Site icon Vistara News

Urvashi Rautela: ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ ರೌಟೇಲಾ; ವಿಡಿಯೊ ವೈರಲ್​

Urvashi Rautela: Actress Urvashi Rautela got angry for questioning about Pant; The video is viral

Urvashi Rautela: Actress Urvashi Rautela got angry for questioning about Pant; The video is viral

ಮುಂಬಯಿ: ಕಾರು ಅಪಫಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್​ ಇಂಡಿಯಾ(team india cricket) ಕ್ರಿಕೆಟಿಗ ರಿಷಭ್​ ಪಂತ್(Rishabh Pant)​ ಬಗ್ಗೆ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಖಡಕ್​ ಉತ್ತರ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಂಬಯಿಯಲ್ಲಿ ನಡೆದ ಸಿನೆಮಾ ಕಾರ್ಯಕ್ರಮವೊಂದರಲ್ಲಿ ನಟಿ ಊರ್ವಶಿ ರೌಟೇಲಾ ಪಾಲ್ಗೊಂಡಿದ್ದರು. ಇದೇ ವೇಳೆ ಸಂದರ್ಶಕರೊಬ್ಬರು ರಿಷಭ್​ ಪಂತ್​ ಅವರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿದ್ದಾರೆ. ಅಪಘಾತ ನಡೆದ ವೇಳೆ ನೀವು ಕೂಡ ಅವರ ಚೇತರಿಕೆಗೆ ಪ್ರಾರ್ಥಿಸಿ ಹಾರೈಸಿದ್ದೀರಿ. ಆ ಬಳಿಕ ನೀವು ಪಂತ್​ಗೆ ಸಂದೇಶ ಅಥವಾ ಫೋನ್​ ಕರೆ ಏನಾದರೂ ಮಾಡಿದ್ದೀರ? ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ಕೊಂಚ ಖಾರವಾಗಿಯೇ ಉತ್ತರಿಸಿದ ಊರ್ವಶಿ ರೌಟೇಲಾ, ನಿಮಗೆ ಬೇಕಿರುವುದು ಏನು? ನಿಮಗೆ ಬೇಕಿರುವುದು ಟಿಆರ್​ಪಿ ಅಷ್ಟೆ. ಆದರೆ ನಾನು ಟಿಆರ್​ಪಿಯ ವಸ್ತುವಾಗಲು ಇಷ್ಟ ಪಡುವುದಿಲ್ಲ ಎಂದು ಖಡಕ್ ಆಗಿ​ ಮರು ಉತ್ತರ ನೀಡಿ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೊ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

ಪಂತ್​ ದೇಶದ ಆಸ್ತಿ

ಕೆಳ ತಿಂಗಳುಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಬ್ಬರು ಪಂತ್​ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಊರ್ವಶಿ ರೌಟೇಲಾ “ಪಂತ್​ ಈ ದೇಶದ ಆಸ್ತಿ” ಎಂದು ಹೇಳಿದ್ದರು. ಆದರೆ ಈ ಬಾರಿ ಟಿಆರ್​ಪಿಗೋಸ್ಕರ ತಾವು ಈ ವಿಷಯವನ್ನು ತನ್ನ ಬಳಿ ಪದೇಪದೆ ಕೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಒಂದರ್ಥದಲ್ಲಿ ಅವರು ಹೇಳಿರುವುದು ಸರಿಯಾಗಿದೆ. ಏಕೆಂದರೆ ಪತ್ರಿ ಬಾರಿಯು ಒಂದೇ ವಿಚಾರವನ್ನು ಕೇಳಿ ಹಿಂಸೆ ನೀಡುತ್ತಿದ್ದರೆ ಯಾರಾದರೂ ಕೂಡ ತಮ್ಮ ತಾಳ್ಮೆ ಕಳೆದುಕೊಳ್ಳುವುದು ಸಹಜ. ಇದೇ ಕಾರಣಕ್ಕೆ ರೌಟೇಲಾ ಈ ಬಾರಿ ಖಡಕ್​ ಉತ್ತರ ನೀಡಿದಂತೆ ಭಾಸವಾಗುತ್ತಿದೆ.

Exit mobile version