ನವ ದೆಹಲಿ : ಬಾಲಿವುಡ್ ನಟಿ ಊರ್ವಶಿ ರೌಟೆಲಾ (Urvashi Rautela) ಹಾಗೂ ಕ್ರಿಕೆಟರ್ ರಿಷಭ್ ಪಂತ್ ನಡುವಿನ ಸೋಶಿಯಲ್ ಮೀಡಿಯಾ ಸಮರ ಕೊನೆಯಾದಂತೆ ತೋರುತ್ತಿದ್ದು, ಸಂದರ್ಶನವೊಂದರಲ್ಲಿ ನಟಿ ಕೈ ಮುಗಿದು ಕ್ಷಮೆ ಕೋರಿದ್ದಾರೆ. ಇನ್ನು ಮುಂದೆ ಮೂರ್ಖತನ ಮಾಡಲ್ಲ. ನೇರ ಮಾತಷ್ಟೇ ಎಂಬುದಾಗಿಯೂ ನುಡಿದಿದ್ದಾರೆ.
ರಿಷಭ್ ಪಂತ್ ಹಾಗೂ ಊರ್ವಶಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಶೀತಲ ಸಮರ ನಡೆಸಿದ್ದರು. ಗಲಾಟೆಯನ್ನು ಆರಂಭಿಸಿದ್ದು ಊರ್ವಶಿ. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ, ಆರ್‌ಪಿ ಎಂಬುವರು ನನಗೆ ಹೋಟೆಲ್ ಲಾಬಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು ಎಂದು ಹೇಳಿದ್ದರು. ಫೋನ್ ನೋಡುವಾಗ ಹಲವು ಮಿಸ್ಡ್ ಕಾಲ್‌ಗಳು ಇರುತ್ತಿದ್ದವು ಎಂದು ಹೇಳಿದ್ದರು.
ಊರ್ವಶಿ ರೌಟೆಲಾ ಹಾಗೂ ರಿಷಭ್ ಪಂತ್ ಡೇಟಿಂಗ್‌ನಲ್ಲಿದ್ದರು ಎಂಬುದಾಗಿ ಆ ಹಿಂದೆ ಸುದ್ದಿ ಹರಡಿದ್ದವು. ಹೀಗಾಗಿ ಆರ್‌ಪಿ ಎಂದರೆ ರಿಷಭ್ ಪಂತ್ ಎಂದೇ ಅಭಿಮಾನಿಗಳು ಊಹೆ ಮಾಡಿದ್ದರು. ತಕ್ಷಣವೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ರಿಷಭ್, ಹೆಸರು ಗಳಿಸಲು ಬಾಯಿಗೆ ಬಂದದ್ದನ್ನೆಲ್ಲ ಮಾತನಾಡಬಾರದು ಎಂದು ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಊರ್ವಶಿ “ಬ್ಯಾಟ್ ಮತ್ತು ಬಾಲ್‌ನಲ್ಲಿ ಮಾತ್ರ ಆಡು ಮಗುವೆ. ನಿನ್ನಿಂದ ಕೆಟ್ಟು ಹೋಗುವುದಕ್ಕೆ ನಾನು ಮುನ್ನಿ ಅಲ್ಲ,” ಎಂದಿದ್ದರು. ಒಟ್ಟಾರೆಯಾಗಿ ಅವರಿಬ್ಬರ ಜಗಳ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿತ್ತು.
ಇದೀಗ ಊರ್ವಶಿ ಪಂತ್ ಕ್ಷಮೆ ಕೋರಿದ್ದಾರೆ. ಸಿನಿಮಾ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೈ ಮುಗಿದು ಕ್ಷಮೆ ಕೋರಿದ್ದಾರೆ. “ಇನ್ನು ಮುಂದೆ ನೇರ ಮಾತು. ಮೂರ್ಖತನವಿಲ್ಲ. ಹೀಗಾಗಿ ನಾನು ಯಾವುದೇ ತಪ್ಪುಗಳನ್ನು ಮಾಡುತ್ತಿಲ್ಲ,” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Urvashi Rautela | ಮುಂದುವರಿದ ಪಂತ್, ರೌತೆಲಾ ರಗಳೆ, ಬದ್ನಾಮ್ ಆಗಲು ನಾನೇನೂ ಮುನ್ನಿಯಲ್ಲ ಎಂದ ನಟಿ