಫ್ರಾಂಚೈಸಿ 3.2 ಕೋಟಿ ರೂ.ಗೆ ಖರೀದಿ ಮಾಡಿದೆ.

Exit mobile version