ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್(Rishabh Pant) ಅವರನ್ನು ದೇಶದ ಆಸ್ತಿ ಎಂದು ನಟಿ ಊರ್ವಶಿ ರೌಟೇಲಾ(urvashi Rautela) ಹೊಗಳಿದ್ದಾರೆ.
ಕಳೆದ ವಾರ ರಿಷಭ್ ಪಂತ್ ಅವರು ಕಾರು ಅವಘಡದ ಬಳಿಕ ಮೊದಲ ಬಾರಿಗೆ ತಮ್ಮ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸದ್ಯ ಸುಧಾರಣೆಯ ಹಾದಿಯಲ್ಲಿದ್ದು ಊರುಗೋಲು ಸಹಾಯದಿಂದ ನಡೆಯುವ ಫೋಟೊವನ್ನು ಅವರು ಶೇರ್ ಮಾಡಿದ್ದರು.
One step forward, One step stronger, One step better (ಒಂದು ಹೆಜ್ಜೆ ಮುಂದಕ್ಕೆ, ಒಂದು ಬಲವಾದ ಹೆಜ್ಜೆ, ಒಂದು ಉತ್ತಮ ಹೆಜ್ಜೆ) ಎಂದು ರಿಷಭ್ ಪಂತ್ ಟ್ವೀಟ್ ಮಾಡುವ ಮೂಲಕ ಅಪಘಾತದ ಗಾಯಗಳಿಂದ ಸುಧಾರಿಸಿಕೊಳ್ಳುತ್ತಿರುವುದಾಗಿ ತಮ್ಮ ಹಿತೈಷಿಗಳಿಗೆ ಮಾಹಿತಿ ನೀಡಿದ್ದರು.
ಪಂತ್ ಅವರು ಊರುಗೋಲಿನಿಂದ ನಡೆಯುತ್ತಿರುವ ಫೋಟೊ ಕಂಡ ಬಳಿಕ ಕ್ರಿಗೆಟಿಗ ಸೂರ್ಯಕುಮಾರ್ ಯಾದವ್, ಮಾಡೆಲ್ ಇಶಾ ನೇಗಿ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಯಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಸೇರಿದಂತೆ ಹಲವರು ಚೇತರಿಕೆಗೆ ಹಾರೈಸಿದ್ದರು. ಆದರೆ ಊರ್ವಶಿ ರೌಟೇಲಾ ಮಾತ್ರ ಯಾವುದೇ ಪ್ರತಿಕ್ರಿಕೆ ನೀಡಿರಲಿಲ್ಲ.
ಇದನ್ನೂ ಓದಿ Rishabhh Pant : ಅಪಘಾತದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್
ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಊರ್ವಶಿ ರೌಟೇಲಾ ಬಳಿ ಪತ್ರಕರ್ತರೊಬ್ಬರು ರಿಷಭ್ ಪಂತ್ ಬಗ್ಗೆ ಕೇಳಿದ್ದಾರೆ. ಇದೇ ವೇಳೆ ಅವರು ಈ ಪ್ರಶ್ನೆಗೆ ಉತ್ತರಿಸಿ “ಪಂತ್ ಈ ದೇಶದ ಆಸ್ತಿ” ಎಂದು ಹೇಳಿದ್ದಾರೆ. ಪಂತ್ ಅವರು ಅಪಘಾತಗೊಂಡ ವೇಳೆಯೂ ರೌಟೇಲಾ ಅವರು ಶೀಘ್ರ ಚೇತರಿಕೆ ಕಾಣುವಂತೆ ಪ್ರಾರ್ಥಿಸಿ ಟ್ವೀಟ್ ಮಾಡಿದ್ದರು.